Advertisement

ಕಣ್ಣಿಗೆ ಕಾಣದ ಓ ವೈರಸ್.. ನಿನಗೊಂದು ಬಹುಪರಾಕ್!

06:15 PM Jun 22, 2020 | Hari Prasad |

ಕಣ್ಣಿಗೆ ಕಾಣದೆ
ಮಳೆ, ಗಾಳಿ, ಬಿಸಿಲಿನ್ನು ಲೆಕ್ಕಿಸದೆ ನಿಶ್ಯಬ್ದವಾಗಿ
ಜಗತ್ತಿನಾದ್ಯಂತ ಹಬ್ಬಿದ
ನಿನ್ನ ಛಲ ಮೆಚ್ಚಲೇಬೇಕು
ಕೋವಿಡ್..

Advertisement

ಮಸೀದಿ, ಮಂದಿರ, ಚರ್ಚ್ ಗಳ ತಂಟೆಗೆ ಹೋದರೆ ಸರಕಾರವೇ ಬೀಳುತ್ತಿತ್ತು,
ರಕ್ತದ ಕೋಡಿ ಹರಿಯುತ್ತಿತ್ತು,
ಒಂದು ಮಾತನಾಡದೆ
ಅವುಗಳನ್ನು ಮುಚ್ಚಿಸಿ
ದೇವರು ಎಲ್ಲಾ ಕಡೆ ಇದ್ದಾನೆಂದು ತೋರಿಸಿದ ನಿನ್ನ
ರೀತಿಗೆ ಎಲ್ಲರೂ
ಮೆಚ್ಚಲೆಬೇಕು ಕೋವಿಡ್..

ಎಲ್ಲಾ ಟಿವಿಗಳಲ್ಲಿ ಭಯ
ಹುಟ್ಟಿಸುವ ಭವಿಷ್ಯಕಾರರನ್ನು
ಮೂಲೆ ಗುಂಪು ಮಾಡಿದ
ನಿನ್ನ ಚಾಣಾಕ್ಷತನಕ್ಕೆ ಮೆಚ್ಚಲೇಬೇಕು ಕೋವಿಡ್..

ಒಂದು ತಿಂಗಳು ಮದ್ಯಪಾನ ಇಲ್ಲದೆ ಇರಬಹುದೆಂದು ತೋರಿಸಿಕೊಟ್ಟು,
ನಂತರ
ಮುಜರಾಯಿ ತೀರ್ಥಕ್ಕಿಂತ
ಅಬಕಾರಿ ತೀರ್ಥವೇ ಮೇಲೆಂದು ತಿಳಿಸಿದ
ನಿನ್ನನ್ನು ಮೆಚ್ಚಲೇಬೇಕು ಕೋವಿಡ್..

ಅದ್ದೂರಿತನಕ್ಕೆ ಕಡಿವಾಣ ಹಾಕಿ,
ಮದುವೆಗಳನ್ನು 50 ಜನರನ್ನ ಮಾತ್ರ ಸೇರಿಸಿ
ಸರಳವಾಗಿ, ಅರ್ಥಪೂರ್ಣವಾಗಿ
ಮಾಡಬಹುದು ಎಂದು ತೋರಿಸಿಕೊಟ್ಟ ನಿನ್ನ ಪರಿಯನ್ನ ಎಲ್ಲರೂ
ಮೆಚ್ಚಲೇಬೇಕು ಕೋವಿಡ್..

Advertisement

ಸತ್ತರೆ ಯಾರು ಹಿಂದೆ ಬರಲ್ಲ
ಅಂತ ತಿಳಿಸಿ
ಅಂತ್ಯ ಸಂಸ್ಕಾರಕ್ಕೆ
ನಿಜವಾದ
ದುಃಖತಪ್ತರು 20 ಜನರು ಸಾಕು
ಎಂದು ಅರ್ಥೈಸಿದ ನಿನ್ನ ರೀತಿಯನ್ನ
ಮೆಚ್ಚಲೇಬೇಕು ಕೋವಿಡ್..

ಮಾಲ್, ಮಲ್ಟಿಪ್ಲೆಕ್ಸ್, ಪಬ್
ಕ್ಲಬ್ ಮುಚ್ಚಿ
ಬಸ್ , ರೈಲು, ವಿಮಾನಗಳಿಲ್ಲದೆ
ಸಿನೆಮಾ ನಾಟಕ ಬಿಟ್ಟು
ಮನೆಯವರ ಜೊತೆಗೆ ಸುಖವಾಗಿ ಇರಬಹುದೆಂದು ತೋರಿಸಿ ಕೊಟ್ಟ ನಿನ್ನ ಪ್ರೀತಿ ಮೆಚ್ವಲೆಬೇಕು
ಕೋವಿಡ್..

ಮಾರ್ಕ್ಸ್ ಪಡೆಯುವುದೆ
ಜೀವನವಲ್ಲ..
ನಿಜವಾದ ಪಾಠಶಾಲೆ ಜೀವನಾನುಭವ ,
ನಮ್ಮ ಅಂತರಾತ್ಮವೇ ನಿಜವಾದ
ಪರೀಕ್ಷೆಯ ಕೊಠಡಿ ಎಂದು ತೋರಿಸಿದ ಚಾಣಕ್ಯನ ನೀತಿ
ಮೆಚ್ಚಲೇಬೇಕು ಕೋವಿಡ್..

ಊರು ಬಿಟ್ಟುಎಲ್ಲೇಲ್ಲೋ ಹೋದವರನ್ನು ಮತ್ತೆ ಕರೆಯಿಸಿ
ಹುಟ್ಟಿದ ಊರು, ಒಕ್ಕಲುತನ
ಹೊಟ್ಟೆಗೆ ಅನ್ನ ಹಾಕುತ್ತೇವೆಂದು
ತಿಳಿಸಿದ ನಿನ್ನ ಮಹಿಮೆ
ಮೆಚ್ಚಲೇಬೇಕು
ಕೋವಿಡ್..

ಎಷ್ಟು ಆಸ್ತಿ ,ಬಂಗಾರ ಇದ್ದರೂ
ಆರೋಗ್ಯ ಮುಖ್ಯ ,
ಬಡವ, ಶ್ರೀಮಂತ ಯಾರಾದರೂ ಪ್ರಾಣ ಮುಖ್ಯ
ಎಂದು ಮತ್ತೊಮ್ಮೆ ತಿಳಿಸಿದ ನಿನಗೆ ಮೆಚ್ಚಲೇಬೇಕು ಕೋವಿಡ್..

ತಂತ್ರಜ್ಞಾನದಿಂದ
ಎಲ್ಲಾ ಗ್ರಹಗಳನ್ನು ಸುತ್ತಿದರೂ,
ಮನುಷ್ಯ ವಿಜ್ಞಾನದಲ್ಲಿ ಎಷ್ಟೆ ಮುಂದುವರೆದರೂ
ಕಾಲಕ್ಕೆ ಶರಣಾಗಬೇಕೆಂದು
ತಿಳಿಸಿದ ಪರಿ
ಮೆಚ್ಚಲೇಬೇಕು ಕೋವಿಡ್..

ಅಣು ಬಾಂಬ್, ಯುದ್ಧ ವಿಮಾನ, ಟ್ಯಾಂಕರ್ ಗಳು
ಸಾವಿರ ಇದ್ದು, ಮುಂದುವರಿದ ದೇಶವೆಂದು ಮೆರೆಯುತ್ತಿದ್ದರೂ
ಸಾಂಕ್ರಾಮಿಕ ರೋಗಕ್ಕೆ ಶರಣಾಗಬೇಕೆಂದು
ತಿಳಿಸಿದ್ದು
ಮೆಚ್ಚಲೇಬೇಕು ಕೋವಿಡ್..

ಸಸ್ಯಹಾರ ಶ್ರೇಷ್ಠ ಎಂದು ಹೇಳುತಾ
ಪ್ರಕೃತಿಯನ್ನು ಕಾಪಾಡಿದರೆ
ನಾವು ಉಳಿಯುತ್ತೆವೆ
ಎಲ್ಲಾ ಧರ್ಮಗಳು ಪೊಳ್ಳು
ನಿಜವಾದ ಧರ್ಮ ಮನುಜ
ಧರ್ಮವೆಂದು ಹೇಳಿದ್ದು
ಮೆಚ್ಚಲೇಬೇಕು ಕೋವಿಡ್..

ಜಗತ್ತಿನ ಕಹಿ ಸತ್ಯಗಳನ್ನು
ಬಿಡಿ , ಬಿಡಿಯಾಗಿ
ತೋರಿಸಿ ಕೊಟ್ಟು
ಸನ್ಮಾರ್ಗದಿ
ನಡೆಯಿರೆಂದು ಹೇಳಿದ
ನಿನ್ನ ಶಕ್ತಿ ,ಯುಕ್ತಿಯ ಕೋವಿಡ್ ಗೀತ
ಎಲ್ಲರೂ ಮೆಚ್ಚಲೇಬೇಕು ಕೋವಿಡ್….

ಸಾಕಿನ್ನು ಮನುಷ್ಯ ಸುಸ್ತಾಗಿದ್ದಾನೆ. ಬಿಟ್ಟು ಬಿಡು ಬದುಕಲಿ….. ಇನ್ನಾದರೂ ಪಶ್ಚಾತ್ತಾಪದೊಂದಿಗೆ….. ಇಷ್ಟಕ್ಕೂ ಬುದ್ದಿ ಬರಲಿಲ್ಲವೆಂದರೆ………? ಭಗವಂತನ ಆಟ ಬಲ್ಲವರಾರು?????

– ಪ್ರತಿಕ್ಷಾ

Advertisement

Udayavani is now on Telegram. Click here to join our channel and stay updated with the latest news.

Next