Advertisement
ಟಿಎಂಎ ಪೈ ಸಭಾಂಗಣದಲ್ಲಿ ಶನಿವಾರ ಮಂಗಳೂರು ಸಾಹಿತ್ಯ ಉತ್ಸ ವದ ಐದನೇ ಆವೃತ್ತಿಯನ್ನು ಉದ್ಘಾಟಿಸಿ ಅವರು, ಕಳೆದ ಹಲವು ದಶಕಗಳು ನಮ್ಮದಲ್ಲದ ವಿಚಾರಗಳಿಂದ ತುಂಬಿತ್ತು, ಇಂದು ಕಾಲ ಬದಲಾಗಿದೆ. ಐಡಿಯಾ ಆಫ್ ಭಾರತ್ ಮೂಲಕ ದೇಶದ ಇತಿ ಹಾಸ, ಸಾಹಿತ್ಯ, ಕಲೆ, ಸಂಸ್ಕೃತಿಯ ಅನಾ ವರಣ ಸಾಧ್ಯವಾಗುತ್ತಿದೆ ಎಂದರು.
Related Articles
Advertisement
ಅಧ್ಯಕ್ಷತೆ ವಹಿಸಿದ ನಿಟ್ಟೆ ವಿ.ವಿ. ಕುಲಪತಿ ಎನ್.ವಿನಯ ಹೆಗ್ಡೆ ಅವರು ಮಾತನಾಡಿ ಮಂಗಳೂರನ್ನು ಕೆಲವರು ಹಿಂದೆ ನಿರ್ಲಕ್ಷಿಸುತ್ತಿದ್ದರು, ದೂರದಲ್ಲಿ ಕುಳಿತು ದೂರುತ್ತಿದ್ದರು, ಈಗ ಅವರೆ ಲ್ಲರೂ ಮತ್ತೆ ಹಿಂದೆ ಮಂಗಳೂರಿಗೆ ಬರುವಂತಾಗಿದೆ, ಅಷ್ಟರ ಮಟ್ಟಿಗೆ ಗುಣಾತ್ಮಕ ಬದಲಾವಣೆ ಕಾಣುತ್ತಿದೆ, ಹಾಗಾಗಿ ಇಲ್ಲಿ ಸಾಹಿತ್ಯ ಉತ್ಸವ ನಡೆ ಯುತ್ತಿರುವುದು ಸಾರ್ಥಕ ಎಂದರು.
ಆರೋಗ್ಯ, ಶಿಕ್ಷಣ, ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಮಂಗಳೂರು ಸಾಕಷ್ಟು ಮುನ್ನಡೆ ಸಾಧಿಸಿದೆ, ಸೌಹಾರ್ದತೆಗೂ ಇದು ತಾಣವಾಗಿದೆ, ಭಾರತ ವಿಶೇಷ ದೇಶವಾದರೆ ಮಂಗಳೂರು ನನಗೆ ವಿಶೇಷ ಸ್ಥಳ, ಬೇರೆ ಕಡೆ ಇಲ್ಲದ ಅನೇಕ ವಿಚಾರಗಳು ಇಲ್ಲಿವೆ ಎಂದು ಬಣ್ಣಿಸಿದರು.
ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಅಧ್ಯಕ್ಷ ತುಕಾರಾಮ್ ಪೂಜಾರಿ ಅವರಿಗೆ ಲಿಟ್ ಫೆಸ್ಟ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಭಾರತ್ ಫೌಂಡೇಶನ್ ಟ್ರಸ್ಟಿ ಸುನಿಲ್ ಕುಲಕರ್ಣಿ ಸ್ವಾಗತಿಸಿದರು. ಪಲ್ಲಕ್ಕಿಯ ಮೂಲಕ ಪುಸ್ತಕಗಳ ಮೆರವಣಿಗೆಯು ಲಿಟ್ ಫೆಸ್ಟ್ ನಡೆಯುವ ಟಿ.ಎಂ.ಎ ಪೈ ಸಭಾಂಗಣದವರೆಗೂ ನಡೆಯಿತು. ಜಾನಪದ ಕಲಾವಿದೆ ಭವಾನಿ ಅಮ್ಮ ಪೆರ್ಗಡೆ ಅವರು ಪಾಡªನ ಗೀತೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಭಾರತದ ಪ್ರಜಾಪ್ರಭುತ್ವ ಯಶಸ್ವಿ: ಬೆಬೋನ್ಸ್ಭಾರತದ ಜಗತ್ತಿನ ಇತರ ದೇಶಗಳಿಗೆ ಹೋಲಿಸಿದರೆ ಅತ್ಯಂತ ಯಶಸ್ವಿ ಪ್ರಜಾಪ್ರಭುತ್ವ ದೇಶವಾಗಿದೆ ಎಂದು ಆಸ್ಟ್ರೇಲಿಯಾದ ಸಮಾಜ ಶಾಸ್ತ್ರಜ್ಞ ಸಾಲ್ವಟೋರ್ ಬೆಬೋನ್ಸ್ ಹೇಳಿದ್ದಾರೆ. ಗೋಷ್ಠಿಯಲ್ಲಿ ಅವರು ಮಾತನಾಡಿ, ಪಾಶ್ಚಿಮಾತ್ಯ ರಾಷ್ಟ್ರಗಳ ಪ್ರಜಾ ಪ್ರಭುತ್ವದ ರ್‍ಯಾಂಕಿಂಗ್ ಅವೈಜ್ಞಾನಿಕವಾಗಿರುತ್ತದೆ, ಭಾರತದ ಬಗ್ಗೆ ಪಾಶ್ಚಿಮಾತ್ಯರು ನಡೆಸುವ ಧಾರ್ಮಿಕ ಸ್ವಾತಂತ್ರÂ ಕುರಿತ ಶ್ರೇಯಾಂಕ ನೀಡುವಿಕೆಯೂ ಕೂಡ ಅಸಮರ್ಪಕ ಎಂದರು. ನಾನು ಭಾರತದ ವಿಶೇಷ ಜ್ಞನಲ್ಲ, ಆದರೆ ಪ್ರಮಾಣೀಕೃತ ಸಮಾಜಶಾಸ್ತ್ರಜ್ಞ, ಭಾರತದಲ್ಲಿನ ವಿಚಾರಗಳ ಬಗ್ಗೆ ನಾನು ಅಂಕಿ ಅಂಶಗಳ ಆಧಾರದಲ್ಲೇ ವಿಶ್ಲೇಷಿಸುವೆ ಎಂದರು. 16 ವಿಚಾರ ಗೋಷ್ಠಿ
ಮೊದಲ ದಿನ ವಿವಿಧ ವಿಷಯ ತಜ್ಞರು 16 ವಿವಿಧ ವಿಚಾರಗೋಷ್ಠಿ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಸಚಿವ ವಿ.ಸುನಿಲ್ ಕುಮಾರ್, ಶಾಸಕ ಡಾ| ವೈ.ಭರತ್ ಶೆಟ್ಟಿ, ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್, ಚಿತ್ರನಟ ಪ್ರಕಾಶ್ ಬೆಳವಾಡಿ, ಬಿಜೆಪಿ ಸಂಘಟನ ಕಾರ್ಯದರ್ಶಿ ರಾಜೇಶ್ ಸಹಿತ ಹಲವು ಗಣ್ಯರು ಪಾಲ್ಗೊಂಡರು. ರವಿವಾರವೂ ಬೆಳಗ್ಗೆ 10ರಿಂದ ವಿಚಾರಗೋಷ್ಠಿಗಳು ನಡೆಯಲಿದೆ.