Advertisement

ಬೆಂಗಳೂರಿಗರ ಸಾರಿಗೆ ವ್ಯವಸ್ಥೆಗೆ ಯೋಜನೆ ರೂಪಿಸಬೇಕಿದೆ: ಹೊಸ ಬಸ್ ಲೋಕಾರ್ಪಣೆ ಮಾಡಿದ ಸಿಎಂ

12:15 PM Aug 14, 2022 | Team Udayavani |

ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 75 ಎಲೆಕ್ಟ್ರಿಕ್ ಬಸ್ಸುಗಳನ್ನು ಲೋಕಾರ್ಪಣೆ ಮಾಡಿದರು. ವಿಧಾನಸೌಧದ ಮೆಟ್ಟಿಲುಗಳ ಮುಂಭಾಗ ನಡೆದ ಕಾರ್ಯಕ್ರಮದಲ್ಲಿ ಬಸ್ ಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿದರು. ಸಾರಿಗೆ ಸಚಿವ ಶ್ರೀರಾಮುಲು ಭಾಗಿಯಾಗಿದ್ದರು.

Advertisement

ನಂತರ ಮಾತನಾಡಿದ ಸಿಎಂ ಬೊಮ್ಮಾಯಿ‌, ಸಾರಿಗೆ ಅಭಿವೃದ್ಧಿಯ ಅಂಗ. ಸಾರಿಗೆ ಇಲ್ಲದೆ ನಾವು ಜೀವನವನ್ನು ಯೋಚನೆ ಮಾಡಲಾಗದು. ಸರ್ಕಾರಕ್ಕೆ ಸಾರಿಗೆ ಬಗ್ಗೆ ಚಿಂತನೆ ಅವಶ್ಯಕತೆಯಿದೆ. ಗ್ರಾಮೀಣ ಸಾರಿಗೆ ಪ್ರತಿಯೊಂದು ಹಳ್ಳಿಗೂ ಮುಟ್ಟಬೇಕಾಗುತ್ತದೆ ಎಂದರು.

ಬಿಎಂಟಿಸಿಗೆ 25 ವರ್ಷ ತುಂಬಿದೆ. ಬಸ್‌ಗಳ ನಿರ್ವಹಣೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಮೊದಲಿಗೆ ಲಾಭದಾಯಕವಾಗಿದ್ದ ಬಿಎಂಟಿಸಿ ಕೋವಿಡ್‌ನಿಂದ ನಷ್ಟಕ್ಕೀಡಾಗಿದೆ. ಅದನ್ನು ಮತ್ತೆ ಮೇಲೆತ್ತುವ ಕೆಲಸವನ್ನು ಸರ್ಕಾರ ಮಾಡುತ್ತದೆ. ಬಿಎಂಟಿಸಿಯ ಐದು ಸಾವಿರ ವಾಹನಗಳು ಬೆಂಗಳೂರಿನಲ್ಲಿ ಓಡಾಡುತ್ತದೆ. ಬೆಂಗಳೂರಿನ ಜನಸಂಖ್ಯೆ ಬೆಳೆಯುತ್ತಿದೆ. ಬೆಂಗಳೂರಿಗರ ಸಾರಿಗೆ ವ್ಯವಸ್ಥೆಯ ಯೋಜನೆ ರೂಪಿಸಬೇಕಿದೆ. ಬೆಂಗಳೂರಿನ ಬೆಳವಣಿಗೆ ಎಲ್ಲಾ ದಿಕ್ಕುಗಳಲ್ಲೂ ಆಗುವಂತೆ ಸರ್ಕಾರ ಮಾಡಬೇಕಾಗುತ್ತದೆ ಎಂದರು.

ಇಷ್ಟರಲ್ಲೇ ಬೆಂಗಳೂರಿನ ಮೊಬಿಲಿಟಿ ಪ್ಲಾನ್ ಬರುತ್ತದೆ. 2022-23 ಸಾಲಿನಲ್ಲಿ 873 ಕೋಟಿಯನ್ನು ಸರ್ಕಾರ ಬಿಬಿಎಂಪಿಗೆ ನೀಡಿದೆ. ಸರ್ಕಾರ ಸಂಪೂರ್ಣವಾಗಿ ಬಿಎಂಟಿಸಿ ಜೊತೆಗಿದೆ. ಬಿಎಂಟಿಸಿ ಅಭಿವೃದ್ಧಿ ಸಾಕಷ್ಟು ಅವಶ್ಯಕತೆಯಿದೆ. ಕಳೆದ ಮೂರು ವರ್ಷದಲ್ಲಿ 3 ಸಾವಿರ ಕೋಟಿಯನ್ನು ನಮ್ಮ ಸರ್ಕಾರ ಸಾರಿಗೆಗೆ ನೀಡಿದೆ. ಸರ್ಕಾರ ಹೀಗೆ ಎಲ್ಲವನ್ನೂ ನಡೆಸಲು ಆಗುವುದಿಲ್ಲ. ಹಂತಹಂತವಾಗಿ ಶ್ರೀನಿವಾಸ್‌ಮೂರ್ತಿಯವರ ವರದಿಯನ್ನು ಜಾರಿ ಮಾಡುತ್ತೇವೆ. ಸಾರಿಗೆ ಇಲಾಖೆ ಮತ್ತು ಇಂಧನ ಇಲಾಖೆಯನ್ನು ಪುನರ್‌ರಚನೆ ಮಾಡುವ ಅವಶ್ಯಕತೆ ಇದೆ. ಸರ್ಕಾರ ಆ ನಿಟ್ಟಿನಲ್ಲಿ ಕಾರ್ಯ ರೂಪಿಸುತ್ತಿದೆ. ಸಮಸ್ಯೆಗಳನ್ನು ಎದುರಿಸಿ ಪರಿಹಾರ ಕೊಡುವುದು ನನ್ನ ಸರ್ಕಾರದ ಧ್ಯೇಯ ಎಂದರು.

ನನ್ನ ಸರ್ಕಾರದಲ್ಲಿ ಐದು ಸಾವಿರ ಕೋಟಿ ಆದಾಯ ಕಡಿಮೆಯಿತ್ತು. ಬಜೆಟ್ ಗಾತ್ರವನ್ನು ಕಡಿಮೆ ಮಾಡಬೇಕು ಎಂದು ಅಧಿಕಾರಿಗಳು ಹೇಳಿದ್ದರು. ಯಾವ ಯಾವ ಕ್ಷೇತ್ರವನ್ನು ಮುಟ್ಟಬೇಕು ಎಂದು ನಾನು ಅಧಿಕಾರಿಗಳಿಗೆ ಸೂಚಿಸಿದ್ದೆ. ಅದರಿಂದ ನಾವು ನಮ್ಮ ಟಾರ್ಗೆಟ್ ಮೀರಿ 15 ಸಾವಿರ ಕೋಟಿ ಹೆಚ್ಚುವರಿ ಪಡೆದಿದ್ದೇವೆ ಎಂದದು ಸಿಎಂ ಬೊಮ್ಮಾಯಿ ಹೇಳಿದರು.

Advertisement

ಬಿಎಂಟಿಸಿ ಯು ಹೊಸ ಮಾದರಿಯ 75 ಎಲೆಕ್ಟ್ರಿಕ್ ಬಸ್ಸುಗಳನ್ನು ರಸ್ತೆಗಿಳಿಸಿದೆ. ಸ್ವಿಚ್ ಮೊಬಿಲಿಟಿ ಲಿಮಿಟೆಡ್ ನಿಂದ 12 ಮೀಟರ್ ಉದ್ದದ ನಾನ್ ಎಸಿ ಇ- ಬಸ್ಸುಗಳು ಇದಾಗಿದ್ದು, 40+1 ಆಸನಗಳನ್ನು ಹೊಂದಿದೆ. ಮೆಜೆಸ್ಟಿಕ್ – ವಿದ್ಯಾರಣ್ಯಪುರ, ಶಿವಾಜಿನಗರ – ಯಲಹಂಕ, ಯಲಹಂಕ – ಕೆಂಗೇರಿ, ಮೆಜೆಸ್ಟಿಕ್ – ಯಲಹಂಕ ಉಪನಗರ, ಹೆಬ್ಬಾಳ – ಸೆಂಟ್ರಲ್ ಸಿಲ್ಕ್ ಬೋರ್ಡ್ ಮಾರ್ಗಗಳಲ್ಲಿ ಈ  ಎಲೆಕ್ಟ್ರಿಕ್ ಬಸ್‌ಗಳು ಸಂಚರಿಸಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next