Advertisement
ಕೇವಲ ಐದು ಗಂಟೆಯಲ್ಲಿ ತನ್ನ ಕಲಾ ಚಾತುರ್ಯ ಮೆರೆದಿರುವ ಅವರು ತಮ್ಮ ಶಿಷ್ಯೆ ಶ್ರೇಯಾ ಎಂ. ಭಟ್ ಅವರ ಮುಖ ಹಾಗೂ ಕೂದಲನ್ನು ಉಪ ಯೋಗಿಸಿಕೊಂಡು ಚಿತ್ರಿಸಿರುವ ಸಿಂಹದ ಚಿತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇವರ ಈ ಆಕರ್ಷಕ ಚಿತ್ರಕಲೆಯನ್ನು ಛಾಯಾಚಿತ್ರಗ್ರಾಹಕ ವಿವೇಕ್ ಸಿಕ್ವೇರಾ ಸೆರೆ ಹಿಡಿದಿದ್ದು, ಅನೇಕರಿಂದ ಪ್ರಶಂಸೆ ಕೂಡ ವ್ಯಕ್ತವಾಗುತ್ತಿದೆ.
ಉದಯವಾಣಿ ಸುದಿನ ಜತೆ ಮಾತನಾಡಿದ ಅವರು, ಫೇಸ್ ಫೈಂಟಿಂಗ್ ಮುಖೇನ ಸಿಂಹದ ಚಿತ್ರವನ್ನು ರಚಿಸಬೇಕು ಎಂದು ಅನೇಕ ತಿಂಗಳುಗಳಿಂದ ಯೋಚಿಸುತ್ತಿದ್ದೆ. ಆದರೆ ನವರಾತ್ರಿ ಸಮಯಕ್ಕೆ ಕಾಲ ಕೂಡಿ ಬಂತು. ಶಿಷ್ಯೆ ಶ್ರೇಯಾ ಎಂ. ಭಟ್ ಅವರ ಮುಖದಲ್ಲಿ ಈ ಚಿತ್ರ ರಚಿಸಿದ್ದೇನೆ. ಆಕೆಯ ಕೂದಲನ್ನೇ ಸಿಂಹದ ಮುಖದ ಸುತ್ತಲಿನ ಕೂದಲನ್ನಾಗಿ ಪರಿವರ್ತಿಸಿದ್ದೇನೆ. ಆಕೆಯ ಕಣ್ಣುಗಳನ್ನು ಮುಚ್ಚಿ, ಕಣ್ಣಿನ ಹುಬ್ಬುಗಳಿಗೆ ವ್ಯಾಕ್ಸ್ ಹಚ್ಚಿ ಅದರ ಮೇಲೆ ಸಿಂಹದ ಕಣ್ಣನ್ನು ಚಿತ್ರಿಸಲಾಗಿದೆ.ಇದಕ್ಕೆ ಐದು ಗಂಟೆ ಕಾಲ ತೆಗೆದುಕೊಂಡೆ. ನಾನು ಅಂದುಕೊಂಡದ್ದಕ್ಕಿಂತ ತುಂಬಾನೆ ಅಂದವಾಗಿ ಈ ಚಿತ್ರ ಮೂಡಿಬಂದಿದೆ ಎನ್ನುತ್ತಾರೆ.
Related Articles
ಅಕ್ಟೋಬರ್ 31ರಂದು ಅಂತಾರಾಷ್ಟ್ರೀಯ ಹೆಲೋವಿನ್ ಡೇ ಆಚರಿಸಲಾಗುತ್ತದೆ. ಈ ದಿನವನ್ನು ಸಮಸ್ತ ಸಂತರ ಪೂರ್ವ ದಿನ ಎಂದು ಕರೆಯಲಾಗುತ್ತದೆ. ಈ ದಿನದ ಕುರಿತು ಸಂದೇಶ ಸಾರುವ ಸಲುವಾಗಿ ನಟಿ ಸ್ವಸ್ತಿಕಾ ಪೂಜಾರಿ ಅವರಿಗೆ ವಿಶೇಷವಾಗಿ ಮೇಕಪ್ ಮಾಡಲಾಗಿದೆ. ಚೇತನಾ ಅವರು ಸುಮಾರು ಮೂರು ಗಂಟೆಗಳಲ್ಲಿ ಈ ಮೇಕಪ್ ಮಾಡಿದ್ದು, ಹೆಲೋ ಗೋಲ್ಡನ್ ಕ್ರಾಪ್ ತಲೆಗೆ ಇಡಲಾಗಿದೆ. ಅಲ್ಲದೆ ತಲೆಯ ಮೇಲೆ 12 ಮೇಣದ ಬತ್ತಿ ಹಾಕಲಾಗಿದೆ.
Advertisement