Advertisement

Air India ಆಹಾರದಲ್ಲಿ ಪ್ರಯಾಣಿಕನಿಗೆ ಸಿಕ್ಕಿತು ಬ್ಲೇಡ್‌!

01:20 AM Jun 18, 2024 | Team Udayavani |

ಹೊಸದಿಲ್ಲಿ: ವಿಮಾನ ಪ್ರಯಾಣಿಕರೊಬ್ಬರಿಗೆ ತಮಗೆ ನೀಡಿದ ಊಟದಲ್ಲಿ ಬ್ಲೇಡ್‌ ಪತ್ತೆಯಾಗಿರುವ ಘಟನೆ ನಡೆದಿದೆ. ಬೆಂಗಳೂರಿನಿಂದ ಸ್ಯಾನ್‌ ಫ್ರಾನ್ಸಿಸ್ಕೊಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನದಲ್ಲಿ ಮ್ಯಾಥುರಸ್‌ ಪೌಲ್‌ ಎಂಬು ವರು ಪಯಣಿಸುತ್ತಿದ್ದರು. ವಿಮಾ ನದಲ್ಲಿ ತಮಗೆ ನೀಡಿದ ಊಟ ಸೇವಿಸುವಾಗ, ಬಾಯಲ್ಲಿ ಲೋಹದ ವಸ್ತುವಿನ ಅನುಭವವಾಗಿದೆ. ಅದನ್ನು ತೆಗೆದು ನೋಡಿದಾಗ, ಅದು ಬ್ಲೇಡ್‌ ಎಂದು ತಿಳಿದುಬಂದಿದೆ. ಅದೃಷ್ಟವಶಾತ್‌ ಅವರಿಗೆ ಯಾವುದೇ ಹಾನಿ ಆಗಿಲ್ಲ. ಘಟನೆ ಕುರಿತು ವಿಮಾನ ಸಿಬಂದಿ ಪೌಲ್‌ ಕ್ಷಮೆಯಾಚಿಸಿದ್ದಾರೆ. ತರಕಾರಿ ಹೆಚ್ಚುವ ವೇಳೆ ಅಚಾ ತುರ್ಯದಿಂದ ಬ್ಲೇಡ್‌ ಆಹಾರದೊಳಗೆ ಸೇರಿಕೊಂಡಿ ರಬಹುದು ಎಂದು ಸಿಬಂದಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next