Advertisement

ಸಾಮಾನ್ಯರಲ್ಲಿ ಅಸಾಮಾನ್ಯ ಕಲೆಗಾರ ಪ್ರವೀದ್‌

04:08 PM Mar 29, 2021 | Team Udayavani |

ಗುರುವೇ ಇಲ್ಲದೆ ಬದುಕುವರುಂಟು ಎಂಬ ಪ್ರಖ್ಯಾತ ಹಾಡಿನ ಸಾಲನ್ನು ಸಾಮಾನ್ಯವಾಗಿ ಕೇಳಿರುತ್ತೇವೆ.

Advertisement

ಪ್ರತಿಯೋರ್ವರು ಅಂದುಕೊಂಡಿರುವುದು ಒಂದೇ ಗುರು ಇಲ್ಲದೆ ಗುರಿ ತಲುಪಲು ಅಸಾಧ್ಯ ಎಂದು ಅದು ಕೂಡ ಹೌದು ಆದರೆ ಗುರು ಇಲ್ಲದೆ ಕಲಿತವರ ಅದೆಷ್ಟೋ ಉದಾಹರಣೆಗಳಿವೆ. ಖ್ಯಾತ ಬಿಲ್ವಿದ್ಯಾ ಪಂಡಿತನಾದ ಏಕಲವ್ಯ ಕೂಡ ಗುರು ಇಲ್ಲದೆ ಕೇವಲ ದ್ರೋಣಾಚಾರ್ಯ ಗುರುಗಳ ಮೂರ್ತಿಯನ್ನಿಟ್ಟುಕೊಂಡು ತನ್ನ ಶ್ರದ್ಧೆ ನಿಷ್ಠೆಯಿಂದ ಬಿಲ್ವಿದ್ಯೆಯನ್ನು ಕಲಿತು ಹೆಸರುವಾಸಿಯಾಗಿರುವುದು ಎಲ್ಲರಿಗೂ ಗೊತ್ತೇ ಇದೆ.

ಉಜಿರೆಯ ಅತ್ತುಜೆ ಗ್ರಾಮದ ನಿವಾಸಿಯಾದ ವಿಜಯಕುಮಾರ್‌ ಹಾಗೂ ಆಶಾ ಇವರ ಪುತ್ರನಾದ ಪ್ರವೀದ್‌ ತಮ್ಮ ಚಿಕ್ಕ ವಯಸ್ಸಿನಿಂದಲೇ ಚಿತ್ರಕಲಾ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಆರ್ಥಿಕ ಸಮಸ್ಯೆಯಿಂದಾಗಿ ಪ್ರವೇದ್‌ಗೆ ಯಾವುದೇ ಚಿತ್ರಕಲೆ ತರಬೇತಿಗೆ ಸೇರಲು ಅಸಾಧ್ಯವಾಯಿತು. ಆದರೂ ತಮ್ಮ ಕಲೆಯ ಆಸಕ್ತಿಯನ್ನು ಮಾತ್ರ ಬಿಡಲಿಲ್ಲ. ಇವರ ಗುರು ಯಾರು ಅಂತ ಕೇಳಿದ್ರೆ ಯೂಟ್ಯೂಬ್‌ ಹಾಗೂ ಒಂದಷ್ಟು ಸಾಮಾಜಿಕ ಜಾಲತಾಣಗಳು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ತನ್ನ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಸಾಮಾನ್ಯವಾಗಿ ಚಿತ್ರವನ್ನು ಬರೆಯುತ್ತಿದ್ದರು. ತದನಂತರ ಸ್ವಲ್ಪ ಸಮಯ ಚಿತ್ರಕಲೆಗೆ ವಿರಾಮ ನೀಡಿದ್ದರು. ವಿದ್ಯಾಭ್ಯಾಸವು ಮುಗಿಯುವ ಸಮಯದಲ್ಲಿ ಇವರ ಮನಃಶಾಸ್ತ್ರ ಗುರುಗಳಾದ ಸ್ಮಿತೇಶ್‌ ಇರುವ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸಿದರು.

Advertisement

ಕೊಂಚ ವಿರಾಮ ಕಲೆಗೆ ಕೊಟ್ಟಿರುವ ಕಾರಣದಿಂದ ಸ್ವಲ್ಪ ಚಿತ್ರ ಬಿಡಿಸಲು ಒಮ್ಮೆಗೆ ಇವರಿಗೆ ಕಷ್ಟ ಆಗಿತ್ತು. ಆದರೂ ಛಲಬಿಡದೆ ಹಠವಾದಿಯಂತೆ ಚಿತ್ರವನ್ನು ಬರೆದೇಬಿಟ್ಟರು. ಅದುವೇ ಜೋಕರ ಜೋಕ್ವಿನ್‌ ಫೋನಿಕ್ಸ್‌. ಈ ಚಿತ್ರವು ಬರೆದನಂತರ ಅದನ್ನು ಕಾಲೇಜಿನ ಒಂದು ಫ‌ಲಕದಲ್ಲಿ ಪ್ರಕಟಿಸಲಾಗಿತ್ತು. ಆ ಪೆನ್ಸಿಲ್‌ ಆರ್ಟ್‌ ಎಲ್ಲರ ಮನಗೆದ್ದಿತ್ತು. ಮತ್ತೆ ತನ್ನ ಚಿತ್ರಲೋಕಕ್ಕೆ ಕಾಲಿಟ್ಟ ಪ್ರವೀಣ್‌ ಗ್ರಾಫೈಟ್‌ ಆರ್ಟಿಸ್ಟ್‌ ಹಾಗೂ ಚಾರ್ಕೋಲ್‌ ಆರ್ಟ್‌ಗಳನ್ನು ಬರೆಯಲು ಪ್ರಾರಂಭಿಸಿದರು. ತನ್ನದೇ ಆದ ಚಿತ್ರದ ಕೊಠಡಿ ಕೂಡ ಇದೆ. ಅಮ್ಮ ಕೊಡಿಸಿದ ಟೇಬಲ್‌ನಲ್ಲಿ ಇವರ ಕೈಚಳಕವು ಮೂಡಿಬರುತ್ತದೆ.

ಅದೆಷ್ಟೋ ಪೆನ್ಸಿಲ್‌ಗ‌ಳ ಮೂಲಕ ಹೊರಬರುವ ಈ ಚಿತ್ರದ ಹೆಸರುಗಳನ್ನು ಹಾಗೂ ಪೆನ್ಸಿಲ್‌ಗ‌ಳ ಹೆಸರುಗಳನ್ನು ಉಚ್ಚಾರ ಮಾಡಲು ಕಷ್ಟವಾಗುತ್ತದೆ. ಅಂತಹದರಲ್ಲಿ ಗುರುವಿನ ಮಾರ್ಗದರ್ಶನ ಇಲ್ಲದೆ ಕೇವಲ ಸಾಮಾಜಿಕ ಜಾಲತಾಣಗಳನ್ನು ನೋಡಿ ಕಲಿಯುತ್ತಿರುವ ಪ್ರವೀದ್‌ನನ್ನು ಮೆಚ್ಚಲೇಬೇಕಾದ ವಿಷಯ.

ಪ್ರವೀದ್‌ನ°ಲ್ಲಿರುವ ಕಲೆಯನ್ನು ಎಲ್ಲಿಯೂ ಹೇಳಿಕೊಂಡಿಲ್ಲ. ಅಂತಹ ಅವಕಾಶಗಳು ಬಂದಿಲ್ಲ. ಸಣ್ಣಪುಟ್ಟ ಸ್ಟ್ರೀಟ್‌ ಆರ್ಟ್‌, ಕಮಿಷನ್‌ ವರ್ಕ್‌ಗಳಿಗೆ ಚಿತ್ರವನ್ನು ಬರೆದು ಕೊಟ್ಟಿ¨ªಾರೆ. ಇನ್ನು ಇವರು ಬರೆದಿರುವ ಪೆನ್ಸಿಲ್‌ ಆರ್ಟ್‌ಗಳನ್ನು ನೋಡುತ್ತಿದ್ದರೆ ಭಾವನಾತ್ಮಕ, ಚಿತ್ರಲೋಕಗಳಲ್ಲಿ ತೇಲಾಡಿ ಬಿಡಿಸುತ್ತದೆ. ಅಷ್ಟೊಂದು ಆಳವಾಗಿ ಇಳಿದು ಈ ಚಿತ್ರಗಳನ್ನು ಬರೆದಿದ್ದಾರೆ. ಯಾವುದೇ ಚಿತ್ರಗಳನ್ನು ಬರೆಯಬೇಕೆಂದರೆ ಅದರ ಬಗ್ಗೆ ಆಳವಾಗಿ ಅಧ್ಯಯನ ಮಾಡಿ ತದನಂತರ ಬರೆಯಬೇಕು. ಆಗ ಮಾತ್ರ ರಿಯಲಿಸ್ಟಿಕ್‌ ಆಗಿ ಚಿತ್ರ ಮಾಡಲು ಸಾಧ್ಯ. ಜತೆಗೆ ಚಿತ್ರದ ಮೂಲಕ ಸಂದೇಶವನ್ನು ನೀಡುವಂತಿರಬೇಕು ಎಂದು ಪ್ರವೀದ್‌ ಹೇಳುತ್ತಾರೆ.

ಇವರ ಜೀವನಕ್ಕೇ ಗುರುವಿನ ಮಾರ್ಗದರ್ಶನವಿಲ್ಲದೆ ಕೇವಲ ತನ್ನ ಆಸಕ್ತಿ ಶಿಸ್ತು ಏಕಾಗ್ರತೆಗಳಿಂದ ಕೂಡಿದ ಪ್ರತಿಭೆಗೆ ಇನ್ನಷ್ಟು ಭವಿಷ್ಯವು ಉಜ್ವಲವಾಗಿರಬೇಕು ಎಂಬುದು ನಮ್ಮೆಲ್ಲರ ಆಶಯ.


  ಹರ್ಷಿತಾ ಹೆಬ್ಟಾರ್‌, ಎಸ್‌.ಡಿ.ಎಂ. ಕಾಲೇಜು, ಉಜಿರೆ  

Advertisement

Udayavani is now on Telegram. Click here to join our channel and stay updated with the latest news.

Next