Advertisement
“ಇದೊಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರ. ಒಂದು ಕಾಲೇಜ್ ಹುಡುಗ, ಹುಡುಗಿಯ ಕಥೆ ಹೇಳಿದ್ದೇನೆ. ಅಭಿ ಎಂಬ ಹುಡುಗ, ಮೇಘ ಎಂಬ ಹುಡುಗಿಯ ಹಿಂದೆ ಸುತ್ತಿದರೆ, ಮೇಘ ಮಾತ್ರ ವಿಶ್ವ ಎಂಬ ಹುಡುಗನ ಹಿಂದೆ ಸುತ್ತುತ್ತಾಳೆ. ಕೊನೆಗೆ ಏನಾಗುತ್ತೆ ಎಂಬುದು ಸಸ್ಪೆನ್ಸ್. ಲವ್‌ಸ್ಟೋರಿ ಜೊತೆಗೊಂದು ಟ್ವಿಸ್ಟ್ ಇದೆ. ಇನ್ನು, ರವಿಶಂಕರ್ ಅಂಕಲ್ ಪಾತ್ರ ನಿರ್ವಹಿಸಿದ್ದಾರೆ. ಅವರಿಗಿಲ್ಲಿ ಹೊಸ ಗೆಟಪ್ ಇದೆ. ಚಿತ್ರಕ್ಕೊಂದು ಹಾಡನ್ನೂ ಹಾಡಿದ್ದಾರೆ. ಈಗಾಗಲೇ ಟ್ರೇಲರ್ ರಿಲೀಸ್ ಮಾಡಿದ್ದು, ಅದರಲ್ಲಿರುವ ಎನರ್ಜಿ ಇಡೀ ಚಿತ್ರದುದ್ದಕ್ಕೂ ಇದೆ. “ರಾಜರಥ’ ಎಂಬುದು ಬಸ್. ಅದರ ಕಥೆಯೇ ಸಾಗಲಿದೆ. ಪುನೀತ್ ಮತ್ತು ರಾಣಾ ದಗ್ಗುಬಾಟಿ ಬಸ್ ಕಥೆ ಹೇಳ್ತಾರೆ. ಬಸ್‌ನಲ್ಲಿರೋರೆಲ್ಲರ ಕಥೆಯ ಜೊತೆಗೆ ಬಸ್ ಕೂಡ ಒಂದು ಕಥೆ ಹೇಳುತ್ತಾ ಹೋಗುತ್ತೆ. ಪುನೀತ್ ಅವರಿಲ್ಲಿ ಚಿತ್ರದುದ್ದಕ್ಕೂ ಕಾಡುತ್ತಾರೆ. ಅದು ಹೇಗೆಂಬುದನ್ನು ಚಿತ್ರದಲ್ಲಿ ನೋಡಬೇಕು’ ಎಂದರು ಅನೂಪ್ ಭಂಡಾರಿ.
ಹುಡುಗನ ಪಾತ್ರ ಮಾಡಿದ್ದಾರಂತೆ. “ಮೆಕ್ಯಾನಿಕಲ್ ಎಂಜಿನಿಯರಿಂಗ್ ಕಲಿಯುತ್ತಿರುವ ಸ್ಟುಡೆಂಟ್ ನಾನು. ಕಾಲೇಜ್ ಲೈಫಲ್ಲಿ ಅವನಿಗೆ ಸಿನಿಮಾ ಅಂದರೆ ಹುಚ್ಚು. ಪ್ರತಿ ಮಾತಲ್ಲೂ ಸಿನಿಮಾ ಡೈಲಾಗ್ ತುಂಬಿರುತ್ತೆ. ಮೇಘ ಎಂಬ ಹುಡುಗಿ ಹಿಂದೆ ಬಿದ್ದಾಗ ಏನಾಗುತ್ತೆ ಎಂಬುದು ಚಿತ್ರದ ಹೈಲೈಟ್. “ರಂಗಿತರಂಗ’ ಗೆಲುವು ನಂತರ “ರಾಜರಥ’ ಬರುತ್ತಿದೆ. ಜನರು ಹೇಗೆ ಸ್ವೀಕರಿಸುತ್ತಾರೆ ಎಂಬ ಭಯ ಇದೆ’ ಎಂದರು ನಿರೂಪ್ ಭಂಡಾರಿ.ನಾಯಕಿ ಆವಂತಿಕಾ ಶೆಟ್ಟಿ ಅವರಿಗೆ ಇಲ್ಲಿ ಹೊಸಬಗೆಯ ಪಾತ್ರ ಸಿಕ್ಕಿದೆಯಂತೆ. ಯಶಸ್ವಿ ತಂಡದ ಜತೆ ಇನ್ನೊಂದು ಚಿತ್ರ ಮಾಡುತ್ತಿರುವುದು ಖುಷಿ ಕೊಟ್ಟಿದೆ. ನನಗೆ ಕನ್ನಡ ಬರುತ್ತಿರಲಿಲ್ಲ. ಈ ಚಿತ್ರದ ಚಿತ್ರೀಕರಣದಲ್ಲಿ ಕಲಿತಿದ್ದೇನೆ. ಈ ಚಿತ್ರ ನನಗೆ ಮತ್ತೂಂದು ಇಮೇಜ್ ತಂದುಕೊಡುತ್ತೆ ಎಂಬ ವಿಶ್ವಾಸವಿದೆ. ಪ್ರತಿಯೊಬ್ಬರೂ ಕಷ್ಟಪಟ್ಟಿದ್ದಾರೆ. ಚಿತ್ರದಲ್ಲಿ ನನಗೆ ಪೆಟ್ಟು ಬಿದ್ದಿದೆ. ಹೀರೋಗೂ ಪೆಟ್ಟಾಗಿದೆ. ಆದರೆ, ಈಗ ಚಿತ್ರ ನೋಡಿದಾಗ, ಅದೆಲ್ಲವೂ ಮರೆತು ಹೋಗಿದೆ. ಜನ ಇಷ್ಟಪಡುತ್ತಾರೆ ಎಂಬ ನಂಬಿಕೆ ನನ್ನದು ಎಂದರು ಆವಂತಿಕಾ ಶೆಟ್ಟಿ. ಚಿತ್ರಕ್ಕೆ ಜಾಲಿ ಹಿಟ್ಸ್, ಅಜಯ್‌ರೆಡ್ಡಿ, ಸತೀಶ್, ಅಂಜು ನಿರ್ಮಾಪಕರು. ಇಲ್ಲಿ “ಬೆಂಕಿಯಲ್ಲಿ
ಅರಳಿದ ಹೂವು’ ಚಿತ್ರದ “ಮುಂದೆ ಬನ್ನಿ’ ಹಾಡು ಬಳಕೆ ಮಾಡಲಾಗಿದೆ. ಎಲ್ಲಾ ಕ್ರೆಡಿಟ್ ಎಂ.ಎಸ್.ವಿಶ್ವನಾಥನ್ ಮತ್ತು ಗೀತೆ ರಚನೆಕಾರ ಚಿ. ಉದಯಶಂಕರ್ ಹಾಗು ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಕೊಡುವುದಾಗಿ ಹೇಳಿಕೊಂಡಿತು ಚಿತ್ರತಂಡ.