Advertisement

30 ಲಕ್ಷ ಜನಸಂಖ್ಯೆ ಇರುವ 14 ಮಹಾ ನಗರಗಳಿಗೆ ಹೊಸ ಟಚ್‌!

08:33 PM Jul 23, 2024 | Team Udayavani |

ನವದೆಹಲಿ: ದೇಶದಲ್ಲಿ 30 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ 14 ದೊಡ್ಡ ನಗರಗಳಿಗೆ ಹೊಸ ರೂಪು ನೀಡಲು ಕೇಂದ್ರ ಸರ್ಕಾರ ಮುಂದಡಿ ಇಟ್ಟಿದೆ. ಇದಕ್ಕಾಗಿ ಸಾರಿಗೆ ಆಧಾರಿತ ಅಭಿವೃದ್ಧಿ ಯೋಜನೆ ಬಗ್ಗೆ ಪ್ರಸ್ತಾಪಿಸಿದ್ದು, ನಗರಗಳ ಪುನರಾಭಿವೃದ್ಧಿಗೆ ಹೊಸ ಸ್ಪರ್ಶ ನೀಡುವುದಾಗಿ ಹೇಳಿದೆ.

Advertisement

ಈ ಮಹಾ ನಗರಗಳನ್ನು “ಅಭಿವೃದ್ಧಿ ಕೇಂದ್ರ’ವನ್ನಾಗಿ ಅಭಿವೃದ್ಧಿಪಡಿಸಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರವು ರಾಜ್ಯಗಳೊಂದಿಗೆ ಕೆಲಸ ಮಾಡುತ್ತದೆ ಎಂಬ ವಿಷಯವನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಒತ್ತಿ ಹೇಳಿದರು. ಅಂದರೆ, ಆಯಾ ರಾಜ್ಯ ಸರ್ಕಾರಗಳು ಸಹ ಇದಕ್ಕೆ ತಮ್ಮ ಬೆಂಬಲವನ್ನು ನೀಡಬೇಕು ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ.

ಆರ್ಥಿಕ ಮತ್ತು ಸಾರಿಗೆ ಯೋಜನೆಗಳೊಂದಿಗೆ ನಗರ ಯೋಜನೆಗಳನ್ನೂ ಬಳಸಿಕೊಂಡು ನಗರ ಪ್ರದೇಶಗಳ ಕ್ರಮಬದ್ಧ ಅಭಿವೃದ್ಧಿಯನ್ನು ಸಾಧಿಸಲಾಗುವುದು. ಈ ಯೋಜನೆಗಳಿಗೆ ಅನುಷ್ಠಾನ ಮತ್ತು ಹಣಕಾಸು ಕಾರ್ಯತಂತ್ರವನ್ನು ರೂಪಿಸಲಾಗುವುದು’ ಎಂದು ಸೀತಾರಾಮನ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next