Advertisement

ಕೋವಿಡ್ 19 ಸೋಂಕಿನ ಹೊಸ ಲಕ್ಷಣ

04:16 PM Apr 26, 2020 | sudhir |

ಮಣಿಪಾಲ: ಹೊಸ ರೋಗ ಲಕ್ಷಣದ ಮೂಲಕ ಕೋವಿಡ್‌ ಸೋಂಕಿತರನ್ನು ಪತ್ತೆ ಮಾಡಬಹುದಾಗಿದೆ ಎಂದು ಇಟಲಿ ಹಾಗೂ ಅಮೆರಿಕದಲ್ಲಿ ಚರ್ಚೆಯಾಗುತ್ತಿದೆ. ಇಟಲಿಯ ಕೆಲವು ಕಡೆಗಳಲ್ಲಿ ಮಕ್ಕಳ ಕಾಲಿನಲ್ಲಿ ಉರಿಯೂತ ಕಾಣಿಸಿಕೊಂಡಿದೆ. ಕಾಲು ಬೆರಳುಗಳ ಬಣ್ಣ ಬದಲಾಗುವುದು ಕಂಡುಬಂದಿದೆ. ಅಮೆರಿಕದಲ್ಲೀ ಇದೇ ಲಕ್ಷಣಗಳು ಪತ್ತೆಯಾಗಿವೆಯಂತೆ. ಆತಂಕಕಾರಿ ವಿಷಯ ಎಂದರೆ ಕೋವಿಡ್ ಸೋಂಕು ಹೆಚ್ಚು ಇರುವ ಪ್ರದೇಶಗಳಲ್ಲಿ ಮಕ್ಕಳಿಗೆ ಈ ರೀತಿಯಾಗಿ ಕಾಲು ಬೆರಳುಗಳಲ್ಲಿ ಉರಿಯೂತ, ಕಾಲು ಬೆರಳುಗಳ ಬಣ್ಣ ಬದಲಾಗುವುದು ಕಂಡು ಬಂದಿದೆ.

Advertisement

ಇಟಲಿ ಹಾಗೂ ಅಮೆರಿಕದಲ್ಲಿ ಚರ್ಮರೋಗ ತಜ್ಞರು ಈ ರೋಗ ಲಕ್ಷಣದ ಬಗ್ಗೆ ಅಧ್ಯನದಲ್ಲಿ ತೊಡಗಿದ್ದಾರೆ. ಇಂತಹ ಲಕ್ಷಣ ಕಂಡು ಬಂದ ಮಕ್ಕಳಿಗೆ ಕೋವಿಡ್ ವೈರಸ್‌ ಪರೀಕ್ಷೆ ಮಾಡಲಾಗುತ್ತಿದೆ. ಹೀಗಾಗಿ ಕಾಲು ಉರಿಯೂತ, ಕಾಲು ಬೆರಳುಗಳ ಬಣ್ಣ ಬದಲಾಗುವುದು ಸಹ ಕೋವಿಡ್ ರೋಗ ಲಕ್ಷಣವಾಗಿರವಹುದು ಎಂಬ ಶಂಕೆ ವ್ಯಕ್ತವಾಗಿದೆ. ಇಟಲಿಯಲ್ಲಿ ಕೆಲವರಿಗೆ ರೋಗ ಲಕ್ಷಣ ಇಲ್ಲದೆ ಇದ್ದರೂ, ಪಾಸಿಟಿವ್‌ ವರದಿ ಬಂದಿದೆ. ಹೀಗಾಗಿ ಸೋಂಕು ಪತ್ತೆ ಮಾಡುವುದೇ ಸವಾಲಾಗಿ ಪರಿಣಮಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next