Advertisement

ಸುಸ್ಥಿರ ಗೇರು ಕೃಷಿಗೆ ಹೊಸ ಯೋಜನೆ ಅಗತ್ಯ: ಗೋಪಿ

08:25 AM Sep 08, 2017 | Harsha Rao |

ಕಾಸರಗೋಡು: ಕೇಂದ್ರ ಸರಕಾರವು ಸುಸ್ಥಿರ ಹಾಗೂ ಲಾಭದಾಯಕ ಗೇರು ಕೃಷಿಗೆ ಹೊಸ ಯೋಜನೆ ರೂಪಿಸಲು ಚಿಂತಿಸಿದೆ ಎಂದು ರಾಜ್ಯಸಭಾ ಸದಸ್ಯ ಸುರೇಶ್‌ ಗೋಪಿ ಹೇಳಿದರು. ಮಾನವನ ಜೀವದ ಬೆಲೆಯನ್ನು ಲೆಕ್ಕಿಸದ ಗೇರು ಕೃಷಿಯ ಬದಲು ಹೊಸ ಆವಿಷ್ಕಾರದ ಮೂಲಕ ಪ್ರಕೃತಿ  ಸಾಮೀಪ್ಯದ ಅರೋಗ್ಯಯುತ ಗೇರು ಕೃಷಿಯನ್ನು ಉತ್ತೇಜಿಸಲಾಗುವುದೆಂದು ಅವರು ತಿಳಿಸಿದರು.

Advertisement

ಕಾಞಂಗಾಡು ಅಂಬಲತ್ತರದಲ್ಲಿ ನೆಹರೂ ಕಲಾ ವಿಜ್ಞಾನ ಕಾಲೇಜಿನ ಸಾಹಿತ್ಯ ವೇದಿಕೆ ವತಿಯಿಂದ ನಿರ್ಮಾಣಕಂಡ ವಿಶಿಷ್ಟ ಚೇತನ ನಾಗರಿಕರಿಗಾಗಿ ನಿರ್ಮಿಸಿದ ಸ್ನೇಹದ ಮನೆಯನ್ನು ಲೋಕಾರ್ಪಣೆಗೈದು ಅವರು ಮಾತನಾಡಿದರು.
ಗೇರು ಕೃಷಿಕರಿಗೆ ಸಹಾಯಕವಾಗುವ ಯೋಜನೆಯನ್ನು ರೂಪಿಸುವ ಬಗ್ಗೆ ಕೇಂದ್ರ ಸಚಿವ ಅರುಣ್‌ಜೇಟಿÉ ಹಾಗೂ ನಿರ್ಮಲಾ ಸೀತಾರಾಮನ್‌ ಅವರ ಜೊತೆ ಮಾತುಕತೆ ನಡೆಸಲಾಗಿದೆ ಎಂದು ಅವರು ತಿಳಿಸಿದರು. ಹೊಸ ಯೋಜನೆಯು ವರ್ಷದೊಳಗೆ ಕಾರ್ಯರೂಪಕ್ಕೆ ಬರಲಿದೆ ಎಂದು ಅವರು ಹೇಳಿದರು. ವಿಶಿಷ್ಟ ಚೇತನರಿಗೆ ಸಹಾಯಕವಾಗುವ ಆರೋಗ್ಯ ಘಟಕವನ್ನು ಕಂದಾಯ ಸಚಿವ ಇ.ಚಂದ್ರಶೇಖರನ್‌ ಉದ್ಘಾಟಿಸಿದರು. 

ಯಾವುದೇ ಯೋಜನೆಗೆ ಕೇಂದ್ರದ ಸಹಾಯವಷ್ಟೇ ಅಲ್ಲದೆ ಜನಸಾಮಾನ್ಯರು ಒಂದುಗೂಡಿ ಸಾಮಾಜಿಕ ಒಳಿತಿಗೆ ಮಾದರಿಯಾಗಬೇಕಿದೆ ಎಂದು ಅವರು ಹೇಳಿದರು. ಕಾಞಂಗಾಡು ನೆಹರೂ ಕಲಾ ವಿಜ್ಞಾನ ಕಾಲೇಜಿನ ಸಾಹಿತ್ಯ ವೇದಿಕೆಯು ಇಂತಹ ಮಹತ್ತರ ಬದಲಾವಣೆಯಲ್ಲಿ ತೊಡಗಿಸಿಕೊಂಡಿರುವುದು ಸಮಾಜಕ್ಕೆ ಮಾರ್ಗದರ್ಶಕ ಎಂದರು. 
ಸಾಹಿತ್ಯ ವೇದಿಕೆಯ ಅಧ್ಯಕ್ಷ ಎಂಡೋಸಲ್ಫಾನ್‌ ದುರಂತದ ಬಗ್ಗೆ ಬೆಳಕು ಚೆಲ್ಲುವ ಎಣ್ಮಕಜೆ ಪುಸ್ತಕ ಬರಹಗಾರ ಅಂಬಿಕಾಸುತನ್‌ ಮಾಂಗಾಡ್‌ ಮಾತನಾಡಿ ಸಾಹಿತ್ಯ ವೇದಿಕೆಯು ಸುರೇಶ್‌ ಗೋಪಿ ಅವರ ಜೊತೆಗೂಡಿ ಅನಿವಾಸಿ ಭಾರತೀಯ ಉದ್ಯಮಿಗಳ ನೆರವಿನಿಂದ ಒಟ್ಟು ಎಂಟು ಮನೆಗಳನ್ನು ಅಶಕ್ತರಿಗೆ ನೀಡಿದೆ. 

ಸ್ನೇಹ ಮನೆ ನಿರ್ಮಾಣಕ್ಕೆ ಕಸ್ತೂರ್‌ ಬಾ ಮಹಿಳಾ ಸಮಾಜವು ಹತ್ತು ಸೆಂಟ್ಸ್‌ ಸ್ಥಳವನ್ನು ವೇದಿಕೆಗೆ ನೀಡಿತ್ತು ಎಂದು ಅಂಬಿಕಾ ಸುತನ್‌ ನೆನಪಿಸಿಕೊಂಡರು. ಎಂಡೋ ಸಲ್ಫಾನ್‌ ವಿರೋಧಿ ಚಳುವಳಿಯ ಮುನೀಸಾ ಅಂಬಲತ್ತರ ಮತು ¤ಕುಂಞಿಕೃಷ್ಣನ್‌ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next