Advertisement

ಸಾಂಪ್ರದಾಯಿಕ ಕುಂಕುಮಕ್ಕೆ ಹೊಸ ಲುಕ್‌

07:45 AM Feb 01, 2019 | |

ಫ್ಯಾಶನ್‌ ಲೋಕದಲ್ಲಿ ಹೊಸತೊಂದು ಬಂದರೆ ಅದನ್ನು ಒಮ್ಮೆ ನಾವು ಟ್ರೈ ಮಾಡಿ ನೋಡೋಣ ಎಂಬ ಕೂತೂಹಲವಿರುತ್ತದೆ. ಅದೇ ರೀತಿ ಇತಿಹಾಸ ಮುರುಕಳಿಸಿ ಫ್ಯಾಶನ್‌ ಆಗುವುದು ಹೊಸತಲ್ಲ. ಹಣೆಯಲ್ಲಿ ಅಗಲವಾಗಿ  ಕುಂಕುಮವನ್ನಿಟ್ಟುಕೊಂಡರೆ ಹಳೆ ಕಾಲದವರು ಎಂದು ಗೊಣಗುತ್ತಿದ್ದ ಕಾಲವಿತ್ತು. ಆದರೆ ಇಂದು ಅದೇ ಹೆಂಗಳೆಯರು ಲಕ್ಷಣವಾಗಿ ಎಂಟಾಣೆ ಗಾತ್ರದ ಕುಂಕುವನ್ನಿಟ್ಟು ಕಂಗೊಳಿಸುತ್ತಾರೆ.

Advertisement

ಹಳೆ ಸಂಪ್ರದಾಯಗಳಿಗೆ ಟಚ್‌ ಅಪ್‌
ಮನೆಗಳಲ್ಲಿ ಅಜ್ಜಿ, ಅಮ್ಮ ಕುಂಕುಮವನ್ನಿಟ್ಟರೆ ಅದು ನಿಮ್ಮ ಕಾಲದ್ದು ಎನ್ನುವವರಿದ್ದರು. ಆದರೆ ಅದೇ ಕುಂಕುಮಕ್ಕೆ ಈಗ ಮೆರುಗು ಬಂದಂತಾಗಿದ್ದು ಹೊಸ ಟ್ರೆಂಡ್‌ ಕ್ರಿಯೇಟ್‌ ಮಾಡಿದೆ. ಹಣೆಯ ಮಧ್ಯದಲ್ಲಿ ಕುಂಕುಮವನ್ನಿಟ್ಟು ಬೈತಲೆಗೆ ಚೈನ್‌ ಹಾಕಿದರೆ ಮುಖ ಸುಂದ ರವಾಗಿ ಕಾಣುವುದರಲ್ಲಿ ಸಂಶಯವಿಲ್ಲ.

ಸಿನೆಮಾ ತಾರೆಯರಿಗೂ ಇಷ್ಟ
ಕೆಲವೊಮ್ಮೆ ಬೇರೆಯವರೂ ಮಾಡಿದ್ದನ್ನು ನೋಡಿ ನಾವು ಅನುಸರಿಸುತ್ತೇವೆ. ಹಾಗೇ ಸಿನೆಮಾಗಳಲ್ಲಿ ನೋಡಿದ್ದು ಕೆಲವೊಮ್ಮೆ ಇಷ್ಟವಾಗಿ ಬಿಡುತ್ತದೆ. ಅದೇ ರೀತಿಯಲ್ಲಿ ಇತ್ತೀಚೆಗೆ ತಾರೆಯರು ಅಗಲ ಹಣೆ ಬೊಟ್ಟನ್ನಿಡುವುದು ಬಾಲಿವುಡ್‌ನ‌ಲ್ಲಿ ಹವಾ ಎಬ್ಬಿಸಿತ್ತು. ಮದುವೆ, ರಿಸೆಪ್ಶನ್‌ ಹೀಗೆ ಬೇರೆ ಬೇರೆ ಸಂದರ್ಭಗಳಲ್ಲಿ ಚಂದದ ಉಡುಗೆ ತೊಟ್ಟು ನೋಡುಗರ ಗಮನ ಸೆಳೆಯುವುದರಲ್ಲಿ ಯಶಸ್ವಿಯಾಗಿದ್ದರು.

ಚಿಕ್ಕ ಮಕ್ಕಳಿಗೂ!
ಈಗ ನಗರ ಹಳ್ಳಿಗಳೆನ್ನದೇ ಲಂಗ-ದಾವಣಿ, ಸೀರೆ ಉಟ್ಟು ಬೀಗುವ ಹುಡುಗಿಯರು ಇದನ್ನು ಇಷ್ಟ ಪಡುತ್ತಿದ್ದು, ಮನೆಯ ಸಮಾರಂಭಗಳಲ್ಲಿ ಒಂದೇ ಬಗೆಯ ಬಟ್ಟೆ ತೊಟ್ಟು ಅಗಲವಾಗಿ ಕುಂಕುಮವನ್ನಿಡುತ್ತಾರೆ.

ಸಮಾರಂಭಕ್ಕೆ ಗ್ರ್ಯಾಂಡ್‌ ಲುಕ್‌
ಗೌನ್‌, ಸೀರೆ, ಹಾಫ್ ಸಾರಿಗಳಿಗೆ, ಉದ್ದ ಲಂಗ ಇನ್ನಿತರ ಬಟ್ಟೆಗಳಿಗೆ ಈ ಬಿಂದಿ ಬಲು ಸುಂದರವಾಗಿ ಕಾಣುತ್ತದೆ. ಅದಲ್ಲದೆ ಕುಂಕುಮದಲ್ಲೇ ಹಲವಾರು ಬಗೆಯ ಕುಂಕುಮಗಳಿದ್ದು ಆ ಬಣ್ಣಕ್ಕೆ ಸರಿಯಾಗಿ ಡ್ರೆಸ್‌ ಗಳನ್ನು ಮ್ಯಾಚ್‌ ಮಾಡಬಹುದಾಗಿದೆ. ಅದಲ್ಲದೆ ಯಾವುದೇ ಬಣಕ್ಕೂ ಇದು ಸುಂದರವಾಗಿ ಕಾಣುತ್ತದೆ.

Advertisement

ಕುಂಕುಮವನ್ನು ರೌಂಡ್‌ ಆಗಿ ಇಡುವುದು ಕೂಡ ಒಂದು ಕಲೆ. ಬರಿ ಹುಡಿ ಕುಂಕುಮವನ್ನಿಡುವಾಗ ಸ್ವಲ್ಪ ಎಚ್ಚರಿಕೆಯಿಂದ ಗಾಢವಾಗಿ ಅಥವಾ ತಿಳಿಯಾಗಿ ಹಾಕಿಕೊಳ್ಳಬಹುದು. ಹಣೆಗೆ ಇಡುವಾಗ ಉಂಗುರದ ಬೆರಳಿನಿಂದ ಇಟ್ಟುಕೊಂಡರೆ ಕುಂಕುಮ ಅಗಲವಾಗಿ ಮತ್ತು ವೃತ್ತಾಕೃತಿಯಲ್ಲಿ ಇಟ್ಟುಕೊಳ್ಳಲು ಸುಲಭವಾಗುತ್ತದೆ. ಹೆಂಗಳೆಯರಿಗೆ ಸುಲಭವಾಗಲೆಂದೇ ವಿವಿಧ ಮಾದರಿಯ ಅಗಲವಾದ ಹಣೆಬೊಟ್ಟು ಲಭ್ಯವಿದ್ದು ಅಂದವನ್ನು ಇಮ್ಮಡಿಗೊಳಿಸುತ್ತಿವೆ.

ಮ್ಯಾಚಿಂಗ್‌ ಬಿಂದಿಗಳು
ಕೆಲವರಿಗೆ ಡ್ರೆಸ್‌ಗಳಿಗೆ ಮ್ಯಾಚಿಂಗ್‌ ಆಗಬೇಕೆಂಬ ಹಂಬಲವಿರುತ್ತದೆ. ಅದಕ್ಕಾಗಿ ಮಾರುಕಟ್ಟೆಗಳಲ್ಲಿ ಕುಂಕುಮದ ರೀತಿಯಲ್ಲಿ ಹಲವಾರು ಕಲರ್‌ಗಳು ಬಂದಿದ್ದು ಅವುಗಳನ್ನು ಬಟ್ಟೆಗಳ ಬಣ್ಣಕ್ಕೆ ಹೊಂದಿಸಿ ಕೊಳ್ಳಬಹುದಾಗಿದೆ ಅಥವಾ ಸಿಕ್ಟರ್‌ ರೂಪಗಳಲ್ಲಿಯೂ ಹಲವು ಬಣ್ಣಗಳು ಲಭ್ಯವಿವೆ. ಚಿಕ್ಕ ಮಕ್ಕಳಿಗೆ ಕಲರ್‌ ಬಾಕ್ಸ್‌ ಗಳು ಕೂಡ ಲಭ್ಯವಿದ್ದು ಅದರಲ್ಲಿ ಕೂಡ ಕಲರ್‌  ಕಲರ್‌ ಬಿಂದಿಗಳನ್ನು ಬಳಸಬಹುದಾಗಿದೆ. 

 ಪ್ರೀತಿ ಭಟ್‌ ಗುಣವಂತೆ 

Advertisement

Udayavani is now on Telegram. Click here to join our channel and stay updated with the latest news.

Next