Advertisement

ಐಶಾನಿ ಕೈಯಲ್ಲಿ ಹೊಸ ಸಿನಿಮಾ

09:14 AM Jun 27, 2019 | Team Udayavani |

ಕಳೆದ ವರ್ಷ ತೆರೆಗೆ ಬಂದಿದ್ದ “ಗುಳ್ಟು’ ಚಿತ್ರದ ಮೂಲಕ ಬೆಳಕಿಗೆ ಬಂದಿದ್ದ ನಾಯಕ ನವೀನ್‌ ಅವರ ಎರಡನೇ ಸಿನಿಮಾ ಸೆಟ್ಟೇರಿದೆ. ಈ ಹಿಂದೆ ಪುರಿ ಜಗನ್ನಾಥ್‌ ಸೇರಿದಂತೆ ಹಲವು ಖ್ಯಾತ ನಾಮ ನಿರ್ದೇಶಕರ ಜೊತೆಗೆ ಸಹಾಯಕ ನಿರ್ದೇಶಕನಾಗಿ, ಸಹ ನಿರ್ದೇಶಕನಾಗಿ ಕೆಲಸ ಮಾಡಿರುವ ಶ್ರೀಧರ್‌ ಷಣ್ಮುಖ ಎನ್ನುವ ನವ ಪ್ರತಿಭೆ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

Advertisement

ಈ ಚಿತ್ರಕ್ಕೆ ನಾಯಕಿ ಯಾರಾಗುತ್ತಾರೆಂಬ ಕುತೂಹಲ ಅನೇಕರಿಗಿತ್ತು. ಈಗ ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾಳೆ. ಅದು ಬೇರಾರು ಅಲ್ಲ, ಐಶಾನಿ ಶೆಟ್ಟಿ. ಹೌದು, ನವೀನ್‌ಗೆ ಐಶಾನಿ ಶೆಟ್ಟಿ ನಾಯಕಿಯಾಗಿದ್ದು, ಈ ಮೂಲಕ ಹೊಸ ಸಿನಿಮಾವೊಂದು ಐಶಾನಿ ಅಕೌಂಟ್‌ ಸೇರಿದೆ. ಸದ್ಯ ಐಶಾನಿ ಶೆಟ್ಟಿ “ನಮ ಗಣಿ ಬಿ.ಕಾಂ. ಪಾಸ್‌’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಹೊಸ ಚಿತ್ರದಲ್ಲೂ ಐಶಾನಿಗೆ ವಿಭಿನ್ನ ಪಾತ್ರವಿದೆಯಂತೆ. ಇದೊಂದು ಹೈಪರ್‌ ಲಿಂಕ್‌ ಅಥವಾ ಹಾಫ್ ಬೀಟ್‌ ಶೈಲಿಯ ಚಿತ್ರ ಎಂದು ಹೇಳಲಾಗುತ್ತಿದ್ದು, ಕ್ರೈಮ್‌ ಕಥಾನಕ ಹೊಂದಿರುವ ಈ ಚಿತ್ರದಲ್ಲಿ ಲವ್‌, ಸೆಂಟಿಮೆಂಟ್‌, ಕಾಮಿಡಿ, ಆ್ಯಕ್ಷನ್ಸ್‌ ಎಲ್ಲವೂ ಇರಲಿದೆಯಂತೆ. ಚಿತ್ರದಲ್ಲಿ ಪ್ರತಿಯೊಂದು ಪಾತ್ರಗಳೂ ಪ್ರಮುಖವಾಗಿದ್ದು, ಒಂದಕ್ಕೊಂದು ಪಾತ್ರಗಳು ಕನೆಕ್ಟ್ ಆಗುತ್ತ ಚಿತ್ರದ ಕಥೆ ಸಾಗುತ್ತ ಹೋಗುತ್ತವೆ.

“ಬಾಕ್ಸ್‌ ಆಫೀಸ್‌ ಸಿನಿ ಕ್ರಿಯೇಷನ್ಸ್‌’ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಓಂಕಾರ್‌ ಮತ್ತು ಪ್ರಶಾಂತ್‌ ಅಂಚನ್‌ ನಿರ್ಮಾಪಕರಾಗಿ ಬಂಡವಾಳ ಹೂಡುತ್ತಿದ್ದಾರೆ. ಉಳಿದಂತೆ ಚಿತ್ರಕ್ಕೆ ಕೀರ್ತನ್‌ ಪೂಜಾರಿ ಛಾಯಗ್ರಹಣ, ರೋಣದ ಬಕ್ಕೇಶ್‌ ಮತ್ತು ಕಾರ್ತಿಕ್‌ ಚೆನ್ನೋಜಿರಾವ್‌ ಸಂಗೀತ ನೀಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next