Advertisement

ನಿಸರ್ಗ ಸ್ನೇಹಿ ಕ್ರಿಸ್ಮಸ್‌ ಆಚರಣೆ: ಪೇಪರ್‌ಸೀಡ್‌ ಸಾಂತಾಕ್ಲಾಸ್‌, ನಕ್ಷತ್ರ, ಘಂಟೆ ತಯಾರಿ

10:13 PM Dec 09, 2020 | mahesh |

ಮಹಾನಗರ: ಕ್ರಿಸ್ಮಸ್‌ ಹಬ್ಬದ ಸಂಭ್ರಮಕ್ಕೆ ನಿಸರ್ಗ ಸ್ನೇಹಿ ಸ್ಪರ್ಶ ನೀಡಲು ಇಲ್ಲೊಂದು ಸಂಸ್ಥೆ ಶ್ರಮಿಸುತ್ತಿದೆ. ಹಸುರು ಕ್ರಿಸ್ಮಸ್‌ಗಾಗಿ ಪೇಪರ್‌ ಸೀಡ್‌ನಿಂದ ಸಾಂತಾಕ್ಲಾಸ್‌, ನಕ್ಷತ್ರ, ಘಂಟೆಗಳನ್ನು ತಯಾರಿಸಲಾಗುತ್ತಿದೆ.

Advertisement

ಈ ವರ್ಷದ ಕೊನೆಯ ಹಬ್ಬ ಕ್ರಿಸ್ಮಸ್‌ಗೆ 15 ದಿನಗಳು ಬಾಕಿ ಉಳಿದಿವೆ. ಮನೆ ಮನೆಗಳಲ್ಲಿ ಕ್ರಿಸ್ಮಸ್‌ ಟ್ರೀ ಇರಿಸಿ ಅಲಂಕರಿಸುವುದು ಹಬ್ಬದ ಸಂಭ್ರಮಕ್ಕೆ ಹೊಸ ಮೆರುಗು ನೀಡುತ್ತದೆ. ಈ ಕ್ರಿಸ್ಮಸ್‌ ಟ್ರೀಗಳ ಅಲಂಕಾರಕ್ಕೆ ಪ್ಲಾಸ್ಟಿಕ್‌ ಬದಲಾಗಿ ಮರು ಬಳಕೆ ಮಾಡಲು ಸಾಧ್ಯವಾಗುವ ಪೇಪರ್‌ ಸೀಡ್‌ಗಳನ್ನು ಬಳಸಿದರೆ ಹೆಚ್ಚು ಉತ್ತಮ ಎಂಬ ಹಿನ್ನೆಲೆಯಲ್ಲಿ ಪಕ್ಷಿಕೆರೆಯ ಪೇಪರ್‌ ಸೀಡ್‌ ಸಂಸ್ಥೆಯು ಹಳೆಯ ಕಾಗದ, ವೃತ್ತಪತ್ರಿಕೆಗಳನ್ನು ಬಳಸಿಕೊಂಡು ನಿಸರ್ಗ ಸ್ನೇಹಿಯಾದ ಬೆಲ್‌, ಸಾಂತಾಕ್ಲಾಸ್‌, ನಕ್ಷತ್ರ, ಘಂಟೆಗಳನ್ನು ತಯಾರಿಸುತ್ತಿದೆ. ಇದಕ್ಕೆ ನೀರಿನಲ್ಲಿ ಕರಗುವ ಗುಣ ಹೊಂದಿರುವ ವಾಟರ್‌ಬೇಸ್‌ ಬಣ್ಣಗಳನ್ನು ಬಳಸಲಾಗಿದ್ದು, ನೋಡಲು ಆಕರ್ಷಕವಾಗಿ ಕಾಣುತ್ತದೆ. ಸುಮಾರು 8 ಮಂದಿಯ ತಂಡ ಈ ಕೆಲಸದಲ್ಲಿ ನಿರತವಾಗಿದೆ ಎಂದು ಸಂಸ್ಥೆಯ ನಿತಿನ್‌ ವಾಸ್‌ ತಿಳಿಸಿದ್ದಾರೆ.

ಪರಿಸರಸ್ನೇಹಿ ಹಬ್ಬ
ಎಲ್ಲ ಹಬ್ಬಗಳನ್ನೂ ಪರಿಸರಸ್ನೇಹಿಯಾಗಿ ಆಚರಿಸಬೇಕೆಂಬ ಉದ್ದೇಶ ಸಂಸ್ಥೆಯದ್ದು. ಸ್ವಾತಂತ್ರÂ ದಿನಾಚರಣೆ, ಗಣೇಶ ಚತುರ್ಥಿ, ರಕ್ಷಾ ಬಂಧನ ಹಬ್ಬಗಳ ವೇಳೆಯೂ ಪರಿಸರಸ್ನೇಹಿ ಆಚರಣೆಗೆ ಒತ್ತು ನೀಡಿ ಪೇಪರ್‌ ಸೀಡ್‌ ಧ್ವಜ, ಗಣೇಶನ ಮೂರ್ತಿ, ರಕ್ಷಾಬಂಧನವನ್ನು ಸಂಸ್ಥೆ ತಯಾರಿಸಿತ್ತು.

ಬೇಡಿಕೆ ಬರುತ್ತಿದೆ
ಪೇಪರ್‌ ಸೀಡ್‌ ನಕ್ಷತ್ರ, ಘಂಟೆ, ಸಾಂತಾಕ್ಲಾಸ್‌ ಮುಂತಾದವುಗಳಿಗೆ ಬೇಡಿಕೆ ಬರುತ್ತಿದೆ. ಮುಂಬಯಿ, ಹೈದರಾಬಾದ್‌, ಉಡುಪಿ, ಬೆಂಗಳೂರು ಕಡೆಗಳಿಂದ ಉತ್ತಮ ಬೇಡಿಕೆಯಿದೆ. ಎನ್‌ಜಿಒ ಸಂಸ್ಥೆ ಗಳು, ಪರಿಸರವಾದಿಗಳೂ ನಮ್ಮ ಪ್ರಯತ್ನ ವನ್ನು ಜನರಿಗೆ ತಲುಪಿಸುತ್ತಿದ್ದಾರೆ.
-ನಿತಿನ್‌ ವಾಸ್‌, ಪೇಪರ್‌ ಸೀಡ್‌ ಸಂಸ್ಥೆ ರೂವಾರಿ

Advertisement

Udayavani is now on Telegram. Click here to join our channel and stay updated with the latest news.

Next