Advertisement
ಜೂ.8 ರಂದು ಮುಂಜಾನೆ 5.30 ಕ್ಕೆ ಮಂಜುನಾಥ ಮನೆ ಸಮೀಪದ ಮರದಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಜೂ.7 ರಂದು ಕಾಸರಗೋಡಿನಲ್ಲಿ ತಂಡವೊಂದು ಹಲ್ಲೆ ಮಾಡಲಾಗಿತ್ತು ಎನ್ನಲಾಗಿದೆ. ತಂಡದಿಂದ ರಕ್ಷಿಸಿಕೊಳ್ಳಲು ಓಡಿ ಪರಾರಿಯಾಗಿದ್ದರೆನ್ನಲಾಗಿದೆ.
ಕಾಸರಗೋಡು: ಸೀತಾಂಗೋàಳಿಯ ಕಿನಾ#Å ಪಾರ್ಕ್‌ನ ಪಾದರಕ್ಷೆ ತಯಾರಿ ಸಂಸ್ಥೆಯಿಂದ 10 ಲಕ್ಷ ರೂ. ಮೌಲ್ಯದ ಪಾದರಕ್ಷೆ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮಜಿಬೈಲು ನಿವಾಸಿ ಸಹಿತ ನಾಲ್ವರನ್ನು ಬದಿಯಡ್ಕ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕಟ್ಟತ್ತಡ್ಕ ನಿವಾಸಿ ನಸೀರ್ ಹಾಗು ಕೊಲ್ಲಿಯಲ್ಲಿರುವ ವ್ಯಕ್ತಿಯೋರ್ವರು ಸೀತಾಂಗೋಳಿಯಲ್ಲಿ ವೆಲ್‌ಫಿಟ್ ಎಂಬ ಪಾದರಕ್ಷೆ ತಯಾರಿ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಮೇ 22 ರಂದು ಪಾದರಕ್ಷೆ ಕಳವಾಗಿತ್ತು. ಕಳವು ಮಾಡಿದ ಪಾದರಕ್ಷೆಯನ್ನು ಕಾಸರಗೋಡು ನಗರದ ರಸ್ತೆ ಬದಿ ಮಾರಾಟ ಮಾಡುತ್ತಿದ್ದಾಗ ಆರೋಪಿಗಳನ್ನು ವಶಪಡಿಸಿದ್ದು, ವಿಚಾರಣೆ ನಡೆಯುತ್ತಿದೆ.