Advertisement
ಇದು ಶಿಕ್ಷಣಕ್ಕೆ ಹೆಸರುವಾಸಿಯಾದ ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ವಿದ್ಯಾರ್ಥಿನಿ ಮತ್ತು ಆಕೆಯ ತಾಯಿಯ ಛಲದ ಕಥೆ.
ತಾಯಿ ಮತ್ತು ಮಗಳು ಕಡಬದಿಂದ ಬೆಳಗ್ಗೆ 6 ಗಂಟೆಯ ಬಸ್ ಏರಿ ಮಂಗಳೂರಿಗೆ ಬರುತ್ತಾರೆ. ಮಗಳನ್ನು ಕಾಲೇಜಿಗೆ ಬಿಟ್ಟು ತಾಯಿ ನಗರದ ವೆನ್ಲಾಕ್ ಆಸ್ಪತ್ರೆ ಪರಿಸರದಲ್ಲಿ ಉಳಿದುಕೊಳ್ಳುತ್ತಾರೆ. ಅಪರಾಹ್ನ 2.30ರ ಸುಮಾರಿಗೆ ಮಗಳ ಕಾಲೇಜಿನ ಬಳಿಯಿರುವ ಬಸ್ ನಿಲ್ದಾಣಕ್ಕೆ ಬರುತ್ತಾರೆ. 3.40ಕ್ಕೆ ತರಗತಿ ಮುಗಿಯುತ್ತದೆ. 4 ಗಂಟೆಯ ಬಳಿಕ ಬಸ್ಸಿನಲ್ಲಿ ಮನೆಗೆ ಪ್ರಯಾಣ!
Related Articles
ನಾನು ಬೀಡಿ ಕಟ್ಟುತ್ತಿದ್ದೆ. ಶಸ್ತ್ರಚಿಕಿತ್ಸೆ ಕೂಡ ಆಗಿತ್ತು. ಈಗ ಮಗಳ ಜತೆ ಮಂಗಳೂರಿಗೆ ಬಂದು ಹೋಗುತ್ತೇನೆ. ಬೀಡಿ ಕಟ್ಟಲು ಸಮಯ ಸಿಗುವುದಿಲ್ಲ. ಪತಿ ಕೂಲಿ ಕೆಲಸ ಮಾಡುತ್ತಾರೆ. ಮಗಳ ಆಸೆಯಂತೆ ನಗರದ ಕಾಲೇಜಿಗೆ ಸೇರಿಸಿದ್ದೇವೆ. ಆದರೆ ಹಾಸ್ಟೆಲ್ ಸಿಗದೆ ಸಮಸ್ಯೆಯಾಗಿದೆ. ಒಬ್ಬಳೇ ಬಂದು ಹೋಗುತ್ತೇನೆ ಎನ್ನುತ್ತಾಳೆ. ಆದರೆ ನನಗೆ ಮನಸ್ಸು ಒಪ್ಪುವುದಿಲ್ಲ. ಅದಕ್ಕಾಗಿ ಅವಳ ಜತೆಗೆ ನಾನು ಕೂಡ ಬರುತ್ತೇನೆ. ನಗರಕ್ಕೆ ಬಂದು ಆಕೆಯ ತರಗತಿ ಮುಗಿಯುವ ವರೆಗೆ ಆಸ್ಪತ್ರೆಯ ಆವರಣದಲ್ಲಿ ಸಮಯ ಕಳೆಯುತ್ತೇನೆ. ಹಾಸ್ಟೆಲ್‌ನಲ್ಲಿ ವಿಚಾರಿಸಿದರೆ ಈಗ ಸೇರಿಸುವುದಿಲ್ಲ. ಸರ್ವರ್ ಸಮಸ್ಯೆ ಇದೆ. ದಾಖಲಾತಿ ಆರಂಭವಾಗಿಲ್ಲ ಎಂದಿದ್ದಾರೆ.
-ವಿದ್ಯಾರ್ಥಿನಿಯ ತಾಯಿ
Advertisement
ಸರ್ವರ್ ಸಮಸ್ಯೆ;ಶೀಘ್ರ ಪರಿಹಾರ
ಪರಿಶಿಷ್ಟ ಜಾತಿಯವರ ಹಾಸ್ಟೆಲ್ ಪ್ರವೇಶ ಪ್ರಕ್ರಿಯೆಗೆ ಸರ್ವರ್ ಸಮಸ್ಯೆ ತೊಡಕಾಗಿದೆ. ಇದು ಇಡೀ ರಾಜ್ಯದಲ್ಲಿರುವ ಸಮಸ್ಯೆ. ಈ ಬಗ್ಗೆ ಸೋಮವಾರ ಸಭೆ ನಡೆಸಲಾಗಿದ್ದು, ಆನ್‌ಲೈನ್‌ನಲ್ಲಿ ದಾಖಲಾತಿ ಸಾಧ್ಯವಾಗದಿದ್ದರೆ ಮ್ಯಾನುವಲ್ ಅರ್ಜಿ ಸ್ವೀಕರಿಸಿ ದಾಖಲಾತಿ ಮಾಡಿಕೊಳ್ಳಲು ಆಯುಕ್ತರಿಂದ ಸೂಚನೆ ಬಂದಿದೆ. ಅದರಂತೆ ಕ್ರಮ ತೆಗೆದುಕೊಳ್ಳುತ್ತೇವೆ. ಸರ್ವರ್ ಸಮಸ್ಯೆಯೂ ಶೀಘ್ರ ಬಗೆಹರಿಯುವ ನಿರೀಕ್ಷೆ ಇದೆ.
-ಪಾರ್ವತಿ, ವ್ಯವಸ್ಥಾಪಕರು, ಸಮಾಜ ಕಲ್ಯಾಣ ಇಲಾಖೆ -ಸಂತೋಷ್ ಬೊಳ್ಳೆಟ್ಟು