Advertisement
ಕಷ್ಟ, ನೋವು ಸಾಮಾನ್ಯವಾಗಿರುತ್ತವೆ. ಕೆಲವೊಮ್ಮೆ ಕಷ್ಟಗಳು ನಮ್ಮನ್ನು ಗಟ್ಟಿಯಾಗಿಸಬಹುದು, ಇನ್ನೂ ಕೆಲವು ಅನುಭವವಾಗಬಹುದು. ಇವೆಲ್ಲವೂ ನಮ್ಮ ಜೀವನದ ಗತಿಯನ್ನು ಬದಲಿಸಿಬಿಡುತ್ತವೆ.
Related Articles
Advertisement
ಚಿಕ್ಕ ವಯಸ್ಸಿನಲ್ಲಿ ಹಣ ಸಂಪಾದನೆಗೆ ಮನೆಯವರಿಗೆ ಸಹಾಯ ಮಾಡು ಎಂದು ಮನೆಯವರು ಕೇಳಿಕೊಂಡಾಗ ಆಗ ಧೀರೂಬಾಯಿ ಅಂಬಾನಿ “ನೀವು ಹಣದ ಬಗ್ಗೆ ಚಿಂತಿಸಬೇಡಿ, ಮುಂದೊಂದು ದಿನ ರಾಶಿಯಷ್ಟು ಹಣವನ್ನು ಸಂಪಾದಿಸುತ್ತೇನೆ ಎಂದು ಎದೆಯುಬ್ಬಿಸಿ ಹೇಳಿದನಂತೆ. ಕೇವಲ ಹೇಳುವುದಷ್ಟೇ ಅಲ್ಲ. ಅದಕ್ಕೆ ಬೆವರು ಕೂಡ ಹರಿಸಿದ.
ತನ್ನ 16ನೇ ವಯಸ್ಸಿನಲ್ಲಿ ಧೀರೂಬಾಯಿ ಅವರು ಯೆಮನ್‌ನ ಅಡೆನ್‌ಗೆ ಹೋಗಿ ಅಲ್ಲಿ ಕಂಪೆನಿಯೊಂದರಲ್ಲಿ 300 ರೂ. ತಿಂಗಳ ಸಂಬಳಕ್ಕೆ ದುಡಿಯುತ್ತಾರೆ. ಮುಂದೆ ಅದೇ ಅಡೆನ್ ಬಂದರಿನಲ್ಲಿ ಇಂಧನ ಭರ್ತಿ ಮಾಡುವ ಕೇಂದ್ರದ ವ್ಯವಸ್ಥಾಪಕನಾಗಿ ಭಡ್ತಿ ಹೊಂದುತ್ತಾರೆ. ಮುಂದೆ ಸ್ವೋದ್ಯಮದ ಆಲೋಚನೆ ಅವರಲ್ಲಿ ಮೊಳಕೆಯೊಡೆದು ತಮ್ಮದೆ ಕಂಪೆನಿ ರಿಲಾಯನ್ಸ್ ಕಂಪೆನಿಯನ್ನು ಆರಂಭಿಸುತ್ತಾರೆ.
ಸೋದರ ಸಂಬಂಧಿಯೊಂದಿಗೆ ಧೀರೂಬಾಯಿ ಅಂಬಾನಿ ಅವರು ಮುಂಬಯಿಯಲ್ಲಿ ಆರಂಭಿಸಿದ ರಿಲಯನ್ಸ್ ಕಂಪೆನಿ ಕೇವಲ ಬಂಡವಾಳ ಹೂಡಿಕೆ ಮಾತ್ರವಲ್ಲ, ನಿರಂತರ ಶ್ರಮ, ಛಲ ಹಾಗೂ ಸಾಹಸವನ್ನು ಹೂಡಿದ್ದರು.ಮೂಗಿನ ಮೇಲೆ ಬೆರಳಿನಿಟ್ಟು ನೋಡುವಂತೆ ಬೆಳವಣಿಗೆ ಕಂಡಿತ್ತು. ಬಡತನ ಎಂಬ ಬೇಗುದಿಯಲ್ಲಿ ಬೆಂದ ಸಾಮಾನ್ಯನೊಬ್ಬನು ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಸೇರ್ಪಡೆಯಾಗುತ್ತಾನೆ ಎಂದರೆ ನಿಜಕ್ಕೂ ಕುತೂಹಲ ಜತೆಗೆ ಆಶ್ಚರ್ಯದ ಸಂಗತಿ. ಮುಂದೆ ಶತ ಕೋಟಿ ಡಾಲರ್‌ನ ಒಡೆಯನಾಗುತ್ತಾನೆ.
ವ್ಯವಹಾರದಲ್ಲಿ ಕೌಶಲವನ್ನು ರೂಢಿಸಿಕೊಂಡ ಇವರು ಉದ್ಯಮವನ್ನು ಬಹು ಆಯಾಮದಲ್ಲಿ ತೊಡಗಿಸಿಕೊಳ್ಳುತ್ತಾರೆ. ರಿಲಯನ್ಸ್ ಕಂಪೆನಿಯ ಹೆಸರಿನ ಮೇಲೆ ತೈಲೋದ್ಯಮ, ಮಸಾಲೆ ಪದಾರ್ಥಗಳ ವ್ಯಾಪಾರ, ಜವುಳಿ ಉದ್ಯಮ, ಪ್ಲಾಸ್ಟಿಕ್ ಉದ್ಯಮದ ಜತೆಗೆ ಇತರೆ ಉದ್ಯಮಗಳನ್ನು ಆರಂಭಿಸುತ್ತಾರೆ. ಮುಟ್ಟಿದ್ದೆಲ್ಲವೂ ಚಿನ್ನ ಎಂಬಂತೆ ಅವರು ಆರಂಭಿಸಿದ ಎಲ್ಲ ಉದ್ಯಮಗಳು ಕೂಡ ಅವರಿಗೆ ಯಶಸ್ಸು ತಂದುಕೊಡುತ್ತವೆ. ಇದರಿಂದ ಅವರು ಸಾಧನೆಯ ಶಿಖರವನ್ನು ಏರುತ್ತಾರೆ.
ಪೆಟ್ರೋ ರಾಸಾಯನಿಕ ಉದ್ಯಮದಲ್ಲಿ ಅವರು ಕಂಡ ಯಶಸ್ಸು ಮತ್ತು ಬಡತನದಿಂದ ಸಿರಿತನಕ್ಕೆ ಮುನ್ನಡೆದ ಅವರ ದಂತಕಥೆಯು ಭಾರತೀಯರ ಮನದಲ್ಲಿ ಒಬ್ಬ ಅದ್ವಿತೀಯ ವ್ಯಕ್ತಿಯನ್ನಾಗಿ ಮಾಡಿತು. ಉತ್ತಮ ಉದ್ದಿಮೆಯ ಉತ್ತಮ ಮುಂದಾಳಾಗಿ, ಅವರು ಒಬ್ಬ ಪ್ರೇರಕರೂ ಆಗಿದ್ದರು. ಅವರು ಸಾರ್ವಜನಿಕ ಭಾಷಣಗಳನ್ನು ನೀಡಿದ್ದು ವಿರಳ. ಮಿಲಿಯನ್ ಮನುಷ್ಯರಾದ ಧೀರೂಭಾಯಿಯವರ ಜೀವನ ಇಂದಿನ ಯುವಪಿಳಿಗೆ ಸ್ಪೂರ್ತಿಯಾಗಿಸಿಕೊಂಡು ತಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಬೇಕು.