Advertisement
ಹೆಬ್ರಿ ಬಸ್‌ಸ್ಟಾಂಡ್ ಸಮೀಪ ಹೆಬ್ರಿ-ತಾಣ ರಸ್ತೆಯ ಆರಂಭದಲ್ಲಿ ಈ ಪ್ರತಿಮೆ ನಿರ್ಮಾಣಗೊಳ್ಳಲಿದೆ. ಇದರ ಕೆಲಸಕ್ಕೆ ಮತ್ತೋರ್ವ ಸೈನಿಕ ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ಹೆಬ್ರಿ ಬೀಡಿನ ಚಂದುಕುಂದು ಸಚಿನ್‌ಕುಮಾರ್ ಶೆಟ್ಟಿ ಟೊಂಕಕಟ್ಟಿದ್ದಾರೆ.
ಯೋಧ ಉದಯಪೂಜಾರಿ ಹೆಬ್ರಿ ತಾಲೂಕಿಕ ನಾಡಾ³ಲು ಗ್ರಾ.ಪಂ.ನ ಕಾಸನಮಕ್ಕಿಯವರು. 2001 ಫೆ.26ರಂದು ಕಾರ್ಗಿಲ್ ಯುದ್ಧ ಭೂಮಿಯಲ್ಲಿ ತಾನು ಊಟ ಮಾಡಿದ ತಟ್ಟೆ ತೊಳೆಯುತ್ತಿರುವ ವೇಳೆ ಶತ್ರುಗಳ ದಾಳಿಗೆ ಬಲಿಯಾಗಿದ್ದರು. ಕೈಯಲ್ಲಿ ತಟ್ಟೆಯ ಬದಲು ಆಯುಧ ಇರುತ್ತಿದ್ದರೆ ಶತ್ರುಗಳನ್ನು ಸದೆಬಡಿಯುತ್ತಿದ್ದರು ಎಂದು ಸಚಿನ್‌ಹೇಳುತ್ತಾರೆ.
Related Articles
ಸಚಿನ್‌ಅವರು ಶಾಲೆಗೆ ಹೋಗುವ ವೇಳೆ ಉದಯ್ ಅವರ ಮೃತದೇಹ ಮೆರವಣಿಗೆಯಲ್ಲಿ ಆಗಮಿಸಿದ್ದು, ಇದನ್ನು ಕಂಡು ಅವರಿಗೂ ದೇಶಸೇವೆಯ ಪ್ರೇರಣೆಯಾಗಿತ್ತಂತೆ. ಅದರಂತೆ ಅವರು 2011ರಲ್ಲಿ ಸೇನೆಗೆ ಸೇರ್ಪಡೆಯಾಗಿದ್ದು, ಕಾಶ್ಮೀರದಲ್ಲಿದ್ದಾರೆ. 15 ದಿನದ ಹಿಂದೆ ಸಚಿನ್‌ಅವರು ಊರಿಗೆ ಬಂದಾಗ ಉದಯ ಪೂಜಾರಿ ಅವರ ಮನೆಗೆ ಭೇಟಿ ನೀಡಿ ಪ್ರತಿಮೆ ನಿರ್ಮಾಣ ಬಗ್ಗೆ ಅವರ ಹೆತ್ತವರಿಂದ ಸಮ್ಮತಿ ಪಡೆದಿದ್ದಾರೆ.
Advertisement
ಆಗಸ್ಟ್ 15ಕ್ಕೆ ಲೋಕಾರ್ಪಣೆ ದೇಶಕ್ಕಾಗಿ ಪ್ರಾಣತೆತ್ತ ಉದಯ ಅವರ ಸ್ಮಾರಕ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮ ಆಗಸ್ಟ್ 15ರ ಸ್ವಾತಂತ್ರ್ಯದಿನದಂದು ನಡೆಯಲಿದೆ ಎಂದು ಸಚಿನ್‌ತಿಳಿಸಿದ್ದಾರೆ. ಯುವ ಪೀಳಿಗೆಗೆ ತಿಳಿವಳಿಕೆ ಮೂಡಬೇಕು
ದೇಶಕ್ಕಾಗಿ ಪ್ರಾಣತೆತ್ತ ಪ್ರತಿಯೊಬ್ಬರ ಸ್ಮಾರಕ ನಿರ್ಮಾಣವಾಗಬೇಕು. ಆ ಮೂಲಕ ಯುವ ಪೀಳಿಗೆಗೆ ದೇಶ ಪ್ರೇಮದ ಬಗ್ಗೆ ತಿಳಿವಳಿಕೆ ಮೂಡಬೇಕು ಎಂಬ ನಿಟ್ಟಿನಲ್ಲಿ ಊರಿನ ವೀರ ಯೋಧ ಉದಯಪೂಜಾರಿ ಸ್ಮಾರಕ ನಿರ್ಮಾಣಕ್ಕೆ ಎಲ್ಲರ ಸಹಕಾರದೊಂದಿಗೆ ಮುಂದಾಗಿದ್ದೇನೆ.
–ಸಚಿನ್‌ಕುಮಾರ್ ಶೆಟ್ಟಿ,
ಸೈನಿಕ, ಚಂದುಕುಂದು ಬೀಡು ಇತರರಿಗೆ ಮಾದರಿ
ದೇಶ ಸೇವೆ ಮಾಡುವುದರ ಜತೆಗೆ ದೇಶಕ್ಕಾಗಿ ಹೋರಾಡಿ ಮಡಿದ ಯೋಧನ ಪ್ರತಿಮೆಯನ್ನು ಹೆಬ್ರಿಯ ಹೃದಯ ಭಾಗದಲ್ಲಿ ನಿರ್ಮಾಣಕ್ಕೆ ಮುಂದಾದ ಸಚ್ಚಿನ್ ಇತರರಿಗೆ ಮಾದರಿಯಾಗಿದ್ದಾರೆ.
-ಮಿಥುನ್ ಶೆಟ್ಟಿ ಚಾರ,
ಸಾಮಾಜಿಕ ಕಾರ್ಯಕರ್ತ ಹೆಬ್ರಿ -ಹೆಬ್ರಿ ಉದಯಕುಮಾರ್ ಶೆಟ್ಟಿ