Advertisement

ಸಾಮೂಹಿಕ ವಿವಾಹ ಭಾಗ್ಯದ ವಿವಾಹ

03:26 PM Mar 04, 2023 | Team Udayavani |

ಬಳಗಾನೂರು: ಗೌಡನಭಾವಿ ಗ್ರಾಮದಲ್ಲಿ ಉಟಕನೂರು ಮೌನಯೋಗಿ ಲಿಂ|ಶ್ರೀಮರಿಬಸವಲಿಂಗೇಶ್ವರು ಪ್ರತಿಷ್ಠಾಪಿಸಿದ ಶ್ರೀಕಟ್ಟೆಬಸವಲಿಂಗೇಶ್ವರ 30ನೇ ಜಾತ್ರಾ ಮಹೋತ್ಸವ ಹಾಗೂ ಲಿಂ| ನಾಗಪ್ಪ ತಾತನವರ ಪುಣ್ಯಸ್ಮರಣೋತ್ಸವ ನಿಮಿತ್ತ ನಡೆದ 14 ಜೋಡಿ ಸಾಮೂಹಿಕ ವಿವಾಹಗಳು ಭಾಗ್ಯದ ವಿವಾಹಗಳು ಎಂದು ಉಟಕನೂರು ಅಡವಿಸಿದ್ದೇಶ್ವರಮಠದ ಬಸವರಾಜದೇಶಿಕೇಂದ್ರ ಸ್ವಾಮಿಗಳು ಹೇಳಿದರು.

Advertisement

ಗೌಡನಭಾವಿ ಗ್ರಾಮದ ಶ್ರೀಕಟ್ಟೆಬಸವಲಿಂಗೇಶ್ವರ 30ನೇ ಜಾತ್ರಾ ಮಹೋತ್ಸವ, ಲಿಂ| ನಾಗಪ್ಪ ತಾತನವರ ಪುಣ್ಯಸ್ಮರಣೋತ್ಸವ ನಿಮಿತ್ತ ಹಮ್ಮಿಕೊಂಡ ಸಾಮೂಹಿಕ ವಿವಾಹ ಹಾಗೂ ಮಹಾದಾಸೋಹಿ ಕಲಬುರ್ಗಿ ಶರಣಬಸವೇಶ್ವರ ಪುರಾಣ ಪ್ರವಚನ ಮಹಾಮಂಗಲ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಪವಾಡ ಪುರುಷರು, ಮಹಾತ್ಮರೆನಿಕೊಂಡ ಉಟಕನೂರು ಲಿಂ| ಮರಿಬಸವಲಿಂಗತಾತನವರ ಪರಮಶಿಷ್ಯರಾದ ಲಿಂ| ಶ್ರೀನಾಗಪ್ಪ ತಾತನವರು ಶ್ರೀಗಳ ಕೃಪಾಶೀರ್ವಾದಗಳೊಂದಿಗೆ ಮುಕ್ತಿ ಮಾರ್ಗ ಕಂಡುಕೊಂಡು, ಸದ್ಭಕ್ತರರಿಗೆ ಮಾರ್ಗದರ್ಶಕರಾಗಿ, ಧಾರ್ಮಿಕ ಆದ್ಯತ್ಮೀಕ ಕಾರ್ಯಕ್ರಮಗಳು ಸರಾಗವಾಗಿ ನಡೆಯುವಂತೆ ಮಾಡಿದ ಶ್ರೀನಾಗಪ್ಪ ತಾತನವರು ಎಂದರು.

ಜಾತ್ರಾ ನಿಮಿತ್ತ ಲಿಂ| ನಾಗಪ್ಪ ತಾತನವರ ಕೃಪಾಶೀರ್ವಾದದೊಂದಿಗೆ, ಪಲ್ಲಕ್ಕಿ ಮಹೋತ್ಸವ, ಮೆರವಣಿಗೆ, ಮಹಾದಾಸೋಹಿ ಕಲಬುರ್ಗಿ ಶರಣಬಸವೇಶ್ವರ ಪುರಾಣ ಪ್ರವಚನ ಮಹಾಮಂಗಲ, ಉಚ್ಚಾಯ ಮಹೋತ್ಸವ ಸೇರಿ ಇತರೆ ಧಾರ್ಮಿಕ ಕಾರ್ಯಕ್ರಮಗಳು ಉಟಕನೂರು ಅಡವಿಸಿದ್ದೇಶ್ವರ ಮಠದ ಮರಿಬಸವರಾಜ ದೇಶಿಕೇಂದ್ರಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಂಸದ ಕೆ.ವಿರುಪಾಕ್ಷಪ್ಪ, ಮುಖಂಡರಾದ ನಿರುಪಾದೇಪ್ಪ ವಕೀಲರು, ಸಿದ್ದಯ ಶಾಸ್ತ್ರಿಗಳು ಮಾತನಾಡಿದರು.

ಇರಲಕ್‌ ಮಠದ ಬಸವಪ್ರಸಾದ ಶರಣರು, ಲಿಂ| ಶ್ರೀನಾಗಪ್ಪ ತಾತನವರ ಶಿಷ್ಯರಾದ ಅಮರೇಶ, ಚನ್ನಪ್ಪತಾತ ಗೊರೇಬಾಳ, ತಿಪ್ಪನಟ್ಟಿ ಲಿಂಗಣ್ಣತಾತ, ಎಲೆಕೂಡ್ಲಿಗಿ ತಿಮ್ಮಣ್ಣತಾತ, ಅರ್ಚಕರಾದ ಚಂದ್ರಶೇಖರಸ್ವಾಮಿ, ವಿಜಯಕುಮಾರಸ್ವಾಮಿ, ಮಸ್ಕಿ ಚೇತನಪಾಟೀಲ್‌, ಗ್ರಾಪಂ ಅಧ್ಯಕ್ಷೆ ಹನುಮಂತೆಮ್ಮ ದೊಡ್ಡಪ್ಪ, ಪಿಡಿಒ ಲಕ್ಷ್ಮೀಕಾಂತ, ಅಮರೇಶ ವಕೀಲರು, ಮಲ್ಲನಗೌಡ ಸುಂಕನೂರು, ರಮೇಶ ಕರೆಕುರಿ, ಮುರುಗೇಶ, ಶರಣಪ್ಪ ಜಾಲಿಹಾಳ, ದುರಗನಗೌಡ ಸೇರಿದಂತೆ ಜನಪ್ರತಿನಿ ಧಿಗಳು ಇದ್ದರು.

ಸಸಿ ವಿತರಣೆ: ಮಸ್ಕಿ ಪ್ರಕೃತಿ ಫೌಂಡೇಶನ್‌ ವತಿಯಿಂದ ನವದಂಪತಿಗಳಿಗೆ ಶ್ರೀಗಳು ಹಾಗೂ ಪ್ರಕೃತಿ ಫೌಂಡೇಷನ್‌ ಪದಾಧಿಕಾರಿಗಳು ಸಸಿ ವಿತರಿಸಿದರು. ಬಳಗಾನೂರು ಪಿಎಸ್‌ಐ ಪ್ರಕಾಶರಡ್ಡಿಡಂಬಳ ನೇತೃತ್ವದಲ್ಲಿ ಪೊಲೀಸರು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next