ಬೆಂಗಳೂರು : ಅಧಿಕಾರಿಗಳನ್ನ ಜಿಲ್ಲಾ ಉಸ್ತುವಾರಿ ಸಚಿವರು, ಸರ್ಕಾರ ಕಂಟ್ರೋಲ್ ಗೆ ತೆಗೆದುಕೊಳ್ಳಬಹುದು. ರೋಹಿಣಿ ಸಿಂಧೂರಿ ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಕೆಲಸ ಮಾಡಿದ್ದಾರೆ. ಮಹಾಮಸ್ತಕಾಭಿಷೇಕ ಉತ್ಸವದಲ್ಲಿ ಸಂದರ್ಭದಲ್ಲಿ ನಾನು ನೋಡಿದ್ದೇನೆ. ನಿರ್ವಹಣೆ ಮಾಡುವ ಸಂದರ್ಭದಲ್ಲಿ ಜನಪ್ರತಿನಿಧಿಗಳನ್ನ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು ಎಂದು ಶಿಲ್ಪನಾಗ್-ರೋಹಿಣಿ ಸಿಂಧೂರಿ ಜಟಾಪಟಿ ವಿಚಾರವಾಗಿ ಮಾಜಿ ಸಚಿವ ಎ. ಮಂಜು ಪ್ರತಿಕ್ರಿಯೆ ನೀಡಿದ್ದಾರೆ.
ಡಿಸಿ ಅಂದ್ರೆ ಜಿಲ್ಲೆಯ ಮೊದಲ ಸೇವಕರು. ಎಲ್ಲ ಅಧಿಕಾರಿಗಳು ಇಷ್ಟ ಬಂದಹಾಗೆ ಕೆಲಸ ಮಾಡಲು ಅವಕಾಶವಿಲ್ಲ. ನನ್ನ ಅವಧಿಯಲ್ಲಿ ಕೆಲಸ ಮಾಡುವಾಗ ಕೆಲವು ತಪ್ಪುಗಳನ್ನ ತಿದ್ದಿ ತಿಳಿ ಹೇಳಿದ್ದೆ. ಜನರು ಬರುವಾಗ ಕಾಲ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದು ಬೇಡ ಗೌರವ ಕೊಡಬೇಕು ಎಂದು ಹೇಳಿದ್ದೆ ಎಂದರು.
ಈ ಬಗ್ಗೆ ಚೀಫ್ ಸೆಕರೇಟರಿ, ಸಿಎಂ ಗಮನಕ್ಕೂ ತಂದಿದ್ದೆ. ಹಾಸನಕ್ಕೆ ಸಿಎಂ ಸಿದ್ದರಾಮಯ್ಯ ಬಂದಿದ್ದಾಗ ಅವರನ್ನ ಆಹ್ವಾನ ಮಾಡಲು ಪ್ರೋಟೋಕಾಲ್ ಪ್ರಕಾರ ಡಿಸಿ ಅವರು ಬರಬೇಕಿತ್ತು, ಆದ್ರೆ ರೋಹಿಣಿ ಸಿಂಧೂರಿ ಬರಲಿಲ್ಲ, ಆಗ ಸಿದ್ದರಾಮಯ್ಯಗೆ ವರ್ಗಾವಣೆ ಮಾಡುವಂತೆ ಹೇಳಿದ್ದೆ. ನಂತರದ ಚುನಾವಣೆಯಲ್ಲಿ ನಾನು ಸೋತೆ, ಅವರ ಪರ ಯಾರಿದ್ದಾರೋ ಅವ್ರೇ ಅವರನ್ನ ವರ್ಗಾವಣೆ ಮಾಡುವಂತೆ ಒತ್ತಾಯಿಸಲು ಮುಂದಾದರು ಎಂದರು.
ಚುನಾಯಿತ ಪ್ರತಿನಿಧಿಗಳೊಂದಿಗೆ ಅಗೌರವದೊಂದಿಗೆ ನಡೆದುಕೊಳ್ಳುವುದು ಸರಿಯಿಲ್ಲ. ಎಲ್ಲವೂ ನನಗೆ ಗೊತ್ತಿದೆ,ನಾನ್ ಹೇಳಿದ್ದೆ ಆಗಬೇಕು ಅನ್ನೋದು ಸರಿಯಲ್ಲ. ಕೊರೊನ ಸಂಕಷ್ಟದಲ್ಲಿ ಸ್ವಿಮ್ಮಿಂಗ್ ಪೂಲ್ ಅವಶ್ಯಕತೆ ಇತ್ತ..? ರಾಜ್ಯದಲ್ಲಿ 20 ಏರಿಟೇಜ್ ಸಿಟಿಗಳಿವೆ, ಈ ಪೈಕಿ ಮೈಸೂರು ಒಂದು. ಈ ವಿಚಾರ ಚರ್ಚೆಗೆ ಬಂದಮೇಲೆ ಸರ್ಕಾರ ಕೇಳಬೇಕಿತ್ತು, ಮೈಸೂರಿನಲ್ಲಿ ಮಾಜಿ ಸಚಿವ ಎ. ಮಂಜು ಹೇಳಿಕೆ ನೀಡಿದ್ದಾರೆ.