ಪಡುಬಿದ್ರಿ: ಇನ್ನ ಗ್ರಾಮದ ಸುವರ್ಣಪಡು³ ನಿವಾಸಿ ಸುಂದರ ಪೂಜಾರಿ(62) ಅವರು ಮಂಗಳವಾರ ಮಧ್ಯಾಹ್ನದ ವೇಳೆ ಶಾಂಭವಿ ನದಿಗೆ ಸ್ನಾನಕ್ಕೆಂದು ಇಳಿದವರು ನದಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಪಡುಬಿದ್ರಿ ಠಾಣೆಯಲ್ಲಿ ಅಸಹಜ ಸಾವಿನ ಪ್ರಕರಣವು ದಾಖಲಾಗಿದೆ.
ಪಡುಬಿದ್ರಿ: ವ್ಯಕ್ತಿ ಸಾವು
ಪಡುಬಿದ್ರಿ: ಸಾಂತೂರು ಗ್ರಾಮದ ಮಕಮಾರ್‌ನಲ್ಲಿ ಬಾಡಿಗೆ ಕೊಠಡಿಯಲ್ಲಿ ಏಕಾಂಗಿಯಾಗಿ ವಾಸವಿದ್ದ ಜಯ ಬಂಗೇರ (60) ಅವರು ಸೋಮವಾರ ರಾತ್ರಿ ಮಲಗಿದ್ದವರು ಮರುದಿನ ಏಳದೇ ಇದ್ದಾಗ ಪಕ್ಕದವರು ನೋಡಿದಾಗ ಮಲಗಿದ್ದಲ್ಲೇ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.
ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆಯಿಂದ ಅವರು ಬಳಲುತ್ತಿದ್ದರು. ಐಎಸ್‌ಪಿಆರ್‌ಎಲ್‌ನ ಗುತ್ತಿಗೆ ಉದ್ಯೋಗಿಯಾಗಿದ್ದ ಇವರು ಕೊರೊನಾ ಬಳಿಕ ಇಲ್ಲಿಗೆ ಬಂದಿದ್ದರು. ಅವರ ಪತ್ನಿ, ಮಕ್ಕಳು ಸೊಲ್ಲಾಪುರದಲ್ಲೇ ಇರುವುದಾಗಿ ಪೊಲೀಸ್ ಮಾಹಿತಿಯು ತಿಳಿಸಿದೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವಿನ ಪ್ರಕರಣವು ದಾಖಲಾಗಿದೆ.