Advertisement

ಸಿಂಗಾಪುರದಲ್ಲಿ ಭಾರತ ಮೂಲದ ವ್ಯಕ್ತಿಗೆ ಗಲ್ಲು

09:57 PM Apr 26, 2023 | Team Udayavani |

ಸಿಂಗಾಪುರ: ಸಿಂಗಾಪುರದಲ್ಲಿ ಮಾದಕವಸ್ತು ಕಳ್ಳಸಾಗಣೆಗೆ ಉತ್ತೇಜನ ಮತ್ತು 1 ಕೆಜಿ ಗಾಂಜಾವನ್ನು ಅಕ್ರಮವಾಗಿ ಸಾಗಿಸಿರುವ ಅಪರಾಧದ ಮೇರೆಗೆ ಭಾರತ ಮೂಲದ ತಂಗರಾಜು ಸುಪ್ಪಯ್ಯ (46)ನನ್ನು ಬುಧವಾರ ಗಲ್ಲಿಗೇರಿಸಲಾಗಿದೆ. ತಂಗರಾಜುಗೆ ವಿಧಿಸಿದ್ದ ಮರಣದಂಡನೆ ಶಿಕ್ಷೆ ರದ್ದು ಕೋರಿ ಆತನ ಕುಟುಂಬ, ಮಾನವ ಹಕ್ಕುಗಳ ಹೋರಾಟಗಾರರು ಮತ್ತು ವಿಶ್ವಸಂಸ್ಥೆ ವತಿಯಿಂದ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಮಾದಕವಸ್ತು ವಿರುದ್ಧ ಕಠಿಣ ಕ್ರಮ ಜರುಗಿಸುವ ಸಿಂಗಾಪುರ ಸರ್ಕಾರ ಮತ್ತು ಅಲ್ಲಿನ ನ್ಯಾಯಾಲಯ ಈ ಅರ್ಜಿಗಳನ್ನು ಮಂಗಳವಾರ ವಜಾಗೊಳಿಸಿತ್ತು. ಸಿಂಗಾಪುರದ ಚಾಂಗಿ ಕಾರಾಗೃಹದಲ್ಲಿ ಬುಧವಾರ ಮುಂಜಾನೆ ತಂಗರಾಜುನನ್ನು ಗಲ್ಲಿಗೇರಿಸಲಾಯಿತು. 1 ಕೆಜಿ ಗಾಂಜಾ ಅಕ್ರಮ ಸಾಗಾಟ, ಮಾದಕವಸ್ತು ಸೇವನೆ ಮತ್ತು ಮಾದಕವಸ್ತು ಪರೀಕ್ಷೆಗೆ ಹಾಜರಾಗದ ಆರೋಪ ಮೇಲೆ 2014ರಲ್ಲಿ ತಂಗರಾಜುನನ್ನು ಸಿಂಗಾಪುರ ಪೊಲೀಸರು ಬಂಧಿಸಿದ್ದರು.

Advertisement

2018ರ ಅಕ್ಟೋಬರ್‌ನಲ್ಲಿ ಆತನಿಗೆ ಸ್ಥಳೀಯ ಹೈಕೋರ್ಟ್‌ ಮರಣದಂಡನೆ ಶಿಕ್ಷೆ ವಿಧಿಸಿತ್ತು. ತೀರ್ಪು ಪ್ರಶ್ನಿಸಿ ಆತ 2022ರ ನವೆಂಬರ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದ. ಆದರೆ ಈ ಮೇಲ್ಮನವಿಯನ್ನು 2023ರ ಫೆಬ್ರವರಿಯಲ್ಲಿ ವಜಾಗೊಳಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next