Advertisement

ಸೋಂಕು ನಿವಾರಣೆಗಾಗಿ ನಾಲಿಗೆಯನ್ನೇ ಬಲಿ ಕೊಟ್ಟ ಭೂಪ

08:59 AM Apr 21, 2020 | Hari Prasad |

ಪಾಲನ್‌ಪುರ: ಕೋವಿಡ್ 19 ವೈರಸ್ ರಾಕೆಟ್‌ ವೇಗದಲ್ಲಿ ಹರಡುತ್ತಿರುವುದನ್ನು ತಡೆಯಲು ದೇವರ ಮೊರೆ ಹೋದ ವ್ಯಕ್ತಿಯೊಬ್ಬ, ಕೊನೆಗೆ ನಾಲಿಗೆಯನ್ನೇ ಬಲಿ ಕೊಟ್ಟಿದ್ದಾನೆ.

Advertisement

ಈ ಘಟನೆ ಗುಜರಾತ್ ರಾಜ್ಯದ ಬನಸ್ಕಂತ ಜಿಲ್ಲೆಯ ನಾದೇಶ್ವರಿಯಲ್ಲಿ ನಡೆದಿದೆ. ಈ ಹಳ್ಳಿ ಭಾರತ, ಪಾಕಿಸ್ಥಾನ ಗಡಿಗೆ ಕೇವಲ 18 ಕಿ.ಮಿ ದೂರದಲ್ಲಿದ್ದು, ಇಲ್ಲಿಗೆ ಮಧ್ಯಪ್ರದೇಶದಿಂದ ಕೆತ್ತನೆ ಕೆಲಸಕ್ಕಾಗಿ ವಲಸೆ ಬಂದಿದ್ದ ವಿವೇಕ್‌ ಶರ್ಮನೇ ತನ್ನ ನಾಲಿಗೆಯನ್ನು ಕತ್ತರಿಸಿಕೊಳ್ಳುವ ಮೂಲಕ ಕೋವಿಡ್ 19 ವೈರಸ್ ಸೋಂಕು ಕಡಿಮೆ ಮಾಡುವಂತೆ ಕೇಳಿಕೊಂಡ ಭೂಪ.

ಸೂಯಗಾಮದಲ್ಲಿರುವ ಭವಾನಿ ದೇವಾಲಯದಲ್ಲಿ ಕೆತ್ತನೆ ಕೆಲಸ ಮಾಡಲು ಬಂದಿದ್ದರು. ದೇವಿ ಆರಾಧಕನಾದ ವಿವೇಕ್‌, ಶನಿವಾರ ಬೆಳಗ್ಗೆ ಮಾರ್ಕೆಟ್‌ಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೊರಟವನು, ನಾದೇಶ್ವರಿ ದೇವಾಲಯದಲ್ಲಿ ನಾಲಿಗೆ ಕತ್ತರಿಸಿಕೊಂಡಿದ್ದಾರೆ. ಅವರ ಅಣ್ಣ ಕರೆ ಮಾಡಿದಾಗ, ಬೇರೆ ವ್ಯಕ್ತಿ ಕರೆ ಸ್ವೀಕಾರ ಮಾಡಿ, ಈ ವಿಷಯ ಮುಟ್ಟಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next