ನವದೆಹಲಿ: ಕೋವಿಡ್ ವೈರಸ್ ಸೋಂಕಿತ ವ್ಯಕ್ತಿಯೊಬ್ಬ ಇಲ್ಲಿನ ಸಫ್ದರ್ ಜಂಗ್ ಆಸ್ಪತ್ರೆಯ ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಮೂರು ದಿನಗಳ ಬಳಿಕ ಇಂದು ಇನ್ನೊಬ್ಬ ಕೋವಿಡ್ ಸೋಂಕಿತ ವ್ಯಕ್ತಿ ಇದೇ ಆಸ್ಪತ್ರೆಯ ಮೂರನೇ ಮಹಡಿಯಿಂದ ಜಿಗಿಯಲು ಯತ್ನಿಸಿದ್ದಾನೆ.
ಈತ ಆಸ್ಪತ್ರೆಯ ಮೂರನೇ ಮಹಡಿಯಿಂದ ಜಿಗಿಯಲು ಯತ್ನಿಸುತ್ತಿರುವ ವಿಡಿಯೋ ಒಂದನ್ನು ಎ.ಎನ್.ಐ. ಸುದ್ದಿಸಂಸ್ಥೆ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.
ಈ ವಿಡಿಯೋದಲ್ಲಿ ಸೋಂಕಿತ ವ್ಯಕ್ತಿ ಮಹಡಿಯಿಂದ ಜಿಗಿಯಲು ಪ್ರಯತ್ನಿಸುತ್ತಿರುವ ಮತ್ತು ಕೆಳಗೆ ನಿಂತಿರುವ ವ್ಯಕ್ತಿಗಳು ಆತನನ್ನು ಜಿಗಿಯದಂತೆ ಮನ ಒಲಿಸುತ್ತಿರುವ ದೃಶ್ಯಗಳಿವೆ. ಮತ್ತು ಇದೇ ಸಂದರ್ಭದಲ್ಲಿ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಆತನನ್ನು ರಕ್ಷಿಸಲು ಯತ್ನಿಸುತ್ತಾರೆ.
ತಾನು ಕೋವಿಡ್ 19 ವೈರಸ್ ಸೋಂಕಿತನಾಗಿದ್ದು ಯಾರಾದರೂ ತನ್ನ ಬಳಿಗೆ ಬಂದರೆ ತನ್ನ ಕೈಗಳನ್ನು ಕುಯ್ದುಕೊಳ್ಳುವುದಾಗಿ ಆ ವ್ಯಕ್ತಿ ಅರಚಾಡುತ್ತಿದ್ದ ಮತ್ತು ತನ್ನನ್ನು ರಕ್ಷಿಸಲು ಬಳಿ ಬಂದವರ ಮೇಲೆ ಆ ವ್ಯಕ್ತಿ ಉಗುಳುತ್ತಿದ್ದ ಎಂದು ಪ್ರತ್ಯಕ್ಷದರ್ಶಿಗಳನ್ನು ಉದ್ಧರಿಸಿ ಸುದ್ದಿಸಂಸ್ಥೆ ವರದಿ ಮಾಡಿದೆ.
Related Articles
ಈ ವ್ಯಕ್ತಿಯನ್ನು ಇದೀಗ ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ.