ಪ್ರಯಾಗ್ ರಾಜ್ : 2005 ರಲ್ಲಿ ಉತ್ತರ ಪ್ರದೇಶದಲ್ಲಿ ನಡೆದಿದ್ದ ಶಾಸಕ ರಾಜು ಪೌಲ್ ಹತ್ಯೆಯ ಪ್ರಮುಖ ಸಾಕ್ಷಿಯನ್ನು ಶುಕ್ರವಾರ ಪೋಲಿಸ್ ಠಾಣಾ ಮುಂಭಾಗವೇ ಭೀಕರವಾಗಿ ಗುಂಡಿಕ್ಕಿ ಹತ್ಯೆಗೈಯ್ಯಲಾಗಿದೆ.
2005 ರಲ್ಲಿ ಉತ್ತರ ಪ್ರದೇಶದ್ಲಲಿ ನಡೆದಿದ್ದ ಉಪ ಚುನಾವಣೆಯಲ್ಲಿ ರಾಜು ಪೌಲ್ ಬಿಎಸ್‌ಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು. ಆದರೆ ಶಾಸಕರಾದ ಮೂರೇ ತಿಂಗಳಿಗೆ ಅವರನ್ನು ದುಷ್ಕರ್ಮಿಗಳು ಪ್ರಯಾಗ್‌ರಾಜ್‌ನಲ್ಲಿ ಗುಂಡಿಕ್ಕಿ ಹತ್ಯೆಗೈದಿದ್ದರು.
ಈ ಪ್ರಕರಣದ ಪ್ರಮುಖ ಸಾಕ್ಷಿ, ವಕೀಲ, ಉಮೇಶ್ ಪೌಲ್ ವರ ಮೇಲೆ ಧುಮಾಂಗಂಜ್ ಪೋಲಿಸ್ ಠಾಣಾ ವ್ಯಾಪ್ತಿಯ ಸುಲೇಮ್ ಸರೈ ಪ್ರದೇಶದಲ್ಲಿನ ಮನೆ ಬಳಿ ಸುಮಾರು 12 ಮಂದಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ.
ಪಾಲ್ ಅವರ ಇಬ್ಬರು ಭದ್ರತಾ ಸಿಬ್ಬಂದಿ ಕೂಡಾ ಈ ಗುಂಡೇಟಿಗೆ ಗಂಭೀರವಾಗಿ ಗಾಯಗೊಂಡಿದ್ಧಾರೆ. ಉಮೇಶ್ ಪೌಲ್ ಮೇಲೆ ದುಷ್ಕರ್ಮಿಗಳು ಮನಬಂದಂತೆ ಗುಂಡಿನ ದಾಳಿ ನಡೆಸಿದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಘಟನಾ ಸ್ಥಳ ಪೋಲಿಸ್ ಠಾಣೆಯಿಂದ ಕೇವಲ 200 ಮೀ. ದೂರವಿದೆ. ದಾಳಿ ಬಳಿಕ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ರಾಜು ಪೌಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಂಸದ ಅತಿಖ್ ಅಹ್ಮದ್ ಮತ್ತು ಅವರ ಸಹೋದರ ಮಾಜಿ ಶಾಸಕ ಅಶ್ರಫ್ ಅವರನ್ನು ಬಂಧಿಸಲಾಗಿತ್ತು. ಅವರ ತಂಡದಿಂದಲೇ ಈಗ ಉಮೇಶ್ ಪೌಲ್ ಹತ್ಯೆಯಾಗಿದೆ ಎಂಬ ಅನುಮಾನ ಮೂಡಿದೆ.
ಇದನ್ನೂ ಓದಿ :
ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಸಚಿವರ ಬೆಂಗಾವಲು ಪಡೆ ಮೇಲೆ ದಾಳಿ