ಉಡುಪಿ/ಮಲ್ಪೆ: ಮಲ್ಪೆಯಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಎರಡು ದೋಣಿಗಳು ಗೋವಾ ಗಡಿಯ ಸಮುದ್ರದಲ್ಲಿ ಸಂಪರ್ಕ ಕಳೆದುಕೊಂಡು ಆತಂಕ ಸೃಷ್ಟಿಯಾಯಿತು. ಆ ಸಂರ್ದರ್ಭ ಓರ್ವ ಭೀತಿಯಿಂದ ಕಡಲಿಗೆ ಧುಮುಕಿದ್ದು, ನಾಪತ್ತೆಯಾಗಿದ್ದಾನೆ.
ಮಲ್ಪೆಯಿಂದ ತೆರಳಿದ್ದ ಗಂಗಾ ಗಣೇಶ್ ಮತ್ತು ಸ್ವರ್ಣಜ್ಯೋತಿ ಬೋಟುಗಳು ಅಪಾಯಕ್ಕೆ ಸಿಲುದವು. ಎರಡೂ ದೋಣಿಗಳಲ್ಲಿ ತಲಾ 6ರಂತೆ 12 ಮಂದಿ ಮೀನುಗಾರರು ಇದ್ದರು. ಮಾಹಿತಿ ಪಡೆದ ತಟ ರಕ್ಷಣಾ ಪಡೆಯ ಸಿಬಂದಿ ನೆರವಿಗೆ ಧಾವಿಸಿ ಮೀನುಗಾರರನ್ನು ರಕ್ಷಿಸಿದರು.
ಇದನ್ನು ರಾಜ್ಯದ ಮುಖ್ಯಕಾರ್ಯ ದರ್ಶಿಗಳು ಖಚಿತಪಡಿಸಿರುವುದಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ನಾಪತ್ತೆಯಾ ಮೀನುಗಾರ ಮೂಲತಃ ಒಡಿಶಾದವರು ಎಂದು ತಿಳಿದುಬಂದಿದೆ. ಅ. 27ರಂದು ಗಂಗಾಗಣೇಶ್ ದೋಣಿಯನ್ನು 39 ನಾಟಿಕಲ್ ಮೈಲ್ ದೂರದ ತೊಲ್ಕೇಶ್ವರ್ ಸಮೀಪ ಪತ್ತೆ ಹಚ್ಚಲಾಯಿತು. ಮಹಾರಾಷ್ಟ್ರ ಗಡಿಯ 25 ನಾಟಿಕಲ್ ಮೈಲ್ ದೂರದ ಮುರುದ್ ಜಂಜಿರ ಬಳಿ ಸುವರ್ಣ ಜ್ಯೋತಿ ದೋಣಿಯನ್ನು ಪತ್ತೆ ಹಚ್ಚಲಾಯಿತು.