Advertisement

Hebri ನಾಡ್ಪಾಲಿನಲ್ಲಿ ಒಂಟಿ ಆನೆ ಹಾವಳಿ

12:49 AM Jul 11, 2024 | Team Udayavani |

ಕಾರ್ಕಳ: ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದಲ್ಲಿ ಮತ್ತೆ ಒಂಟಿ ಸಲಗದ ಹಾವಳಿಯು ಹೆಚ್ಚಿದೆ. ಕಳೆದ ಒಂದು ವಾರ ವ್ಯಾಪ್ತಿಯಲ್ಲಿ ನಾಡ್ಪಾಲು ಗ್ರಾಮದ ನೆಲ್ಲಿಕಟ್ಟೆ ಕೆದ್ದಲಮಕ್ಕಿ ಉಷಾ ಶೆಟ್ಟಿ ಮನೆಯವರ ಹಲಸು ಹಾಗೂ ಅಡಿಕೆ ಮರ ದೂಡಿ ಹಾಕಿದ್ದು, ಹಾಗೂ ಗದ್ದೆಯಲ್ಲಿ ಭತ್ತ ಬಿತ್ತನೆ ಮಾಡಿದ ಗದ್ದೆಯನ್ನು ಸಾಗಿ ಹಾನಿ ಮಾಡಿದೆ. ಬೊಬ್ಬರ್‌ ಬೆಟ್ಟು ಸುಬ್ರಾಯ ಅಚಾರ್ಯ ಅವರ ಕೃಷಿಗೆ ಹಾಕಿರುವ ಪೈಪ್‌ಲೈನ್‌ಗೂ ಹಾನಿ ಮಾಡಿದೆ.

Advertisement

ಆಗುಂಬೆ ವ್ಯಾಪ್ತಿಯ ಸೋಮೇಶ್ವರ ಅಭಯಾರಣ್ಯ ವ್ಯಾಪ್ತಿಯಲ್ಲಿ ಹದಿನೈದು ದಿನಗಳಿಂದ ಕೇವಲ ಹಲಸಿನ ಮರದ ಎಲೆಗಳು ಹಾಗೂ ಹಲಸಿನಹಣ್ಣನ್ನು ತಿಂದು ಸಾಗುತ್ತಿದೆ. ಇಲ್ಲದಿದ್ದರೆ ನೆಟ್ಟ ಅಡಿಕೆಮರವನ್ನು ಸೀಳಿ ತಿರುಳನ್ನು ತಿನ್ನುತ್ತಿವೆ.

ಲೈಟ್‌ ಹಾಕಿದಾಗ ಓಟಕ್ಕಿತ್ತ ಆನೆ
ರಾತ್ರಿ ವೇಳೆ ನೆಲ್ಲಿಕಟ್ಟೆ ಕೆದ್ದಲಮಕ್ಕಿ ಉಷಾ ಶೆಟ್ಟಿ ಅವರ ಮನೆಯ ಹಲಸಿನ ಮರದ ಗೆಲ್ಲು ತುಂಡರಿಸು ವಾಗ ಮನೆಯವರು ಲೈಟ್‌ ಹಾಕಿದ್ದು, ಕೂಡಲೇ ಅನೆ ಓಟಕ್ಕಿತ್ತಿದೆ. 15 ದಿನಗಳ ಹಿಂದೆ ಮೀನಾ ಪೂಜಾರ್ತಿ ಅವರ ಮನೆ ಬಳಿಯೂ ಆನೆ ಬಂದಿದ್ದು,  ಮರದಲ್ಲಿದ್ದ  ಹಲಸು ಹಾಗೂ  ತೆಂಗು ಬಾಳೆಯನ್ನು ನಾಶಮಾಡಿತ್ತು. ಅನೆಯನ್ನು ಓಡಿಸಬೇಕೆಂದು ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಮೀನಾ ಅವರ ಮನೆ ಸಮೀಪ ಪ್ರತಿಭಟನೆಯನ್ನೂ ನಡೆಸಿದ್ದರು.

ಹೆಬ್ರಿ ತಾಲೂಕು ಕಚೇರಿಯಲ್ಲಿ ಉಡುಪಿ ಜಿಲ್ಲಾಧಿ ಕಾರಿ ನೇತೃತ್ವದಲ್ಲಿ ನಡೆದ ಜನಸ್ಪಂದನ ಸಭೆಯಲ್ಲೂ ಕಾಡಾನೆ ಹಾವಳಿ ಬಗ್ಗೆ ಪ್ರಸ್ತಾವವಾಗಿತ್ತು. ಈಗ ಅರಣ್ಯ ಇಲಾಖೆ ಆನೆ ಕಾರ್ಯಾಚರಣೆ ಆರಂಭಿಸಿದೆ.

ಅರಣ್ಯ ಇಲಾಖೆ ಮಾಹಿತಿ ಪ್ರಕಾರ, ಕಳೆದ ಮೂವತ್ತು ವರ್ಷಗಳಿಂದ ಈ ಒಂಟಿ ಸಲಗವು ಸುಳ್ಯದ  ಕುಕ್ಕೆ ಸುಬ್ರಹ್ಮಣ್ಯದಿಂದ ಬೆಳ್ತಂಗಡಿ ಮೂಲಕ ನಾರಾವಿ, ಮಾಳ ಘಾಟಿ ಮೂಲಕ ವಾಲಿಕುಂಜ ಬೆಟ್ಟದ ಮೇಲಿನ ಕಬ್ಬಿನಾಲೆಯ  ತಿಂಗಳಮಕ್ಕಿ , ತೆಂಗುಮಾರ್‌, ಕಿಗ್ಗ, ಬರ್ಕಣ ಮಲ್ಲಂದೂರು, ಆಗುಂಬೆ ಮೂಲಕ ನಗರ ಹೊಸನಗರ ವರೆಗೆ ಸಂಚರಿಸುತ್ತದೆ. ಆದರೆ ಯಾವುದೇ ಪ್ರಾಣ ಹಾನಿ ಮಾಡಿಲ್ಲ .

Advertisement

ಅರಂತೋಡಿನಲ್ಲಿ ಕಾಡಾನೆ ಹಾವಳಿ
ಅರಂತೋಡು: ಆಲೆಟ್ಟಿ ಗ್ರಾಮದ ಮೈಂದೂರು ಭಾಗದಲ್ಲಿ ಕಾಡಾನೆಗಳ ಉಪಟಳ ಮತ್ತೆ ಮುಂದುವರಿದಿದ್ದು, ತೋಟಕ್ಕೆ ನುಗ್ಗಿ ಕೃಷಿ ನಾಶ ಮಾಡಿದೆ. ಮೈಂದೂರಿನ ಬಿಪಿನ್‌ ಕುಡೆಕಲ್ಲು ರವರ ತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡು ತೆಂಗಿನ ಮರ ಮತ್ತು ಅಡಿಕೆ ಮರಗಳನ್ನು ನಾಶಪಡಿಸಿವೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next