ಹುಟ್ಟುವಾಗ ಎಲ್ಲರೂ ಬದುಕಿನ ಗೊತ್ತು ಗುರಿಯಿಲ್ಲದ ಬರೀ ಕಾಲ ಪಯಣಿಗರು. ಬೆಳೆಯುತ್ತಾ ಹೋದ ಹಾಗೆ ಗುರಿಯನ್ನು ಹುಡುಕುತ್ತಾ ಹೋಗುವ ದಾರಿಗಳಾಗುತ್ತವೆ. ಒಂದೇ ದಾರಿಯಲ್ಲಿ ಹೋಗಿ ಗುರಿಯಿಟ್ಟು ಯಶಸ್ಸಾಗಬೇಕು. ಹೀಗೆ ಒಂದು ಪುಟ್ಟ ಕನಸನ್ನು ಇಟ್ಟುಕೊಂಡವ ತಿರುವನಂತಪುರಂ ನ 19 ವರ್ಷದ ಹುಡುಗ ಸೈರಿಲ್ ಕ್ಸೇವಿಯರ್. ಈತನ ಕನಸು ಎಲ್ಲರಂತಲ್ಲ. ಈತನ ಬದುಕು ಕೂಡ ಎಲ್ಲರಂತಲ್ಲ. ಆದರೆ ಈತನ ಜೀವನ ಉತ್ಸಾಹ ಎಲ್ಲರನ್ನು ಸ್ಪೂರ್ತಿಗೊಳಿಸುತ್ತವಂಥದ್ದು.
ಕ್ಸೇವಿಯರ್ ನಿಗೆ ಡೌನ್ ಸಿಂಡ್ರೋಮ್ ಕಾಯಿಲೆ ( ದೈಹಿಕವಾಗಿ ಬೆಳೆಯದೆ, ಬೌದ್ಧಿಕ ಶಕ್ತಿಗಳು ಕುಂಟಿತವಾಗುವ ಕಾಯಿಲೆ) ಮಗನಿಗೆ ಈ ಕಾಯಿಲೆ ಇದೆಯೆನ್ನುವ ಯಾವ ಭಯ ಭೀತಿಯನ್ನು ಹುಟ್ಟಿಸದ ಅಪ್ಪ ಅಮ್ಮ ಜೇವಿಯರ್ ಬೌದ್ಧಿಕ ಶಕ್ತಿಗೆ ಹೊಂದಿಕೊಂಡು ಪ್ರೀತಿ, ಸಲುಗೆ, ಸಮಯವನ್ನು ಕೊಟ್ಟು ಬೆಳೆಸುತ್ತಾರೆ.
ಅಪ್ಪ ಅಮ್ಮನ ಪ್ರೀತಿಯಿಂದ ಕ್ಸೇವಿಯರ್ ಅತೀ ಉತ್ಸಾಹದಿಂದ ದಿನ ಕಳೆಯುತ್ತಾನೆ. ಸ್ನೇಹಿತರೊಂದಿಗೆ ಆಟ ಶಾಲೆಯ ಆಟ, ಪಾಠ ಎಲ್ಲವನ್ನು ಎಲ್ಲರೊಂದಿಗೆ ಸೇರಿ ಮಾಡುತ್ತಾನೆ. ಕ್ಸೇವಿಯರ್ ನಿಗೆ ತಾನು ಮಾಡೆಲ್ ಅಥವಾ ನಟ ಆಗಬೇಕು, ಅವರಂತೆ ನಿಂತು ಫೋಟೋ ಶೂಟ್ ಮಾಡಿಸಬೇಕೆನ್ನುವ ಆಸೆಯೊಂದು ಸದಾ ಸ್ನೇಹಿತರೊಂದಿಗೆ , ಮನೆಯವರೊಂದಿಗೆ ಹೇಳುತ್ತಾನೆ ಇರುತ್ತಿದ್ದ. ಕ್ಸೇವಿಯರ್ ನ ಕಾಯಿಲೆ ಹಾಗೂ ಕನಸಿನ ಬಗ್ಗೆ ಸ್ಥಳೀಯ ಪತ್ರಿಕೆಗಳಲ್ಲಿ ವರದಿಯಾಗಿ ಬರುತ್ತದೆ. ಮುಂದೆ ಇದೇ ವರದಿಗಳು ಕ್ಸೇವಿಯರ್ ಗೆ ಒಂದು ಅನಿರೀಕ್ಷಿತ ಆನಂದಕ್ಕೆ ಸಾಕ್ಷಿಯಾಗಿತ್ತು.
ಅದೊಂದು ದಿನ ಎಲ್ಲರೂ ಕ್ಸೇವಿಯರ್ ನ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದರು. ಈ ಸಂಭ್ರಮಕ್ಕೆ ನಾಲ್ಕು ಚಂದಿರನ ಮೆರಗನ್ನು ತಂದದ್ದು, ಖ್ಯಾತ ಫೋಟೋಗ್ರಾಫರ್ ಮಹದೇವನ್ ಹಾಗೂ ಖ್ಯಾತ ಮೇಕಪ್ ಕಲಾವಿದ ನರಸಿಂಹರ ಆಗಮನ. ಡೌನ್ ಸಿಂಡ್ರೋಮ್ ನಿಂದ ಬಳಲುತ್ತಿದ್ದ ಕ್ಸೇವಿಯರ್ ಮಹಾದಾಸೆಯನ್ನು ಟಿವಿಯಲ್ಲಿ ನೋಡಿ ಅರಿತ ಖ್ಯಾತನಾಮರು, ಕ್ಸೇವಿಯರ್ ನ ಹುಟ್ಟು ಹಬ್ಬಕ್ಕೆ ಅನಿರೀಕ್ಷಿತ ಭೇಟಿ ನೀಡಿ, ಕ್ಸೇವಿಯರ್ ನ ಮಹಾದಾಸೆಯನ್ನು ನೆರವೇರಿಸಲು ಸಿದ್ಧರಾಗಿದ್ದರು.
ಕ್ಸೇವಿಯರ್ ಗೆ ಹೀರೋನಂತೆ ಮೇಕಪ್ , ಟಿಪ್ ಟಾಪ್ ಕೋರ್ಟ್, ಸ್ಟೈಲಿಸ್ಟ್ ಲುಕ್, ಎಲ್ಲವನ್ನು ಅನಿರೀಕ್ಷಿತವಾಗಿ ಬಂದಿದ್ದ ಖ್ಯಾತನಾಮರೇ ಮಾಡಿ, ಕ್ಸೇವಿಯರ್ ಖುಷಿಗೆ ಜತೆಯಾದರು. ಕ್ಸೇವಿಯರ್ ನಂಥ ಹುಡುಗನ ಕಾಯಿಲೆಗೆ , ಅವರೊಂದಿಗೆ ಒಳ್ಳೆಯ ರೀತಿಯ ವರ್ತನೆಯಿಂದ ಇದ್ದರೆ, ಅವರು ಆರಾಮವಾಗಿ ಇರುತ್ತಾರೆ. ಈ ಕಾಯಿಲೆಗೆ ಇದೇ ಒಂದು ಬಗೆಯ ಔಷಧಿ.
ಕ್ಸೇವಿಯರ್ ಎಲ್ಲರಂಥಲ್ಲ. ಆತನಿಗೆ ಅಪ್ಪನ ನಿರಂತರ ಪ್ರೀತಿ, ಮಾರ್ಗದರ್ಶನ ದಿನನಿತ್ಯ ಸಿಗುತ್ತದೆ. ಕ್ಸೇವಿಯರ್ ನ ಅಪ್ಪ, ಆತನನ್ನು ಮಾರ್ಕೆಟ್ ಗೆ ಕರೆದುಕೊಂಡು ಹೋಗಿ ತರಕಾರಿ ಖರೀದಿಸುವ ಆಯ್ಕೆಯ ಸ್ವಾತಂತ್ರ್ಯ ನೀಡುತ್ತಾರೆ. ಕ್ಸೇವಿಯರ್ ಕೂಡ ತಾನಾಗಿಯೇ ಎಲ್ಲವನ್ನು ಮಾಡುತ್ತಾರೆ. ಲ್ಯಾಪ್ ಟಾಪ್, ಮೊಬೈಲ್ ಬಳಕೆ ಕ್ಸೇವಿಯರ್ ಗೆ ಎಲ್ಲರಂತೆ ಬಳಕೆಯ ವಸ್ತು. ಅಪ್ಪನಿಗೆ ಕೆಲಸದಲ್ಲಿ ಸಹಾಯವನ್ನು ಮಾಡುತ್ತಾರೆ. ಕ್ಸೇವಿಯರ್ ನ ಮನೆಯವರು ಆತನಿಗೆ ಕಾಯಿಲೆ ಇದೆ ಎನ್ನುವುದನ್ನು ಮರೆಸಲು ಸದಾ ಪ್ರೀತಿಯಿಂದಲೇ ಆರೈಕೆಯನ್ನು ಮಾಡುತ್ತಿದ್ದಾರೆ.
*ಸುಹಾನ್ ಶೇಕ್