Advertisement

“ಸ್ವಲ್ಪ’ನನ್ನನ್ನೂ ಇಷ್ಟಪಡ್ತೀಯಾ…?

05:57 PM Nov 21, 2017 | |

ನಿಮ್ಮಪ್ಪ ಅಮ್ಮ ನಿನ್ನ ಹೇಗೆ ನೋಡ್ಕೊಂಡಿದ್ದಾರೋ ಹಾಗೇ, ಪುಟ್ಟ ಪಾಪು ಥರ ಎದೆಮೇಲೆ ಮಲಗಿಸ್ಕೊಂಡು ನೋಡ್ಕೊಳ್ತೀನಿ. ನಿನೊತೆ ನನ್ನ ಉಳ್ದಿರೋ ಬದುಕಿನ ಒಂದೊಂದು ಕ್ಷಣಾನೂ ಕಳೆಯೋ ಕನ್ಸು ಕಂಡಿದ್ದೀನಿ. 

Advertisement

ದುಂಬಿ ಅದ್ಯಾವ ಕ್ಷಣದಲ್ಲಿ ಹೂವಿನ ಘಮ ಹಿಡಿದು ಮಧು ಹೀರಿ ಹೋಗುತ್ತದೆಂಬ ಅರಿವು ಅದಕ್ಕೂ ಇರುವುದಿಲ್ಲ. ಅಂತೆಯೇ, ನಿನ್ನನ್ನು ನೋಡಿದ ಅದ್ಯಾವ ಕ್ಷಣದಲ್ಲಿ ಮನಸ್ಸು ಜಾರಿ ಪ್ರೀತಿಯ ಅರಮನೆಯೊಳಗೆ ಬಂಧಿಯಾಯಿತೋ ನನಗೂ ಗೊತ್ತಿಲ್ಲ. ಕೆಲವು ಹುಡುಗಿಯರಿರುತ್ತಾರೆ, ಹುಡುಗರು ಬೆನ್ನಹಿಂದೆ ಬಿದ್ದರೆ ಒಳಗಿಂದೊಳಗೇ ಖುಷಿಯಾಗಿ, ಗಮನ ಕೊಡದಂತೆ ನಟಿಸಿ ಗೆಳತಿಯರೊಂದಿಗೆ ತನ್ನ ಸ್ಕೋರ್‌ ಕಾರ್ಡ್‌ ಹೆಚ್ಚಾಯಿತೆಂದು ಬೀಗುವವರು!

ಆದರೆ ನೀನು? “ಯಾಕೋ ಅವ್‌ ಹಿಂದೆ ಬಿದ್ದೆ? ಬೇರ್ಯಾರೂ ಇಲ್ವೇನೋ ನಿಂಗೆ? ಪ್ರಪಂಚ ತಲೆಕೆಳಾYಯ್ತು ಅಂದ್ರೂ ಅವ್ಳು ಒಂದ್‌ ಹುಡುಗ್ರನ್ನೂ ತಲೆ ಎತ್ತಿ ನೋಡಲ್ಲ’ ಅಂತ ಫ್ರೆಂಡ್ಸ್‌ ಹೇಳುವಾಗ, ಒಂದೆಡೆ ಖುಷಿಯಾಗಿ ಆಕಾಶದಲ್ಲಿ ತೇಲೋ ಭಾವನೆ ಮೂಡ್ತಾ ಇತ್ತು. ನನ್‌ ಹುಡ್ಗಿ ನಂಗೇನೇ ಅನ್ನೋ ಅಹಂಕಾರ ಅದ್ರಲ್ಲಿರಿ¤ತ್ತು.

“ಸ್ವಲ್ಪ?’ ಹೇಗಿದ್ದೀಯಾ?.. ಗೊತ್ತಾಗಿಲ್ವಾ? ಕಾಲೇಜಲ್ಲಿ ಆ್ಯಪಲ್‌ ತಿನ್ನೋ ಸ್ಪಧೇಲಿ ಭಾಗವಹಿಸಿದ್ದ ನೀನು ನಿನ್ನ ಹೆಸ್ರು ಹೇಳಾಗ, ಅಲ್ಲಿದ್ದ ಆ್ಯಂಕರ್‌ ನಿನ್ನ ಹೆಸ್ರು ಗೊತ್ತಾಗೆàನೋ ಅಥವಾ ಕಿಚಾಯೊಕಂತಾನೋ “ಸ್ವಲ್ಪ’ ಅಂತ ಕೇಳಗ್ಲೆ ನಿನ್‌ ಹೆಸ್ರು “ಸ್ವಲ್ಪ’ ಅನ್ನೋದು ಎಲಿಗೂ ಗೊತ್ತಾಗಿದ್ದು! ಅದೇ ಹೇಳ್ತಾರಲ್ಲ, ಹುಡುಗ್ರ ಪ್ರೀತಿ ಊರ್ತುಂಬಾ ಗೊತ್ತಿರುತ್ತಂತೆ, ಹುಡುಗಿಯೊಂದನ್ನ ಬಿಟ್ಟು!

ಹಾಗೇ ನಾನ್‌ ನಿನ್ನ ಇಷ್ಟಪಡೋ ವಿಷ್ಯ ನನ್‌ ಫ್ರೆಂಡ್ಸ್‌ ಸರ್ಕಲ್‌ನಲ್ಲಿ ಎಲಿಗೂ ಗೊತ್ತಿತ್ತು, ಹಾಗೇ ಸಿಕಾಗೆಲ್ಲ “ಲೋ, ಆ್ಯಪಲ್‌ ಬೇಕೇನೋ?’ ಅಂತಾನೇ ಕಿಚಾಯಿಸ್ತಿದ್ರು. ಮೊದಲ ಸಲ ನೀನಿಷ್ಟಪಟ್ಟ ಕೀಚೈನ್‌ನ್ನು ನಿನಗೆ ಕೊಡೋ ಸಲುವಾಗಿ ನಾನು ಪಟ್ಟ ಹರಸಾರಸ ನೆನಪಾಗುತ್ತೆ. ಹೇಗೆ ನಿಂಗೆ ಅದನ್ನ ತಲುಪಿಸೋದು ಅಂತ ತಲೆ ಕೆರೊRಂಡು, ಆಮೇಲೆ ಕಾಲೇಜಿನ ಅಡ್ರೆಸ್‌ನಿಂದ ನಿಮ್ಮನೆಗೆ ಪೋಸ್ಟ್‌ ಮಾಡಿದ್ದು ಸಣ್ಣ ಸಾಧನೆ ಏನೂ ಅಲ್ವಲ್ಲಾ?

Advertisement

ಆಮೇಲೆ ಇನ್ನೊಮ್ಮೆ ಬಸ್‌ಸ್ಟಾಂಡ್‌ನ‌ಲ್ಲಿ ಭೇಟಿಯಾಗಿ ಇನ್ನೊಂದು ಕೀಚೈನ್‌ ಕೊಟ್ಟಿದ್ದು ಇವತ್ತಿಗೂ ಮರೆಯಲಾಗದ ಕ್ಷಣ. ನನ್ನ ಪ್ರೇಮಸಂಕೇತ ಆ ಕೀಚೈನ್‌. ಇವತ್ತು ಊರ ಜಾತ್ರೇಲೋ, ಅಂಗಡೀಲೋ ಕೀಚೈನ್‌ ನೋಡಿದ್ರೆ ನಿನ್ನ ನೆನಪು ಅತಿಯಾಗಿ ಕಾಡಿ ಬಿಡುತ್ತೆ.  ಹೂಂ. ಇಷ್ಟೆಲ್ಲ ಹೇಳಿದ್‌ ಮೇಲೂ ನಾ ನಿನ್ನನ್ನು ಮನಸಾರೆ ಇಷ್ಟಪಡ್ತೀನಿ ಅಂತ ಬಾಯ್ಬಿಟ್ಟು ಬೇರೆ ಹೇಳ್ಬೇಕಾ? ನನ್ನನ್ನು ನೀನು ಬಸ್ಸಿಗೆ ಕಾಯುವ ಪೆಟ್ರೋಲ್‌ ಬಂಕಿನ ಹೆಸ್ರಲ್ಲಿ ಜನ ಕರೀತಾರೆ,

ಆ್ಯಪಲ್‌, ಕೀಚೈನ್‌ ಅನ್ನೋ ಅಡ್ಡಹೆಸ್ರುಗಳೂ ನಂಗಿವೆ. ಇವತ್ತಿಗೂ ಕಾಲೇಜ್‌ ಫ್ರೆಂಡ್ಸ್‌ ಸಿಕ್ಕಿದ್ರೆ “ಸ್ವಲ್ಪ’ ಅನ್ನೋ ಶಬ್ದ ಅವ್ರ ಬಾಯಿಂದ ಬರೆà ಹೋಗೋದಿಲ್ಲ. ನಿಜ, ಮೊದೆÉಲ್ಲ ಕನಿಷ್ಠ ವಾಟ್ಸಪ್‌ನಲ್ಲಾದ್ರೂ ಸಿಗುತ್ತಿಧ್ದೋಳು ಆಮೇಲಾಮೇಲೆ ಅದ್ರಲ್ಲೂ ಕಾಣದೇ ಹೋದೆ. ಹತ್ತಿರ ಹತ್ತಿರ ಒಂದು ವರ್ಷದವರೆಗೂ ಒಂದೇ ದಿನಾಂಕದ “ಲಾಸ್ಟ್‌ ಸೀನ್‌’ ಕಂಡಾಗ ಎದೆ ಚುರುಕ್‌ ಅಂತಿತ್ತು. ಹೇಗಿದ್ದೀಯೋ, ಎಲ್ಲಿದ್ದೀಯೋ ಅನ್ನೋ ಮಾಹಿತಿ ಕೂಡಾ ಸರಿಯಾಗಿ ಇರ್ಲಿಲ್ಲ.

ಆದ್ರೆ… ಮೊನ್ನೆ ಮೊನ್ನೆ ನೀನು ಕರೆ ಮಾಡಿ ಮಾತಾಡಿದಾಗ ಒಂದರೆಕ್ಷಣ ನಂಗೂ ನಂಬೋಕೆ ಆಗ್ಲಿಲ್ಲ, ನನ್‌ ಸ್ವಲ್ಪಾನಾ ಇದು? ನಂಗೆ ಕರೆ ಮಾಡಿದ್ದಾ ಅನ್ನೋ ಪ್ರಶ್ನೆಗೆ ಉತ್ರ ಕೊಟ್ಕೊಳ್ಳೋಕೆ ಕಷ್ಟ ಆಯ್ತು ನಂಗೆ. ಹೂಂ, ಸ್ವರ್ಗಾನೇ ಸಿಕ್ಕಿದಷ್ಟು ಖುಷಿ ಆಯ್ತು. ಈ ಸಮಯದಲ್ಲಿ ನಾನು ಕಂಡ ಬದುಕಿನ ಮಗ್ಗುಲು, ನಾ ಪಟ್ಟ ಕಷ್ಟವನ್ನೆಲ್ಲ ಹೇಳುವಾಗ ನಂಗೆ ತೊಂದ್ರೆ ಕೊಟ್ಟವ್ರಿಗೆಲ್ಲ ನೀನು ಬೈದಾಗ ಅದೆಷ್ಟು ಸೆಕ್ಯೂರ್‌ ಫೀಲ್‌ ಆಯ್ತು ಗೊತ್ತಾ ನಂಗೆ?

ಬಾಳಸಂಗಾತಿಯೇ ನನ್‌ ಬೆನ್ನ ಹಿಂದೆ ಇದ್ದಾಳಲ್ಲ, ನಾನ್ಯಾಕೆ ತಲೆಕೆಡಿಸ್ಕೋಬೇಕು ಅನ್ನೋವಷ್ಟು ಖುಷಿಯಾಯ್ತು. ಥ್ಯಾಂಕ್ಯೂ ಸೋ ಮಚ್‌. ಕೊನೇದಾಗಿ ನಿನ್ಹತ್ರ ಹೇಳ್ಳೋದಿಷ್ಟೇ. ನಿಮ್ಮಪ್ಪ ಅಮ್ಮ ನಿನ್ನ ಹೇಗೆ ನೋಡ್ಕೊಂಡಿದ್ದಾರೋ ಹಾಗೇ, ಪುಟ್ಟ ಪಾಪು ಥರ ಎದೆಮೇಲೆ ಮಲಗಿಸ್ಕೊಂಡು ನೋಡ್ಕೊಳ್ತೀನಿ. ನಿನೊತೆ ನನ್ನ ಉಳ್ದಿರೋ ಬದುಕಿನ ಒಂದೊಂದು ಕ್ಷಣಾನೂ ಕಳೆಯೋ ಕನ್ಸು ಕಂಡಿದ್ದೀನಿ. ನಿನ್ನನ್ನು ತುಂಬಾ ತುಂಬಾ ಇಷ್ಟಪಡ್ತೀನಿ…

ನನ್‌ ಮನ್ಸಲ್ಲಿದ್ದಿದ್ನ ಹೇಳಿದ್ದೀನಿ, ನಿನ್‌ ಮನ್ಸಲ್ಲಿರೋದೂ ಸ್ವಲ್ಪ ಸ್ವಲ್ಪಾನೇ ಹೇಳ್ತೀಯಾ “ಸ್ವಲ್ಪಾ’?                                                
ಇಂತಿ ನಿನ್ನವ.
* ಯತೀಶ್‌ ವಿ. ಪ್ರಭು, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next