Advertisement

ಪ್ರತಿಭೆ ಗುರುತಿಸಲು ಸಾಹಿತ್ಯೋತ್ಸವ ಸಹಕಾರಿ

06:09 PM Feb 18, 2022 | Team Udayavani |

ಗದಗ: ಸಂಗೀತ, ಸಾಹಿತ್ಯೋತ್ಸವ ಕಾರ್ಯಕ್ರಮಗಳ ಆಯೋಜನೆಯಿಂದ ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಗುರುತಿಸಲು ಸಾಧ್ಯವಾಗುತ್ತದೆ ಎಂದು ಪ್ರಚಾರ್ಯ ಡಾ|ಸಂಧ್ಯಾ ಕುಲಕರ್ಣಿ ಅಭಿಪ್ರಾಯಪಟ್ಟರು.

Advertisement

ನಗರದ ಕೆಎಲ್‌ಇ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸಾಹಿತ್ಯ ಸಂಘದ ಆಶ್ರಯದಲ್ಲಿ ನಡೆದ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲರೂ ಕೂಡಿ ಕೆಲಸ ಮಾಡುವುದರಿಂದ ಕೌಶಲ್ಯ, ನಾಯಕತ್ವ ಗುಣ, ಹೊಂದಾಣಿಕೆ, ಕಲೆ ಹಾಗೂ ಸೃಜನಶೀಲ ಕೌಶಲ್ಯ ಬೆಳೆಸಿಕೊಳ್ಳಲು ನೆರವಾಗುತ್ತದೆ. ಕವಿಗಳ ಮಾಹಿತಿ ಸಂಗ್ರಹಣೆಯಿಂದ ಅವರ ಹಿನ್ನೆಲೆ ತಿಳಿಯುತ್ತದೆ. ವಿದ್ಯಾರ್ಥಿಗಳಲ್ಲಿರುವ ಸೂಪ್ತ ಸಾಹಿತ್ಯವನ್ನು ಪ್ರೋತ್ಸಾಹಿಸಲು ನೆರವಾಗುತ್ತದೆ. ಅವರಲ್ಲಿ ಶಬ್ದಾರ್ಥ, ಶಬ್ದ ಭಂಡಾರ ಹೆಚ್ಚುತ್ತದೆ ಎಂದು ಹೇಳಿದರು.

ನಿವೃತ್ತ ಪ್ರಾಚಾರ್ಯ, ಕನ್ನಡ ಪ್ರಾಧ್ಯಾಪಕ ಡಾ.ಸಿದ್ದಣ್ಣ ಜಕಬಾಳ ಮಾತನಾಡಿ, ಕೊಡುಕೊಳ್ಳುವಿಕೆ ಎಲ್ಲಿ ಇರುತ್ತದೆಯೋ ಅದು ಉಳಿಯುತ್ತದೆ ಮತ್ತು ಬೆಳೆಯುತ್ತದೆ ಎಂದರು. ಕರ್ನಾಟಕ ವಿಶ್ವವಿದ್ಯಾಲಯದ ಸಂಶೋಧನಾ ಪತ್ರಿಕೆಯ ಎಂ.ಎ. ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿ ಚಿನ್ನದ ಪದಕ ಪಡೆದ ಅಶ್ವಿ‌ನಿ ಜೋಶಿ ಅವರನ್ನು ಸನ್ಮಾನಿಸಲಾಯಿತು. ವೇದಿಕೆ ಮೇಲೆ ಪ್ರೊ.ಎಂ.ಬಿ.ಕೊಳವಿ, ಭಾವನಾ ಹಿರೇಮಠ, ಪ್ರೊ.ಪಿ.ಜೆ. ಕಟ್ಟಿಮನಿ, ಡಾ.ಎ.ವಿ.ದೇವಾಂಗಮಠ, ಪ್ರೊ.ಪವಿತ್ರಾ ಬೆನ್ನೂರ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next