Advertisement

Arabian Sea: ಅರಬ್ಬಿ ಸಮುದ್ರದಲ್ಲಿ ಮುಳುಗಿ ಸಿಂಹಿಣಿ ಸಾವು!

09:11 PM Feb 17, 2024 | Team Udayavani |

ಗಾಂಧಿನಗರ: ಜಗತ್ತಿನಲ್ಲಿಯೇ ಏಷ್ಯನ್‌ ಸಿಂಹಗಳ ಏಕೈಕ ತಾಣ ಗುಜರಾತ್‌ನಲ್ಲಿ ಸಿಂಹಿಣಿಯೊಂದು ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದೆ. 5-9 ವರ್ಷ ವಯಸ್ಸಿನ ಸಿಂಹಿಣಿಯ ಮೃತದೇಹವು ಕಳೆದ ಗುರುವಾರ ಜಾಫ್ರಾಬಾದ್‌ ಅರಣ್ಯ ವಲಯದ ಕರಾವಳಿ ಗ್ರಾಮ ಧಾರಾ ಬಂದರ್‌ ಸಮೀಪ ಪತ್ತೆಯಾಗಿತ್ತು.

Advertisement

ಮರಣೋತ್ತರ ಪರೀಕ್ಷೆಯ ವೇಳೆ ಅದರ ಶ್ವಾಸಕೋಶದ ಒಳಗೆ ನೀರು ತುಂಬಿರುವುದು ಕಂಡುಬಂದಿದ್ದು, ಅರಬ್ಬಿ ಸಮುದ್ರದಲ್ಲಿ ಮುಳುಗಿ ಸಾವಿಗೀಡಾಗಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ. ಗುಜರಾತ್‌ನಲ್ಲಿ ಕಳೆದೆರಡು ವರ್ಷಗಳಲ್ಲಿ ಸುಮಾರು 239 ಸಿಂಹಗಳು ಮೃತಪಟ್ಟಿರುವುದಾಗಿ ಇತ್ತೀಚೆಗೆ ಸರ್ಕಾರವೇ ಮಾಹಿತಿ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next