Advertisement

ಕೋಲಿ ಸಮಾಜಕ್ಕಾಗಿ ಜೀವನಪೂರ್ತಿ ಹೋರಾಟ

01:31 PM Sep 06, 2022 | Team Udayavani |

ಕಲಬುರಗಿ: ಕೋಲಿ ಸಮಾಜದ ಸರ್ವಾಂಗೀಣ ವಿಕಾಸ ಮತ್ತು ಜನರ ಪ್ರಗತಿಗಾಗಿ, ಆರ್ಥಿಕ ಸ್ವಾವಲಂಬನೆಗಾಗಿ ನಾನು ಜೀವಮಾನಾದ್ಯಂತ ಹೋರಾಟ ಮಾಡುತ್ತಲೇ ಇರುತ್ತೇನೆ ಎಂದು ಮಾಜಿ ಸಚಿವ, ವಿಧಾನ ಪರಿಷತ್‌ ಸದಸ್ಯ ಬಾಬುರಾವ್‌ ಚಿಂಚನಸೂರ್‌ ಹೇಳಿದರು.

Advertisement

ಶಹಾಬಾದ್‌ ತಾಲೂಕಿನ ತೊನಸನಳ್ಳಿ (ಎಸ್‌) ಗ್ರಾಮದ ಶ್ರೀ ಅಲ್ಲಮಪ್ರಭು ಸಂಸ್ಥಾನ ಮಠದ ಪೀಠಾಧಿಪತಿ ಮಲ್ಲಣ್ಣಪ್ಪ ಮಹಾಸ್ವಾಮಿಯವರ ನೇತೃತ್ವದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿದ್ದ ಪುರಾಣ ಮಂಗಲೋತ್ಸವ ಹಾಗೂ ಧರ್ಮ ಸಭೆ ಕಾರ್ಯಕ್ರಮದಲ್ಲಿ ಸನ್ಮಾನಿತಗೊಂಡು ಅವರು ಮಾತನಾಡಿದರು.

ಕೋಲಿ ಸಮಾಜದ ಜನರು ಧಾರ್ಮಿಕವಾಗಿ ಅತ್ಯಂತ ಪ್ರಬುದ್ಧರು. ಆದ್ದರಿಂದಲೇ ಇವತ್ತು ತೊನಸನಹಳ್ಳಿಯ ಅಲ್ಲಮಪ್ರಭು ಸಂಸ್ಥಾನ ಮಠದ ಪೀಠಾಧಿಪತಿ ಮಲ್ಲಣ್ಣಪ್ಪ ಮಹಾಸ್ವಾಮಿ ಅವರ ಮೇಲೆ ಅಪಾರವಾದ ನಂಬಿಕೆ ಇಟ್ಟುಕೊಂಡಿದ್ದಾರೆ. ಮಠವು ಎಲ್ಲ ವರ್ಗದ ಹಿತ ಕಾಯುವ ಕಲ್ಪತರುವಾಗಿದೆ. ಕಲ್ಯಾಣ ಕರ್ನಾಟಕದಲ್ಲಿ ಅಪಾರ ಸಂಖ್ಯೆಯ ಭಕ್ತರನ್ನು ಹೊಂದಿದೆ. ಶ್ರದ್ಧೆ ಮತ್ತು ಭಕ್ತಿಯಲ್ಲದೆ, ಜಾತ್ಯತೀತ ಮಠವಾಗಿದ್ದು, ಹಿಂದೂ-ಮುಸ್ಲಿಮರ ಭಾವೈಕ್ಯ ಕೇಂದ್ರವೂ ಆಗಿದೆ. ಅದಕ್ಕೆಲ್ಲ ಮಲ್ಲಣ್ಣಪ್ಪ ಮಹಾಸ್ವಾಮಿಗಳ ಸೇವಾಮನೋಭಾವ ಮತ್ತು ಭಕ್ತರೆಡೆಗಿನ ಪ್ರೀತಿ ಕಾರಣ ಎಂದರು.

ರಾವೂರನ ಸಿದ್ಧಲಿಂಗೇಶ್ವರ ಸಂಸ್ಥಾನ ವಿರಕ್ತಮಠದ ಸಿದ್ಧಲಿಂಗ ದೇವರು ಚಾಲನೆ ನೀಡಿ ಆಶೀರ್ವಚನ ನುಡಿದರು. ಪೇಠಶಿರೂರನ ಸಿದ್ಧಲಿಂಗೇಶ್ವರ ಸಂಸ್ಥಾನ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಚಿವರು ಶ್ರೀ ನಿಜಶರಣ ಅಂಬಿಗರ ಚೌಡಯ್ಯ ನಿಗಮ ಮಂಡಳಿ ಅಧ್ಯಕ್ಷರು ಹಾಗೂ ನೂತನ ವಿಧಾನ ಪರಿಷತ್‌ ಸದಸ್ಯ ಬಾಬುರಾವ ಚಿಂಚನಸೂರ ಹಾಗೂ ಕೇಂದ್ರ ಆಹಾರ ನಿಗಮ ಮಂಡಳಿಯ ರಾಜ್ಯ ಸಲಹಾ ಸಮಿತಿ ಸದಸ್ಯರು , ಗಂಗಾಪರಮೇಶ್ವರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಅಮರೇಶ್ವರಿ ಬಾಬುರಾವ ಚಿಂಚನಸೂರ ದಂಪತಿಗಳನ್ನು ಮಠದ ವತಿಯಿಂದ ಸನ್ಮಾನಿಸಿದರು.

ಭೀಮಣ್ಣ ಸುಣಗಾರ ಸಿಂದಗಿ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಹರವಾಳ, ದೇವೀಂದ್ರ ಜೈನಾಪೂರ, ಶರಣಪ್ಪ ಹೊಸೂರ್‌, ನಿಂಗಪ್ಪ ಹುಳಗೋಳಕರ್‌, ಶರಣಪ್ಪ ಸಣಮೋ, ಆನಂದ ಕೊಡಸಾ, ನಾಗೇಂದ್ರ ಬೊಮ್ಮನಳ್ಳಿ ವಾಡಿ, ಚಂದ್ರಶೇಖರ್‌ ಕೋಟಾರಗಸ್ತಿ, ಶಿವಾನಂದ ದಂಡಪಗೋಳ, ಅಣೀವೀರಪ್ಪ ಯಾಕಾಪೂರ, ದಶರಥ ತೆಗನೂರ್‌ ಕುಸನೂರ್‌, ತೊನಸನಹಳ್ಳಿ ಎಸ್‌ ಗ್ರಾಪಂ ಅಧ್ಯಕ್ಷೆ ಕಾವೇರಿ ಮಹಾಲಿಂಗ ಮದ್ದರಕಿ, ಗುರು ಜುಲ್ಪಿ, ನಿಂಗಣ್ಣಗೌಡ ಮಾಲೀಪಾಟೀಲ್‌, ಮಹಾದೇವ ಬಂದಳ್ಳಿ, ಮಲ್ಲಿಕಾರ್ಜುನ್‌ ಎಸ್‌ ಗೊಳೇದ, ವಿರೇಶ್‌ ಜೀ ಗೋಳೇದ, ಅಶೋಕ ಕಟ್ಟಿ, ದೇವೀಂದ್ರಪ್ಪ ಯಲಗೋಡ್‌, ಕಾಶಣ್ಣ ಚೆನ್ನೂರ್‌, ಮಲ್ಲಿಕಾರ್ಜುನ್‌ ಇಟಗಿ ಮಾಲಗತ್ತಿ, ಕಾಶಿನಾಥ ಬೆಲ್ಲದ ಹಾಗೂ ಇತರರು ಗಣ್ಯರು ಭಾಗವಹಿಸಿದರು. ಅಶೋಕ ಎಂ. ನಾಟೀಕಾರ್‌ ನಿರೂಪಿಸಿದರು. ನಂತರ ಭಜನಾ ಸೇವೆಯನು ಮಹೇಶ ನರಬೋಳಿ ಮತ್ತು ಮಾತೋಶ್ರೀ ಸಾತಮ್ಮ ತಾಯಿ ಭಜನೆ ಮೇಳದವರು ನಡೆಸಿಕೊಟ್ಟರು.

Advertisement

ಬಾಬುರಾವ್‌ ಮತ್ತು ಅಮರೇಶ್ವರಿ ಚಿಂಚನಸೂರ್‌ ಅವರು ಕೋಲಿ ಸಮಾಜಕ್ಕಾಗಿ, ಜನರಿಗಾಗಿ ಎಲ್ಲವನ್ನು ತ್ಯಾಗಮಾಡಿರುವ ಕರುಣಾಮಯಿಗಳು. ಸರಕಾರ ಬಾಬುರಾವ್‌ ಅವರಿಗೆ ಎಂಎಲ್‌ಸಿ ಮಾಡುವ ಮುಖೇನ ಕೊಟ್ಟ ಮಾತು ಉಳಿಸಿಕೊಂಡಿದೆ. ಮುಂದಿನ ಬಾರಿ ಚುನಾವಣೆಯಲ್ಲಿ ಗೆದ್ದರೆ ಖಂಡಿತವಾಗಿ ಮಂತ್ರಿ ಆಗುತ್ತಾರೆ. ಆದ್ದರಿಂದ ಜನರು ಕೈ ಹಿಡಿಯಬೇಕು. ಮಲ್ಲಣ್ಣಪ್ಪ ಮಹಾಸ್ವಾಮಿಗಳು, ಪೀಠಾಧಿಪತಿಗಳು

Advertisement

Udayavani is now on Telegram. Click here to join our channel and stay updated with the latest news.

Next