ಹುಣಸೂರು: ಕೋವಿಡ್ 19ದಿಂದ ಜನರಲ್ಲಿ ಸರಳತೆ, ತ್ಯಾಗ, ಉಳಿತಾಯ ಮನೋಭಾವ, ಪರಸ್ಪರ ಸಹಕಾರ, ಪ್ರೀತಿ-ವಿಶ್ವಾಸದ ಸನ್ನಿವೇಶ ಸೃಷ್ಟಿಸಿದೆ. ಇನ್ನು ಸರಳ ಮದುವೆ ನಡೆಯುತ್ತಿದ್ದು, ದುಂದು ವೆಚ್ಚದ ಎಚ್ಚರಿಕೆಯ ಪಾಠ ಕಲಿಸಿದೆ ಎಂದು ಮಾಜಿ ಸಚಿವ ಎಚ್. ವಿಶ್ವನಾಥ್ ತಿಳಿಸಿದರು.
ಕೋವಿಡ್ 19 ತಡೆಗೆ ಶ್ರಮಿಸಿದ ವಿವಿಧ ಇಲಾಖೆಯ ವಾರಿಯರ್ಗಳಿಗೆ ಹುಣಸೂರು ಬಿಜೆಪಿ ಘಟಕದಿಂದ ಸನ್ಮಾನಿಸಿ ಮಾತನಾಡಿ, ಜನಪ್ರತಿನಿಧಿಗಳು, ಜಿಲ್ಲಾ ಮತ್ತು ತಾಲೂಕು ಆಡಳಿತ, ಆರೋಗ್ಯ, ಪೊಲೀಸ್, ನಗರಸಭೆ ಸೇರಿದಂತೆ ಎಲ್ಲ ಇಲಾಖೆಗಳ ವಾರಿಯರ್‌ಗಳು ತಮ್ಮ ಕುಟುಂಬಗಳನ್ನು ಮರೆತು ದಕ್ಷತೆ -ಬದತೆಯಿಂದ ಕಾರ್ಯನಿರ್ವಹಿಸಿದ್ದರಿಂದ ನಾವು ನೆಮ್ಮದಿಯಿಂದ ಇದ್ದೇವೆ ಎಂದರು.
ಅನೇಕರು ಕೋವಿಡ್ 19 ಸಂಕಷ್ಟಕ್ಕೆ ಸಿಲುಕಿದ್ದ ಜನರಿಗೆ ನೆರವು ನೀಡಿದ್ದಾರೆ. ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಶಾಂತಿ ಕಾಪಾಡಿದ್ದಾರೆ. ಜನರ ಸಹಕಾರ, ಎಲ್ಲರ ಪ್ರಾಮಾಣಿಕ ಸೇವೆಯಿಂದ ಹುಣಸೂರು ಉಪ ವಿಭಾಗದಲ್ಲಿ ಶೂನ್ಯ ಕೋವಿಡ್ 19ವಾಗಿದೆ ಎಂದು ಪ್ರಶಂಸಿಸಿದರು. ಉಪವಿಭಾಗಾಧಿಕಾರಿ ಬಿ.ಎನ್.ವೀಣಾ, ತಹಶೀಲ್ದಾರ್ ಬಸವರಾಜ್, ಇಒ ಗಿರೀಶ್, ಡಾ.ಕೀರ್ತಿ ಕುಮಾರ್, ಡಾ.ಸರ್ವೇಶ್ ರಾಜೇ ಅರಸ್, ಡಾ.ಅನಂತಶಯನ, ಸುಂದರರಾಜ್, ಸಿದ್ದಪ್ಪ, ನಾಗರಾಜ್, ಪೂವಯ್ಯ, ಮಹೇಶ್, ಶಿವಪ್ರಕಾಶ್, ಜಯಪ್ರಕಾಶ್, ರೂಪಾ, ಸತೀಶ್, ಮಾಲಿನಿ,
ಸರಿತಾ, ರಾಧಾ ಹಾಗೂ ಸಾಯಿನಾಥ್, ಶಿವಕುಮಾರ್ ಅವರನ್ನು ಸನ್ಮಾನಿಸಲಾಯಿತು. ಬಿಜೆಪಿ ತಾಲೂಕು ಅಧ್ಯಕ್ಷ ನಾಗಣ್ಣ, ನಗರಾಧ್ಯಕ್ಷ ಗಣೇಶ್ ಕುಮಾರಸ್ವಾಮಿ, ಜಿಪಂ ಮಾಜಿ ಸದಸ್ಯರಾದ ಸಿ.ಟಿ.ರಾಜಣ್ಣ, ರಮೇಶ್ ಕುಮಾರ್, ನಾಗರಾಜ ಮಲ್ಲಾಡಿ, ನಗರಸಭೆ ಸದಸ್ಯ ಹರೀಶ್, ವಿಶ್ವನಾಥ್ ಅಭಿಮಾನಿ ಬಳಗದ ಅಧ್ಯಕ್ಷ ಲೋಕೇಶ್, ಯೋಗಾನಂದ್, ರವಿಕುಮಾರ್, ಮಂಜುನಾಥ್, ಸತ್ಯಪ್ಪ, ಸವಿತಾ, ವೆಂಕಟಮ್ಮ, ಚೇತನ್, ರಾಕೇಶ್ ಹಾಜರಿದ್ದರು.