Advertisement
ಅಣ್ಣ , ನಾನು ಈ ಮೂಲಕ ನಿನಗೆ ನನ್ನ ಪುಟ್ಟ ಥ್ಯಾಂಕ್ಯೂ ಹೇಳಬಯಸುತ್ತೇನೆ. ಯಾಕೆಂದರೆ, ಅಣ್ಣ-ತಂಗಿ ಪ್ರೀತಿ ಎನ್ನುವುದೇ ಹಾಗೆ. ಅವರಿಬ್ಬರ ನಡುವಿನ ಬಾಂಧವ್ಯದ ಬಗ್ಗೆ ವರ್ಣಿಸಲು ಪದಗಳೇ ಸಾಲದು. ಕೆಲವರು ತಮ್ಮ ಅಣ್ಣಂದಿರೊಂದಿಗೆ ಕಾಲ ಕಳೆಯುವುದನ್ನು ಕಂಡಾಗ ನನಗೂ ಒಬ್ಬ ಅಣ್ಣ ಇರಬೇಕಾಗಿತ್ತು ಎಂದೆನಿಸುತ್ತಿತ್ತು. ನಾನು ನನ್ನ ಅಪ್ಪ ಅಮ್ಮನಿಗೆ ಒಬ್ಬಳೇ ಮಗಳು. ಆದ್ದರಿಂದ ನನಗೆ ಸಂಬಂಧಿಕರಲ್ಲಿ ಅಣ್ಣತಂಗಿಯನ್ನು ಕಂಡಾಗ ನನಗೆ ಅಣ್ಣನಿಲ್ಲವೆಂಬ ಬೇಸರ ಕಾಡುತ್ತಿತ್ತು. ನೀನು ಬಂದಮೇಲೆ ನನಗೆ ಅಣ್ಣನಿಲ್ಲವೆಂಬ ಭಾವನೆ ಕಾಡಲಿಲ್ಲ. ಒಂದು ವೇಳೆ ಒಡಹುಟ್ಟಿದ ಅಣ್ಣ ಇದ್ದರೂ ಸಹ ನಿನ್ನಿಂದ ದೊರೆತ ಅಣ್ಣನೆಂಬ ಪ್ರೀತಿ, ಮಮತೆ, ವಾತ್ಸಲ್ಯ ಆತನಿಂದ ದೊರೆಯದು ಎಂದೆನಿಸುತ್ತದೆ. ನಾನು ನಿನ್ನ ರಕ್ತ ಸಂಬಂಧಿ, ಒಡಹುಟ್ಟಿದವಳಲ್ಲದಿದ್ದರೂ ಸಹ ಅಣ್ಣ ಎಂದು ಕರೆದಾಗ ನೀನು ತೋರುವ ಅಕ್ಕರೆ, ವಾತ್ಸಲ್ಯ, ಕಾಳಜಿ- ಇವೆಲ್ಲವೂ ಹೇಳತೀರದು. ಅಣ್ಣ-ತಮ್ಮ, ಅಕ್ಕ-ತಂಗಿ, ಅಕ್ಕ-ತಮ್ಮ ಈ ಎಲ್ಲ ಸಹೋದರತ್ವದ ಬಾಂಧವ್ಯಕ್ಕಿಂತಲೂ ಅಣ್ಣ-ತಂಗಿಯ ಬಾಂಧವ್ಯ ಬಹಳ ಶ್ರೇಷ್ಠವಾದುದು. ಅಲ್ಲಿ ಅವರಿಬ್ಬರ ನಡುವಿನ ಆತ್ಮೀಯತೆ, ಎಷ್ಟೇ ತರೆಲ-ತುಂಟಾಟಗಳಿದ್ದರೂ ಒಬ್ಬರನ್ನೊಬ್ಬರು ಬಿಟ್ಟಿರಲಾಗದಂತಹ ಬಾಂಧವ್ಯ ಇವೆಲ್ಲವೂ ಎಷ್ಟು ಹೇಳಿದರೂ ಮುಗಿಯದಂತಹ ಪ್ರೀತಿ. ಈ ಪ್ರೀತಿ ಚಿರಕಾಲದವರೆಗೂ ಹೀಗೆ ಇರಲಿ.
Related Articles
ಪ್ರಥಮ ಪಿಯುಸಿ,
ಕಪಿತಾನಿಯೋ ಪದವಿಪೂರ್ವ ಕಾಲೇಜು, ಮಂಗಳೂರು
Advertisement