Advertisement

ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿಗೆ ಪ್ರಶಂಸಾ ಪತ್ರ

02:34 PM Apr 19, 2021 | Team Udayavani |

ದೊಡ್ಡಬಳ್ಳಾಪುರ: ಕೆಎಸ್‌ಆರ್‌ಟಿಸಿ,ಬಿಎಂಟಿಸಿ ನೌಕರರ ಮುಷ್ಕರ 13ನೇದಿನಕ್ಕೆ ಕಾಲಿಟ್ಟಿದ್ದು, ಇದರ ನಡುವೆಯೂಸಾರಿಗೆ ಬಸ್‌ ಸಂಚಾರ ದಿನ ಕಳೆದಂತೆಹೆಚ್ಚುತ್ತಿದೆ. ಕರ್ತವ್ಯಕ್ಕೆ ಹಾಜರಾಗುವಸಿಬ್ಬಂದಿಯ ಸಂಖ್ಯೆ ಏರಿಕೆ ಕಾಣುತ್ತಿದೆ.ದೊಡ್ಡಬಳ್ಳಾಪುರ ವಿಭಾಗದಲ್ಲಿಭಾನುವಾರ 33ಕ್ಕೂ ಹೆಚ್ಚು ಬಸ್‌ಗಳುಸಾರ್ವಜನಿಕರಿಗೆ ಸೇವೆ ಒದಗಿಸಿವೆ.

Advertisement

ಭಾನುವಾರ ದೊಡ್ಡಬಳ್ಳಾಪುರದಿಂದಬೆಂಗಳೂರು, ತುಮಕೂರು, ಚಿಕ್ಕಬಳ್ಳಾಪುರ, ದೇವನಹಳ್ಳಿ, ನೆಲಮಂಗಲ,ದಾಬಸ್‌ ಪೇಟೆ, ಗೌರಿಬಿದನೂರುವ್ಯಾಪ್ತಿಗೆ ಬಸ್‌ಗಳು ಸಂಚರಿಸಿದವು.ಆರನೇ ವೇತನ ಆಯೋಗಕ್ಕೆಪಟ್ಟುಹಿಡಿರುವ ಸಾರಿಗೆ ನೌಕರರ ಮುಷ್ಕರ12 ದಿನ ಪೂರೈಸಿದೆ. ಉಪ ವಿಭಾಗದ 358ನೌಕರರಲ್ಲಿ ಶೇ.35ಕ್ಕೂ ಹೆಚ್ಚು ಸಿಬ್ಬಂದಿಕರ್ತವ್ಯಕ್ಕೆ ಹಾಜರಾಗಿದ್ದರು.

ಸೋಮವಾರಇನ್ನಷ್ಟು ಸಿಬ್ಬಂದಿ ಕೆಲಸಕ್ಕೆ ಬರಲಿದ್ದು,ಸಾರಿಗೆ ಬಸ್‌ ಸಂಚಾರದಲ್ಲಿ ಸುಧಾರಣೆಕಾಣುವ ಸಾಧ್ಯತೆ ಇದೆ ಎಂದುಹೇಳಲಾಗುತ್ತಿದೆ.ಸ್ವಯಂ ಪ್ರೇರಿತರಾಗಿ ಕರ್ತವ್ಯಕ್ಕೆ ಹಾಜರಾದ ಚಾಲಕರು ಮತ್ತು ನಿರ್ವಾಹಕರಿಗೆಭಾನುವಾರ ಬೆಳಗ್ಗೆ ವ್ಯವಸ್ಥಾಪಕ ಆನಂದ್‌ಹಾಗೂ ಸಹಾಯಕ ಆಡಳಿತಾಧಿಕಾರಿಶಿವನಾರಾಯಣ್‌ ಪ್ರಶಂಸೆ ಪತ್ರ ಹಾಗೂಸಿಹಿ ನೀಡಿ ಆಹ್ವಾನಿಸಿದರು.ನಂತರ ಇವರನ್ನು ಹಲವುಮಾರ್ಗಗಳಿಗೆ ನಿಯೋಜಿಸಲಾಯಿತು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್‌ಗಳುನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರಿಂದಪ್ರಯಾಣಿಕರಲ್ಲಿ ಭರವಸೆ ಮೂಡಿತು.

Advertisement

Udayavani is now on Telegram. Click here to join our channel and stay updated with the latest news.

Next