Advertisement
ನಗರದ ವಿದ್ಯಾಗಿರಿಯ ಜನತಾ ಶಿಕ್ಷಣ ಸಮಿತಿಯ ನೂತನ ಆಡಳಿತ ಮಂಡಳಿಯ ಸುವರ್ಣ ಮಹೋತ್ಸವ ಪ್ರಯುಕ್ತ ಶನಿವಾರ ಹಮ್ಮಿ ಕೊಂಡಿದ್ದ 50ರ ಅವಿಸ್ಮರಣೀಯ ಸಂಭ್ರಮದಲ್ಲಿ ಚೆನ್ನುಡಿ ಭಾಗ-6 ಅನ್ನು ಬಿಡುಗಡೆಗೊಳಿಸಿ ಮಾತನಾಡಿದರು.
Related Articles
Advertisement
ಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾ ಚಾರ್ಯವರ್ಯ ಸ್ವಾಮೀಜಿ ಮಾತ ನಾಡಿ, ಜೀವನದಲ್ಲಿ ಸಾಧನೆ ಹಾಗೂ ದೇಶ ಮುನ್ನಡೆಯಲು ಉತ್ತಮ ಶಿಕ್ಷಣ ಅತ್ಯಾವಶ್ಯಕ. ಅಂತಹ ಶಿಕ್ಷಣವನ್ನು ಜೆಎಸ್ಸೆಸ್ ನೀಡುತ್ತಿದೆ ಎಂದರು.
ಜೆಎಸ್ಸೆಸ್ ಕಾರ್ಯಾಧ್ಯಕ್ಷ ಡಾ| ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಿದ್ದರು. ಜೆಎಸ್ಸೆಸ್ ಕಾರ್ಯದರ್ಶಿ ಡಾ| ಅಜಿತ ಪ್ರಸಾದ ಹಾಗೂ ಸಂಸ್ಥೆ ನಿವೃತ್ತ ಶಿಕ್ಷಕ ಆರ್.ಕೆ. ಮುಳಗುಂದ ಅವರನ್ನು ಸಮ್ಮಾನಿಸಲಾಯಿತು. ಶಾಸಕ ಅರವಿಂದ ಬೆಲ್ಲದ ಮಾತನಾಡಿದರು. ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾತೋಶ್ರೀ ಹೇಮಾವತಿ ಹೆಗ್ಗಡೆ, ಶ್ರದ್ಧಾ ಹೆಗ್ಗಡೆ, ಎಸ್‌ಡಿಎಂಇ ಸೊಸೈಟಿ ಕಾರ್ಯದರ್ಶಿ ಜೀವಂಧರಕುಮಾರ, ಶಾಸಕ ಮಹೇಶ ಟೆಂಗಿನಕಾಯಿ, ಶಿವಲೀಲಾ ಕುಲಕರ್ಣಿ, ಕೇಶವ ದೇಸಾಯಿ, ಕಮಲನಯನ ಮೆಹತಾ, ಮಹಾವೀರ ಉಪಾಧ್ಯೆ ಮುಂತಾದವ ರಿದ್ದರು. ಡಾ| ಜಿನದತ್ತ ನಿರೂಪಿಸಿದರು. ಸೂರಜ್ ಜೈನ್ ವಂದಿಸಿದರು.
ಧಾರವಾಡವು ನನಗೆ ಈಗ ಎರಡನೇ ಧರ್ಮಸ್ಥಳವೇ ಆಗಿದೆ. ಮಂಜುನಾಥ ಸ್ವಾಮಿ ಅನುಗ್ರಹದಂತೆ ಧಾರವಾಡದಲ್ಲಿ ಸಮಾಜ ಮುಖೀ ಕಾರ್ಯಗಳ ಜತೆಗೆ ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ಕೊಟ್ಟಿದ್ದರಿಂದ ಹೆಮ್ಮರದಂತಹ ಶಿಕ್ಷಣ ಸಂಸ್ಥೆಗಳು ಬೆಳೆದು ನಿಂತಿವೆ. ಇದು ಧಾರವಾಡಿಗರು ನೀಡಿರುವ ಪ್ರೀತಿ, ವಿಶ್ವಾಸದಿಂದಲೇ ಸಾಧ್ಯವಾಗಿದೆ. ಡಾ| ನ.ವಜ್ರಕುಮಾರ ಅವರ ಸ್ಥಾನವನ್ನು ಎಂದಿಗೂ ತುಂಬಲಾಗದು. ಅವರ ಮಾರ್ಗದರ್ಶನದಲ್ಲಿ ಡಾ| ಅಜಿತ ಪ್ರಸಾದ ಯಶಸ್ವಿಯಾಗಿ ಮುನ್ನಡೆಸಿಕೊಂಡು ಸಾಗುತ್ತಿರುವುದು ಖುಷಿ ತಂದಿದೆ.-ಡಾ| ಡಿ.ವೀರೇಂದ್ರ ಹೆಗ್ಗಡೆ, ಜೆಎಸ್ಸೆಸ್ ಕಾರ್ಯಾಧ್ಯಕ್ಷರು ಜೆಎಸ್ಸೆಸ್ ಸಂಸ್ಥೆಯು ಶಿಕ್ಷಣದ ಜತೆಗೆ ಸಂಸ್ಕಾರವನ್ನೂ ನೀಡುತ್ತಿದೆ. ಮುಂದಿನ 10 ವರ್ಷಗಳ ಅವಧಿಯಲ್ಲಿ ಈ ಸಂಸ್ಥೆಯಿಂದ ಕನಿಷ್ಠ 3 ವಿದ್ಯಾರ್ಥಿಗಳು ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವಂತೆ ಪ್ರಯತ್ನಿಸಬೇಕು. ಇದಕ್ಕೆ ಸಕಲ ಸೌಕರ್ಯ ನೀಡಲು ಕೇಂದ್ರ ಸರಕಾರ ಸಿದ್ಧವಿದೆ.
-ಪ್ರಹ್ಲಾದ ಜೋಷಿ, ಕೇಂದ್ರ ಸಚಿವ