Advertisement
ಯುರೋಪಿಯನ್ ಒಕ್ಕೂಟವು ಜಾಗತಿಕ ಮಟ್ಟದಲ್ಲಿ ಬಲಿಷ್ಠವಾದ ಅರ್ಥಿಕ ವ್ಯವಸ್ಥೆಯನ್ನು ಹೊಂದಿದ್ದು ಭಾರತದ ಮುಖ್ಯವಾದ ವ್ಯಾಪಾರ ಪಾಲುದಾರ ಸಂಘಟನೆಯಾಗಿದೆ. ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದ್ದು ಜಾಗತಿಕ ವ್ಯವಸ್ಥೆಯಲ್ಲಿ ಪ್ರಮುಖವಾದ ಸ್ಥಾನವನ್ನು ಪಡೆದುಕೊಂಡಿದೆ ಎಂದು ಯುರೋಪಿಯನ್ ಸಂಸತ್ತು ಮಾಜಿ ಸದಸ್ಯ ರಾಬರ್ಟ್ ಇವಾನ್ಸ್ ಅಭಿಪ್ರಾಯಪಟ್ಟರು.
ಮಾತನಾಡಿ, ಯುರೋಪಿ ಯನ್ ಒಕ್ಕೂಟವು ಜಾಗತಿಕ ಮಟ್ಟದಲ್ಲಿ ಪ್ರಮುಖ ಸಂಘಟನೆಯಾಗಿದ್ದು ಭಾರತದ ಜತೆಗೆ ಸಂಬಂಧ ವೃದ್ಧಿಸಲು ಒಕ್ಕೂಟವು ಒಲವನ್ನು ತೋರಿದ್ದು, ಈ ನಿಟ್ಟಿನಲ್ಲಿ ಭಾರತವು ಬ್ರಿಟನ್ ಯುರೋಪಿಯನ್ ಒಕ್ಕೂಟದಿಂದ ಹೊರ ನಡೆದ ಅನಂತ ರದಲ್ಲಾಗುತ್ತಿರುವ ಬೆಳವಣಿಗೆ ಮತ್ತು ಸವಾಲುಗಳನ್ನು ಅವಲೋಕಿಸುವುದು ಸೂಕ್ತವೆನಿಸುತ್ತದೆ ಎಂದರು. ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರೊ| ಜಯರಾಜ್ ಅಮೀನ್, ಯುರೋಪಿಯನ್ ಒಕ್ಕೂಟವು ಇಂದು ಜಾಗತಿಕ ಮಟ್ಟದಲ್ಲಿ ಪ್ರಬಲ ಆರ್ಥಿಕ ಶಕ್ತಿಯಾಗಿ ಹೊಂದಿರುವ ಸಂಘಟನೆಯಾಗಿದ್ದು ರಾಜಕೀಯ ಕ್ಷೇತ್ರಗಳಲ್ಲಿ ಮಹತ್ತರವಾದ ಪಾತ್ರವನ್ನು ನಿರ್ವಹಿಸುತ್ತಿದೆ ಎಂದರು.
Related Articles
Advertisement