ಕಾರವಾರ: ಅಗ್ನಿಪಥ್ ಯೋಜನೆಯ ಪ್ರಚಾರಕ್ಕಾಗಿ ಕರ್ನಾಟಕ ಹೆರಿಟೇಜ್ ರ‍್ಯಾಲಿಯನ್ನು ಭಾರತೀಯ ನೌಕಾಪಡೆ ಆಯೋಜಿಸುತ್ತಿದೆ.
ರ‍್ಯಾಲಿಯು 10 ಕಾರುಗಳಲ್ಲಿ 30 ಅಧಿಕಾರಿಗಳು ಮತ್ತು ಅವರ ಕುಟುಂಬಗಳನ್ನು ಒಳಗೊಂಡಿದ್ದು, ಮಾ.16 ರಂದು ಕಾರವಾರದಿಂದ ಆರಂಭಗೊಳ್ಳಲಿದ್ದು ಮಾ 21 ರಂದು 11 ಗಂಟೆಗೆ ಕೊಡಗು ತಲುಪಲಿದೆ.
ಕೊಡಗಿನಲ್ಲಿ ಸೈನಿಕ ಶಾಲೆ ಕೊಡಗುಗೆ ಭೇಟಿ ನೀಡಿ ಮತ್ತು ಅಗ್ನಿಪಥ್ ಯೋಜನೆ ಮತ್ತು ಸಶಸ್ತ್ರ ಪಡೆಗಳಲ್ಲಿ ಅಧಿಕಾರಿಗಳಾಗುವ ಮಾರ್ಗಗಳ ಕುರಿತು ಅರಿವು ಮೂಡಿಸಲಾಗುತ್ತದೆ.
ಮಾ.22ರಂದು ಬೆಳಗ್ಗೆ 8. 30ರಿಂದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರಿಯಪ್ಪ ಸ್ಮಾರಕ ಮೈಸೂರು ರಸ್ತೆ, ಜನರಲ್ ತಿಮ್ಮಯ್ಯ ವೃತ್ತ, ಮೇಜರ್ ಮಂಗೇರಿರ ಮುತ್ತಣ್ಣ, ಶೌರ್ಯ ಚಕ್ರ ವೃತ್ತ ಮತ್ತು ಡಾ. ಅಜ್ಜಮಾಡ ದೇವಯ್ಯ, ಮಹಾವೀರ ಚಕ್ರ ವೃತ್ತದಲ್ಲಿ ಪುಷ್ಪಾರ್ಚನೆ ಸಮಾರಂಭ ನಡೆಯಲಿದೆ.
ಬಾಲಭವನ ಮಡಿಕೇರಿಯಲ್ಲಿ ದೇಣಿಗೆ ಅಭಿಯಾನ. ಕೊಡಗಿನ ಆಯ್ದ ನಿವೃತ್ತ ಯೋಧರು ಮತ್ತು ಗಣ್ಯರೊಂದಿಗೆ ಸಂವಾದ.ಬಳಿಕ ಮಡಿಕೇರಿಯಲ್ಲಿ ಪಾರಂಪರಿಕ ತಾಣಗಳಿಗೆ ಭೇಟಿ ನೀಡುವುದು ಕಾರ್ಯಕ್ರಮದಲ್ಲಿ ಸೇರಿದೆ.