Advertisement

Coimbatore: ಪ್ರಧಾನಿಗೆ 265 ಪತ್ರ ಬರೆದ ಗೃಹಿಣಿ!

01:02 AM Nov 29, 2023 | Team Udayavani |

ಕೊಯಮತ್ತೂರು: ಸಾರ್ವಜನಿಕ ಸಮಸ್ಯೆಗಳನ್ನು ಹೇಳಿಕೊಂಡು ಅದರ ಪರಿಹಾರಕ್ಕಾಗಿ ಸರಕಾರಕ್ಕೆ ಪತ್ರ ಬರೆಯುವ ನಾಗರಿಕರನ್ನು ನೋಡಿರುತ್ತೀರಿ. ಅಂಥವರು ಹೆಚ್ಚೆಂದರೆ ಎಷ್ಟು ಪತ್ರ ಬರೆಯಬಹುದು? 10, 20, 30…!

Advertisement

ತಮಿಳುನಾಡಿನ ಕೊಯಮತ್ತೂರಿನ 36 ವರ್ಷದ ಮಹಿಳೆಯೊಬ್ಬರು ಬರೋಬ್ಬರಿ 265 ಪತ್ರಗಳನ್ನು ಬರೆಯುವ ಮೂಲಕ ವಿವಿಧ ಸಾರ್ವಜನಿಕ ವಿಚಾರಗಳನ್ನು ಪ್ರಧಾನಿ ಕಾರ್ಯಾಲಯದ ಗಮನಕ್ಕೆ ತಂದಿದ್ದಾರೆ.

2023ರ ಮಾರ್ಚ್‌ 8ರಿಂದಲೂ ನಿರಂತರವಾಗಿ ಪ್ರಧಾನಿ ಕಾರ್ಯಾ ಲಯಕ್ಕೆ ಪತ್ರ ಬರೆಯುತ್ತಿರುವುದು ಕೊಯಮತ್ತೂರಿನ ಗಾಂಧಿಮಾ ನಗರದ ಕೃತಿಕಾ. ಇವರು ಬಿಎಸ್‌ಸಿ ಕಂಪ್ಯೂಟರ್‌ ಸೈನ್ಸ್‌ ಪದವೀಧರೆ. 2012ರಲ್ಲಿ ಪಳನಿಸಾಮಿ ಎಂಬವರನ್ನು ವಿವಾಹವಾದ ಬಳಿಕ ನಗರದಲ್ಲೇ ನೆಲೆಸಿದ್ದಾರೆ.

ಯಾವ್ಯಾವ ವಿಚಾರ ಪ್ರಸ್ತಾಪ?: ಅಂತಾರಾಷ್ಟ್ರೀಯ ಮಹಿಳಾ ದಿನದಿಂದ ಅಂದರೆ ಮಾ.8ರಿಂದಲೂ ಕೃತಿಕಾ ಪಿಎಂಒಗೆ ಪತ್ರ ಬರೆಯುತ್ತಿದ್ದಾರೆ. ಅಡುಗೆ ಅನಿಲ ಸಿಲಿಂಡರ್‌ ದರ ಇಳಿಕೆ, ಆನ್‌ಲೈನ್‌ ರಮ್ಮಿಗೆ ನಿಷೇಧ, ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ಸೇರಿದಂತೆ ಹಲವು ಸಾಮಾಜಿಕ ಕಳಕಳಿಯ ವಿಚಾರಗಳನ್ನು ಕೇಂದ್ರ ಸರಕಾರದ ಗಮನಕ್ಕೆ ತಂದಿದ್ದಾರೆ. ಪ್ರಧಾನಿ ಕಾರ್ಯಾಲಯದಲ್ಲಿ “ಕುಂದುಕೊರತೆಗಳ ಪೆಟ್ಟಿಗೆ’ ಇದೆ ಎಂಬುದು ತಿಳಿದ ಮೇಲೆ, ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ನೇರವಾಗಿ ಪ್ರಧಾನಿ ಕಾರ್ಯಾಲಯಕ್ಕೇ ತಿಳಿಸೋಣ ಎಂದು ನಿರ್ಧರಿಸಿ ಪತ್ರಗಳನ್ನು ಬರೆಯಲಾರಂಭಿಸಿದೆ ಎಂದಿದ್ದಾರೆ ಕೃತಿಕಾ.

ಪಿಎಂಒ ಪ್ರತಿಕ್ರಿಯೆ: ಈವರೆಗೆ 265 ಪತ್ರಗಳನ್ನು ಬರೆದಿದ್ದು, ಪಿಎಂಒದಿಂದ ಪ್ರತಿಕ್ರಿಯೆಗಳೂ ಬಂದಿವೆ ಎಂದಿದ್ದಾರೆ ಕೃತಿಕಾ. ಅಲ್ಲದೇ ಪ್ರಧಾನಿ ಕಾರ್ಯಾಲಯದ ಕುಂದುಕೊರತೆಯ ವಿಭಾಗವು ಫೋನ್‌ ಕರೆ ಮಾಡಿ ಪತ್ರಗಳ ಸ್ವೀಕೃತಿ ಬಗ್ಗೆಯೂ ಮಾಹಿತಿ ನೀಡುತ್ತಿರುತ್ತದೆ. ಪತ್ರ ಬರೆದು, ಕಳುಹಿಸಲು ದಿನಕ್ಕೆ 40 ರೂ. ಖರ್ಚಾಗುತ್ತಿದೆ. ತಿಂಗಳಿಗೆ ಅಂದಾಜು 1,200ರೂ. ವೆಚ್ಚವಾಗುತ್ತಿದೆ. ಎಲ್ಲದಕ್ಕಿಂತಲೂ ಹೆಚ್ಚಾಗಿ, ಗೃಹಿಣಿಯಾಗಿದ್ದರೂ ಸರಕಾರವನ್ನು ತಲುಪುವುದು ಕಷ್ಟವಲ್ಲ ಎಂಬುದು ನನಗೆ ಖುಷಿ ತಂದ ವಿಚಾರ ಎಂದಿದ್ದಾರೆ ಕೃತಿಕಾ.

Advertisement
Advertisement

Udayavani is now on Telegram. Click here to join our channel and stay updated with the latest news.

Next