Advertisement

4 ಸಾವಿರ ಕೋಟಿ ಲಾಟರಿ ಹೊಡೀತು

07:20 AM Aug 28, 2017 | |

ವಾಷಿಂಗ್ಟನ್‌: ದಕ್ಷಿಣ ಅಮೆರಿಕದ ನಿವಾಸಿ ವ್ಯಾಂಕ್‌ಝೈಕ್‌ ಬುಧವಾರದವರೆಗೆ ಆಸ್ಪತ್ರೆ ಸಿಬ್ಬಂದಿ. ಆದರೆ ಶುಕ್ರವಾರ ಬೆಳಗಾಗುತ್ತಲೇ ಒಂದಲ್ಲ, ಎರಡಲ್ಲ ನಾಲ್ಕು ಸಹಸ್ರ ಕೋಟಿಗೆ ಒಡತಿ!

Advertisement

ನಿಜವಾಗ್ಯೂ ಲಾಟರಿ ಹೊಡೆಯೋದು ಅಂದ್ರೆ ಇದುವೇ. ನಿನ್ನೆ ರಾತ್ರಿ ಆಸ್ಪತ್ರೆ ಡ್ನೂಟಿ ಮುಗಿಸಿಕೊಂಡು ಬಂದಾಗ ಕೆಲವೇ ಸಾವಿರ ರೂ. ಇದ್ದ ವ್ಯಾಂಕ್‌ಝೈಕ್‌ ಗಳಿಕೆ ಬೆಳಗಾಗು ವಷ್ಟರಲ್ಲೇ ಸಹಸ್ರ ಕೋಟಿಗೆ ಏರಿಕೆಯಾಗಲು ಕಾರಣ ಲಾಟರಿ ಟಿಕೆಟ್‌. ಈ ಮಹಿಳೆ ಗೆದ್ದಿರುವುದು ಬರೋಬ್ಬರಿ 4842 ಕೋಟಿ  ರೂ. (758.7 ಮಿಲಿಯನ್‌ ಡಾಲರ್‌). ಆದರೆ ಈ ಹಣದಲ್ಲಿ ಅರ್ಧದಷ್ಟನ್ನು ವ್ಯಾಂಕ್‌ಝೈಕ್‌ ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಪಾವತಿಸಬೇಕಿದೆ. ಇನ್ನೊಂದು ವಿಶೇಷವೆಂದರೆ ವ್ಯಾಂಕ್‌ಝೈಕ್‌ಗೆ ಒಲಿದಿರುವುದು ಉತ್ತರ ಅಮೆರಿಕದ ಇತಿಹಾಸದಲ್ಲೇ ಅತಿ ದೊಡ್ಡ ಮೊತ್ತದ ಜಾಕ್‌ಪಾಟ್‌.

ಮಧ್ಯಮ ವರ್ಗದ ಮಹಿಳೆಯೊಬ್ಬಳು ಬೆಳಗಾಗುವುದರೊಳಗೆ ಸಹಸ್ರ ಕೋಟಿಗೆ ಒಡತಿಯಾದರೆ ಕಳ್ಳಕಾಕರ ದೃಷ್ಟಿ ಬೀಳದಿರಲು ಸಾಧ್ಯವೇ ಇಲ್ಲ. ವ್ಯಾಂಕ್‌ ವಿಷಯದಲ್ಲೂ ಇದೇ ಆಗಿದೆ. ಆದರೆ ವಿಷಯ ತಿಳಿಯುತ್ತಿ ದ್ದಂತೆ ಪೊಲೀಸರ ವಾಹನ ಹೋಗಿ ವ್ಯಾಂಕ್‌ಝೈಕ್‌ ಮನೆ ಮುಂದೆ ನಿಂತಿದ್ದು, ಸೂಕ್ತ ರಕ್ಷಣೆಯ ಭರವಸೆ ಒದಗಿಸಿದೆ. ಇದೇ ವೇಳೆ ವ್ಯಾಂಕ್‌ರನ್ನು ಹುಡುಕಿಕೊಂಡು ಬರುವವರ ಸಂಖ್ಯೆಯೂ ಹೆಚ್ಚಿದ್ದು, ಮಾಧ್ಯಮದವರು ಅಕ್ಕಪಕ್ಕದ ಮನೆಗಳ ಬಾಗಿಲು ಬಡಿದು “ಇಲ್ಲಿ ವ್ಯಾಂಕ್‌ಝೈಕ್‌ ಮನೆ ಎಲ್ಲಿದೆ’ ಎಂದು ಕೇಳುತ್ತಿದ್ದಾರೆ. ಈ ಹಿಂದೆಯೂ ಇದೇ ರೀತಿ ಲಾಟರಿ ಗೆದ್ದವರು ದರೋಡೆಕೋರರ ಗುಂಡಿಗೆ ಬಲಿಯಾಗಿದ್ದರಂತೆ. ಹೀಗಾಗಿಯೇ ಈಗ ವ್ಯಾಂಕ್‌ಗೂ ಪೊಲೀಸರು ಭದ್ರತೆ ಒದಗಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next