Advertisement

ಬಿಲ್ಡರ್‌ಗೆ ಹನಿಟ್ರ್ಯಾಪ್‌ ಖೆಡ್ಡಾ ತೋಡಿ ಫ್ಲ್ಯಾಟ್‌ ಕೇಳಿದ ಮಹಿಳೆ!

01:22 PM Aug 26, 2022 | Team Udayavani |

ಬೆಂಗಳೂರು: ಡೇಟಿಂಗ್‌ ಆ್ಯಪ್‌ ಮೂಲಕ ಬಿಲ್ಡರ್‌ವೊಬ್ಬನನ್ನು ಪರಿಚಯಿಸಿಕೊಂಡು ಆತನ ಜತೆಗಿನ ಖಾಸಗಿ ಕ್ಷಣಗಳ ಫೋಟೋ ಮತ್ತು ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‌ ಮೇಲ್‌ ಮಾಡುತ್ತಿದ್ದ ಮಹಿಳೆ ವಿರುದ್ಧ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಮಹಿಳೆ ತಲೆಮರೆಸಿಕೊಂಡಿದ್ದು, ಆಕೆಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

Advertisement

ಜಯನಗರದಲ್ಲಿ ವಾಸವಾಗಿರುವ ಬಿಲ್ಡರ್‌ ಗೆ ಮದುವೆಯಾಗಿದೆ. ಡೇಟಿಂಗ್‌ ಆ್ಯಪ್‌ ಮೂಲದ ಆಂಧ್ರಪ್ರದೇಶ ಮೂಲದ ವಿಧವೆಯೊಬ್ಬರನ್ನು ಪರಿಚಯಿಸಿಕೊಂಡು ಆಕೆ ಜತೆ ಖಾಸಗಿ ಕ್ಷಣಗಳನ್ನು ಕಳೆದಿದ್ದರು. ಆದರೆ, ಇದೀಗ ಇಬ್ಬರ ನಡುವೆ ವೈಮನಸ್ಸು ಉಂಟಾಗಿದೆ. ಹೀಗಾಗಿ ಮಹಿಳೆ ಫ್ಲ್ಯಾಟ್‌, ನಗದು ಕೊಡುವಂತೆ ದುಂಬಾಲು ಬಿದ್ದಿದ್ದಳು.

ಆದರೆ, ಬಿಲ್ಡರ್‌ ಕೊಟ್ಟಿರಲಿಲ್ಲ. ಖಾಸಗಿ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್‌ ಮಾಡಿ ಇದುವರೆಗೂ 7 ಲಕ್ಷ ರೂ. ಸುಲಿಗೆ ಮಾಡಿದ್ದಾಳೆ. ಆದರೂ ನಗರದಲ್ಲಿ ಫ್ಲ್ಯಾಟ್‌, ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಾಗ ಇದೀಗ ಬಿಲ್ಡರ್‌ ಪೊಲೀಸ್‌ ಠಾಣೆ ಮೊರೆ ಹೋಗಿದ್ದಾರೆ.

ಇದನ್ನೂ ಓದಿ:ಬಿಜೆಪಿ ಹೈಕಮಾಂಡ್ ವರಿಷ್ಠರ ಭೇಟಿಗಾಗಿ ದೆಹಲಿಗೆ ತೆರಳಿದ ಬಿಎಸ್ ಯಡಿಯೂರಪ್ಪ

Advertisement

Udayavani is now on Telegram. Click here to join our channel and stay updated with the latest news.

Next