Advertisement
ಈ ಸಂಗ್ರಹಾಲಯವು ಆರು ಎಕ್ರೆ ಜಾಗದಲ್ಲಿ ಹರಡಿಕೊಂಡಿದ್ದು, ಹಲವಾರು ಶತಮಾನ ಹಿಂದಿನ ಕಾಲದ ಪುನರ್‌ನಿರ್ಮಿತ ಮನೆಗಳು ಮತ್ತು ದೇವಾಲಯಗಳನ್ನು ಇಲ್ಲಿ ನೋಡಬಹುದು. ಈ ಸಂಗ್ರಹಾಲಯವು ಉಡುಪಿಯವರಾದ ದಿ| ವಿಜಯನಾಥ ಶೆಣೈ ಅವರ ಪ್ರೀತಿಯ ಕೊಡುಗೆಯಾಗಿದೆ. ಇವರ 20 ವರ್ಷಗಳ ಪರಿಶ್ರಮದ ಫಲವಾಗಿದೆ ಇದು ನಿರ್ಮಾಣಗೊಂಡಿದೆ. ಈ ಸಂಗ್ರಹಾಲಯದಲ್ಲಿ ಹಲವಾರು ಸಾಂಪ್ರದಾಯಿಕ ಮನೆ, ಐತಿಹಾಸಿಕ ಕಟ್ಟಡಗಳು ಮತ್ತು ಗುಡಿಗಳನ್ನು ಇರಸಲಾಗಿದ್ದು, ಕಲೆ, ಕರಕುಶಲ ವಸ್ತುಗಳು, ಜವುಳಿ, ಪಾತ್ರೆಗಳು, ಉಪಕರಣಗಳು, ಪೀಠೊಪಕರಣಗಳು ಮತ್ತು ಆಟಿಕೆಗಳ ಆನೇಕ ಗ್ಯಾಲರಿಗಳನ್ನು ಹೊಂದಿದೆ. ಶೆಣೈ ಅವರು ಭವಿಷ್ಯದ ಪೀಳಿಗೆಗಾಗಿ ಅಳಿವಿನಂಚಿನಲ್ಲಿರುವ ಅನೇಕ ಶಾಸ್ತ್ರೀಯ ಮತ್ತು ಜಾನಪದ ಸಂಪ್ರದಾಯಗಳನ್ನು ಇಲ್ಲಿ ಕಾಪಾಡುವ ಕೆಲಸವನ್ನು ಮಾಡಿದ್ದಾರೆ.
Related Articles
Advertisement
ನಲ್ಲಿ ಬೃಹತ್ ಮರದ ಮುಖವಾಡಗಳು, ಧೋಕ್ರ ಲೋಹದ ವಿಗ್ರಹಗಳನ್ನು ನೋಡಬಹುದಾಗಿದೆ. ನಂದಿಕೇಶ್ವರ ಗುಡಿ, ವಿಷ್ಣು ಮಂದಿರ, ವೀರ ಶೈವ ಜಂಗಮ ಮಠ, ರಾಮಚಂದ್ರಪುರ ಮಠ, ವಿದ್ಯಾ ಮಂದಿರ, ಕುಂಜೂರು ಚೌಕಿ ಮನೆ, ಭಟ್ಕಳ ನವಯತ್ ಮುಸ್ಲಿಂ ಮನೆ, ಗತಕಾಲದ ಮಾರುಕಟ್ಟೆಗಳು, ಬೀದಿಗಳು, ಅಂಗಡಿ ಮುಂಗಟ್ಟುಗಳು, ಸಂಪ್ರದಾಯಿಕ ಮತ್ತು ಸಂಸ್ಕೃತಿಕ ಕಲಾಕೃತಿಗಳು, ಹರಿಹರ ಮಂದಿರ ಹೀಗೆ ಸುಮಾರು 24 ಬಗೆಯ ಮನೆ, ಮಂದಿರ ಮತ್ತು ಐತಿಹಾಸಿಕ ಕಟ್ಟಡವನ್ನು ಇಲ್ಲಿ ಕಾಣಬಹುದು.
ಒಟ್ಟಾರೆಯಾಗಿ ಅಳಿಯುತ್ತಿರುವ ನಮ್ಮ ಪರಂಪರೆಯನ್ನು ರಕ್ಷಿಸಿ ಮುಂದಿನ ಪೀಳಿಗೆಗ ತಲುಪಿಸುವಲ್ಲಿ ಈ ಸಂಗ್ರಹಾಲಯ ಕಾರ್ಯ ನಿರತವಾಗಿದೆ ಎಂದರೆ ತಪ್ಪಾಗದು. ಬಿಡುವು ಮಾಡಿಕೊಂಡು ನೀವೂ ಒಮ್ಮೆ ಭೇಟಿ ನೀಡಿ ನಮ್ಮ ಸಂಸ್ಕೃತಿ, ಕಲೆಯ ಬಗ್ಗೆ ತಿಳಿದುಕೊಳ್ಳಿ.
-ಕೆ.ಎಂ. ಪವಿತ್ರಾ
ಎಂಜಿಎಂ ಕಾಲೇಜು ಉಡುಪಿ