Advertisement

Kumbla ರಸ್ತೆಗಿಳಿದ ಕಾಡು ಹಂದಿಗಳ ಹಿಂಡು

12:20 AM Dec 14, 2023 | Team Udayavani |

ಕುಂಬಳೆ: ಆರಿಕ್ಕಾಡಿ-ಬಂಬ್ರಾಣ ರಸ್ತೆಯಲ್ಲಿ ಮಂಗಳವಾರ ರಾತ್ರಿ ಒಂದು ಡಜನ್‌ಗಿಂತಲೂ ಅಧಿಕ ಕಾಡು ಹಂದಿಗಳು ಕಂಡು ಬಂದಿದ್ದು, ವಾಹನ ಸಂಚಾರಕ್ಕೆ ಅಡಚಣೆಯನ್ನುಂಟು ಮಾಡಿವೆ. ಆ ಬಳಿಕ ಕಾಡಿನತ್ತ ಓಡಿ ಪರಾರಿಯಾದವು. ಈ ರಸ್ತೆಯಲ್ಲಿ ಕಾರೊಂದು ಸಂಚರಿಸುತ್ತಿದ್ದಾಗ ಮರಿಗಳ ಸಹಿತ ಕಾಡು ಹಂದಿಗಳು ಅಡ್ಡ ಬಂದವು. ಕಾರಿನ ಬೆಳಕಿನಲ್ಲಿ ದೂರಕ್ಕೆ ಓಡಿದ ಬಳಿಕ ರಸ್ತೆಯಿಂದ ಮರೆಯಾಗಿವೆ.

Advertisement

ಡಿ. 12ರಂದು ಬೆಳಗ್ಗೆ ಕೊಡ್ಯಮ್ಮೆಯ ಖಾಸಗಿ ಶಾಲಾ ಮೈದಾನದಲ್ಲಿ ಹಂದಿಯೊಂದು ಶಾಲಾ ಮಕ್ಕಳನ್ನು ಓಡಿಸಿದ್ದು, ಬಾಲಕಿಯೋರ್ವಳು ಬಿದ್ದು ಗಾಯಗೊಂಡಿದ್ದಾಳೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಹಂದಿಯನ್ನು ಬಲೆ ಬಳಸಿ ಸೆರೆ ಹಿಡಿದಿದ್ದಾರೆ. ಈ ಘಟನೆಯ ಬೆನ್ನಲ್ಲೇ ಮಂಗಳವಾರ ರಾತ್ರಿ ಕಾಡು ಹಂದಿಗಳ ಹಿಂಡು ರಸ್ತೆಯಲ್ಲಿ ಕಂಡು ಬಂದಿದೆ.

ಇತ್ತೀಚೆಗೆ ಕಂಚಿಕಟ್ಟೆಯಲ್ಲಿ ಆಟೋವೊಂದಕ್ಕೆ ಹಂದಿ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಚಾಲಕ ಗಾಯಗೊಂಡಿದ್ದರು.

 

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next