Advertisement

ಕಿಡ್ನಿ ಕಲ್ಲು  ಮರುಕಳಿಸುವುದನ್ನು ತಡೆಯಲು ಆರೋಗ್ಯಕರ ಆಹಾರಾಭ್ಯಾಸ

07:45 AM Sep 17, 2017 | |

ಒಮ್ಮೆಗೆ ಮುಗಿಯುವುದಿಲ್ಲ
ಕಿಡ್ನಿ ಕಲ್ಲನ್ನು ವಿಸರ್ಜಿಸುವುದು ವ್ಯಕ್ತಿಯೊಬ್ಬ ಅನುಭವಿಸಬಹುದಾದ ಅತ್ಯಂತ ನೋವಿನ ಅನುಭವ ಎಂದು ಆಗಾಗ ವರ್ಣಿಸಲಾಗುತ್ತದೆ. ದುರದೃಷ್ಟವಶಾತ್‌ ಅದು ಒಂದೇ ಬಾರಿಗೆ ಹೀಗೆ ವಿಸರ್ಜಿಸಿ ಮುಗಿದುಹೋಗುವುದಿಲ್ಲ. ಕೇವಲ ಒಂದು ಕಲ್ಲು ಮಾತ್ರ ಇದ್ದರೂ ಇನ್ನೊಂದು ಕಲ್ಲು ಉಂಟಾಗುವ ಸಾಧ್ಯತೆ ಅಧಿಕ ಎಂದು ಅಧ್ಯಯನಗಳು ತೋರಿಸಿಕೊಟ್ಟಿವೆ.  ಕಿಡ್ನಿಕಲ್ಲು ಉಳ್ಳ ರೋಗಿಗಳ ಪೈಕಿ ಶೇ.15ರಷ್ಟು ಮಂದಿ ವೈದ್ಯರು ಶಿಫಾರಸು ಮಾಡಿರುವ ಔಷಧಿಗಳನ್ನು ತೆಗೆದುಕೊಳ್ಳುವುದಿಲ್ಲ ಎಂದೂ ಮತ್ತು ಶೇ.41ರಷ್ಟು ಮಂದಿ ಕಲ್ಲುಗಳು ಮತ್ತೆ ಉಂಟಾಗುವುದನ್ನು ತಡೆಯುವುದಕ್ಕೋಸ್ಕರ ಶಿಫಾರಸು ಮಾಡಲಾದ ಪಥ್ಯಾಹಾರವನ್ನು ಅನುಸರಿಸುವುದಿಲ್ಲ ಎಂದೂ ಅಧ್ಯಯನಗಳು ಹೇಳುತ್ತವೆ. ಸರಿಯಾದ ಔಷಧಿ ಸೇವನೆ ಮತ್ತು ಆಹಾರ ಬದಲಾವಣೆಗಳನ್ನು ಅನುಸರಿಸದೆ ಇದ್ದರೆ ಕಲ್ಲುಗಳು ಮತ್ತೆ ಮತ್ತೆ ಉಂಟಾಗಬಹುದು; ಹೀಗೆ ಪದೇ ಪದೇ ಕಲ್ಲುಗಳು ರೂಪುಗೊಳ್ಳುವುದು ಮೂತ್ರಪಿಂಡಗಳ ಕಾಯಿಲೆಯ ಸಹಿತ ಇತರ ಆರೋಗ್ಯ ಸಮಸ್ಯೆಗಳ ಸೂಚನೆಯೂ ಆಗಿರಬಹುದು.

Advertisement

ಪ್ಯುರೈನ್‌ಯುಕ್ತ ಆಹಾರ 
ವಸ್ತುಗಳನ್ನು  ಮಿತಗೊಳಿಸಿ

ಕ್ಯಾಲ್ಸಿಯಂ ಓಕ್ಸಲೇಟ್‌ ಕಲ್ಲುಗಳ ಜತೆಗೆ ಬಹುಸಾಮಾನ್ಯವಾಗಿ ಉಂಟಾಗುವ ಇನ್ನೊಂದು ವಿಧವಾದ ಕಿಡ್ನಿಕಲ್ಲುಗಳೆಂದರೆ ಯೂರಿಕ್‌ ಆ್ಯಸಿಡ್‌ ಕಲ್ಲುಗಳು. ಕೆಂಪು ಮಾಂಸ, ಅಂಗಾಂಗ ಮಾಂಸ ಮತ್ತು ಚಿಪ್ಪುಮೀನುಗಳು ಪ್ಯುರೈನ್‌ಗಳೆಂದು ಕರೆಯಲ್ಪಡುವ ನೈಸರ್ಗಿಕ ರಾಸಾಯನಿಕ ಸಂಯುಕ್ತವನ್ನು ಅತ್ಯಧಿಕ ಪ್ರಮಾಣದಲ್ಲಿ ಹೊಂದಿರುತ್ತವೆ. ಆಹಾರದ ಮೂಲಕ ಪ್ಯುರೈನ್‌ ಹೆಚ್ಚು ಪ್ರಮಾಣದಲ್ಲಿ ದೇಹಕ್ಕೆ ಪೂರೈಕೆಯಾದರೆ ಯೂರಿಕ್‌ ಆ್ಯಸಿಡ್‌ ಉತ್ಪಾದನೆ ಅಧಿಕವಾಗುತ್ತದೆ ಹಾಗೂ ಮೂತ್ರಪಿಂಡಗಳು ಹೆಚ್ಚು ಆಮ್ಲವನ್ನು ಶೋಧಿಸಬೇಕಾಗುತ್ತದೆ. ಯೂರಿಕ್‌ ಆ್ಯಸಿಡ್‌ ಹೆಚ್ಚು ಪ್ರಮಾಣದಲ್ಲಿ ಶೋಧಿಸಲ್ಪಡುವುದರಿಂದ ಮೂತ್ರದ ಒಟ್ಟಾರೆ ಪಿಎಚ್‌ ಮಟ್ಟ ಕಡಿಮೆಯಾಗಿ ಮೂತ್ರ ಹೆಚ್ಚು ಆಮ್ಲಿàಯವಾಗುತ್ತದೆ. ಮೂತ್ರದಲ್ಲಿ ಆಮ್ಲ ಪ್ರಮಾಣ ಹೆಚ್ಚುವುದರಿಂದ ಯೂರಿಕ್‌ ಆ್ಯಸಿಡ್‌ ಕಲ್ಲುಗಳು ಉಂಟಾಗುವುದು ಸುಲಭಸಾಧ್ಯವಾಗುತ್ತದೆ. 

ಯೂರಿಕ್‌ ಆ್ಯಸಿಡ್‌ ಕಲ್ಲುಗಳು ಉಂಟಾಗುವುದನ್ನು ತಡೆಯಲು ಕೆಂಪು ಮಾಂಸ, ಅಂಗಾಂಗ ಮಾಂಸ, ಚಿಪ್ಪುಮೀನುಗಳಂತಹ ಆಹಾರ ಸೇವನೆಯನ್ನು ಮಿತಗೊಳಿಸಬೇಕು. ಅದರ ಬದಲಾಗಿ ತರಕಾರಿ ಮತ್ತು ಹಣ್ಣುಗಳು, ಇಡೀ ಧಾನ್ಯಗಳು ಮತ್ತು ಕಡಿಮೆ ಕೊಬ್ಬಿನಂಶವುಳ್ಳ ಹೈನುಉತ್ಪನ್ನಗಳಂತಹ ಆರೋಗ್ಯಯುತ ಆಹಾರ ಕ್ರಮವನ್ನು ಅನುಸರಿಸಬೇಕು. ಸಕ್ಕರೆ ಅದರಲ್ಲೂ ಫ್ರುಕ್ಟೋಸ್‌ ಕಾರ್ನ್ ಸಿರಪ್‌ ಬೆರೆತ ಸಿಹಿ ಪಾನೀಯಗಳು ಮತ್ತು ಆಹಾರವಸ್ತುಗಳ ಸೇವನೆಯನ್ನು ನಿಯಂತ್ರಿಸಿ. ಮದ್ಯವು ರಕ್ತದಲ್ಲಿ ಯೂರಿಕ್‌ ಆ್ಯಸಿಡ್‌ ಪ್ರಮಾಣವನ್ನು ವೃದ್ಧಿಸುವುದರಿಂದ ಮದ್ಯಪಾನದಿಂದ ದೂರವಿರಿ. ಪ್ರಾಣಿಜನ್ಯ ಪ್ರೊಟೀನ್‌ ಸೇವನೆಯನ್ನು ಕಡಿಮೆಗೊಳಿಸಿ, ಹೆಚ್ಚು ತರಕಾರಿ – ಹಣ್ಣುಹಂಪಲುಗಳನ್ನು ಸೇವಿಸುವುದರಿಂದ ಯೂರಿಕ್‌ ಆ್ಯಸಿಡ್‌ ಮಟ್ಟವನ್ನು ತಗ್ಗಿಸುವುದರ ಜತೆಗೆ ಕಿಡ್ನಿ ಕಲ್ಲು ಉಂಟಾಗುವ ಅಪಾಯವನ್ನು ದೂರ ಸರಿಸಬಹುದು. 

ಸ್ಟ್ರಾಂಗ್‌ ಕಾಫಿ, ಚಹಾ 
ಸೇವನೆಯನ್ನು ಕಡಿಮೆ ಮಾಡಿ

ಸ್ಟ್ರಾಂಗ್‌ ಅಥವಾ ಹಾಲು ಹಾಕದ ಕಡು ಕಾಫಿ ಮತ್ತು ಚಹಾದಲ್ಲಿ ಓಕ್ಸಲೇಟ್‌ಗಳು ಅತ್ಯಧಿಕ ಪ್ರಮಾಣದಲ್ಲಿರುತ್ತವೆ. ಇದು ಕಿಡ್ನಿಕಲ್ಲು ರೂಪುಗೊಳ್ಳುವ ಅಪಾಯವನ್ನು ಹೆಚ್ಚಿಸುತ್ತದೆ. ಹೀಗಾಗಿ ಕ್ಯಾಲ್ಸಿಯಂ ಓಕ್ಸಲೇಟ್‌ ಕಿಡ್ನಿಕಲ್ಲುಗಳುಳ್ಳುವರು ತೆಳು ಕಾಫಿ ಅಥವಾ ಚಹಾ ಕುಡಿಯಬಹುದು. ಆದರೆ ಸ್ಟ್ರಾಂಗ್‌ ಚಹಾ ಅಥವಾ ಕಾಫಿಯನ್ನು ವರ್ಜಿಸಬೇಕು. ಚಹಾ ಕಾಫಿ ಕುಡಿಯುವವರು ಹಾಲು ಬೆರೆಸಿದ ಚಹಾ ಅಥವಾ ಕಾಫಿಯನ್ನು ದಿನಕ್ಕೆ ಎರಡು ಕಪ್ಪುಗಳಂತೆ ಮಧ್ಯಮ ಪ್ರಮಾಣದಲ್ಲಿ ಸೇವಿಸುವುದು ಸೂಕ್ತವಾಗಿದೆ. 

ತೂಕ ಇಳಿಸಿಕೊಳ್ಳುವುದು
ಬೊಜ್ಜು  ಮತ್ತು ಕಿಡ್ನಿಕಲ್ಲು ರೂಪುಗೊಳ್ಳುವುದರ ನಡುವೆ ಸಂಬಂಧ ಇರುವುದನ್ನು ಹೊಸ ಸಂಶೋಧನೆಗಳು ತೋರಿಸಿಕೊಟ್ಟಿವೆ. ಬೊಜ್ಜು, ಅಧಿಕ ದೇಹತೂಕವುಳ್ಳ ಹೆಚ್ಚು ಸೊಂಟದ ಸುತ್ತಳತೆಯುಳ್ಳವರು ಕಿಡ್ನಿ ಕಲ್ಲುಗಳ ಅಪಾಯವನ್ನು ದೂರವಿರಿಸಲು ದೇಹತೂಕ ಇಳಿಸಿಕೊಳ್ಳಬೇಕು. ಸಂಸ್ಕರಿತ ಸಕ್ಕರೆ, ಕಡಿಮೆ ದ್ರವಾಹಾರ ಸೇವನೆ ಮತ್ತು ಪ್ಯುರೈನ್‌ ಹೆಚ್ಚು ಇರುವ ಆಹಾರ ಸೇವನೆಗೂ ಬೊಜ್ಜಿಗೂ ನಿಕಟ ಸಂಬಂಧವಿದೆ. ಈ ಎಲ್ಲ ಅಂಶಗಳು ಕಿಡ್ನಿ ಕಲ್ಲು ಉಂಟಾಗುವ ಅಪಾಯವನ್ನೂ ಹೆಚ್ಚಿಸುತ್ತವೆ. ಇಡೀ ಧಾನ್ಯಗಳು, ಹಣ್ಣುಗಳು, ತರಕಾರಿಗಳು ಮತ್ತು ಕಡಿಮೆ ಕೊಬ್ಬಿನಂಶ ಇರುವ ಮಾಂಸಾಹಾರ ಸಹಿತವಾದ ಆರೋಗ್ಯಕರ ಆಹಾರಸೇವನೆಯನ್ನು ರೂಢಿಸಿಕೊಳ್ಳುವುದು ದೇಹ ತೂಕ ಇಳಿಕೆಗೂ ಸಹಕಾರಿ; ಕಿಡ್ನಿ ಕಲ್ಲು ಮತ್ತು ಬೊಜ್ಜಿಗೆ ಸಂಬಂಧಿಸಿದ ಇತರ ಆರೋಗ್ಯ ಸಮಸ್ಯೆಗಳನ್ನು ದೂರವಿರಿಸುವುದಕ್ಕೂ ನೆರವಾಗುತ್ತದೆ. 

Advertisement

ಸಾಫ್ಟ್ ಡ್ರಿಂಕ್‌ ಮತ್ತು ಕೋಲಾ ವರ್ಜಿಸಿ ಪಾಸಾಕ್‌ ಆ್ಯಸಿಡ್‌ ಹೊಂದಿರುವ ಸಾಫ್ಟ್ಡ್ರಿಂಕ್‌ ಮತ್ತು ಕೋಲಾಗಳನ್ನು, ಅವುಗಳ ಯೂರಿಕ್‌ ಆಮ್ಲವೃದ್ಧಿಯ ಗುಣದಿಂದಾಗಿ ವರ್ಜಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next