Advertisement
ಮುಂಡಾಜೆ, ಚಿಬಿದ್ರೆ, ಚಾರ್ಮಾಡಿ, ತೋಟತ್ತಾಡಿ, ನೆರಿಯ, ಚಾರ್ಮಾಡಿ ಪರಿಸರದಲ್ಲಿ ನಿರಂತರವಾಗಿ ಕಾಣಿಸಿ ಕೊಳ್ಳುತ್ತಿರುವ ಆನೆಗಳು ಅಡಿಕೆ, ತೆಂಗು, ಬಾಳೆ ಕೃಷಿ ನೆಲಸಮ ಮಾಡುತ್ತಿವೆ. ಮಂಗಳವಾರ ತಡರಾತ್ರಿ ಮುಂಡಾಜೆ ಪರಿಸರದಲ್ಲಿ ದಾಳಿ ಮುಂದುವರಿಸಿದ ಆನೆಗಳು ಅಪಾರ ಪ್ರಮಾಣದ ಕೃಷಿ ಹಾನಿ ಉಂಟು ಮಾಡಿವೆ.
Related Articles
Advertisement
ಮುಂಡಾಜೆಯಲ್ಲಿ ನರ್ಸರಿ ಧ್ವಂಸರಾಷ್ಟ್ರೀಯ ಹೆದ್ದಾರಿ 73ಕ್ಕೆ ತಾಗಿಕೊಂಡಿರುವ ಅರಣ್ಯ ಇಲಾಖೆಗೆ ಸಂಬಂಧಿಸಿದ ಮುಂಡಾಜೆ ಕಾಪು ನರ್ಸರಿಯಲ್ಲಿ ಮುಂದಿನ ವರ್ಷಕ್ಕೆ ವಿತರಣೆಗೆ ಸಿದ್ಧಗೊಳಿಸಿದ್ದ ಗಿಡಗಳನ್ನು ಕಾಡಾನೆಗಳು ಹಾನಿಗೊಳಿಸಿವೆ. ಗಿಡಗಳ ರಕ್ಷಣೆಗೆ ಹಾಕಲಾಗಿದ್ದ ಶೆಡ್ ಅನ್ನು ಮುರಿದು ಲಕೋಟೆಗಳಲ್ಲಿ ತುಂಬಲಾಗಿದ್ದ ಮಣ್ಣು ಹಾಗೂ ನಾಟಿ ಮಾಡಿದ ಗಿಡಗಳನ್ನು ಧ್ವಂಸಗೊಳಿಸಿವೆ.ಉಪ ವಲಯ ಅರಣ್ಯಾಧಿಕಾರಿ ಹರಿಪ್ರಸಾದ್, ಸಿಬಂದಿ ಪರಿಶೀಲನೆ ನಡೆಸಿ ವರದಿ ನೀಡಿದ್ದಾರೆ.