Advertisement

ಬಡವರಿಗೆ ಆರ್ಥಿಕ ಬಲ ತುಂಬಿದ ಗ್ಯಾರಂಟಿ: ಗಡ್ಡದೇವರಮಠ

02:16 PM May 08, 2024 | Team Udayavani |

ಉದಯವಾಣಿ ಸಮಾಚಾರ
ಗದಗ: ಲಕ್ಷ್ಮೇಶ್ವರ ಪಟ್ಟಣದ ಎಪಿಎಂಸಿಯ ಮತಗಟ್ಟೆ ಸಂಖ್ಯೆ 109ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರು ಕುಟುಂಬ ಸಮೇತ ಆಗಮಿಸಿ ಮತದಾನ ಮಾಡಿದರು. ಪತ್ನಿ ದೀಪಾ ಗಡ್ಡದೇವರಮಠ, ಪುತ್ರಿ ಚಿನ್ಮಯಿ ಗಡ್ಡದೇವರಮಠ ಸೇರಿ ಕುಟುಂಬ ಸಮೇತರಾಗಿ ಮತಗಟ್ಟೆಗೆ ಆಗಮಿಸಿ ಮತ ಹಾಕಿದರು.

Advertisement

ಇದನ್ನೂ ಓದಿ:SSLC Result: ನಾಳೆ ಎಸೆಸೆಲ್ಸಿ ಫಲಿತಾಂಶ ಪ್ರಕಟ

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಜನರು, ಮತದಾರರು ಹಾಗೂ  ಕಾರ್ಯಕರ್ತರೆಲ್ಲರೂ ನನ್ನ ಅಣ್ಣ, ತಮ್ಮ, ಮಗ, ಸ್ನೇಹಿತ ಎಂದು ವಿಶ್ವಾಸ ತೋರಿ ಆಶೀರ್ವಾದ  ಮಾಡಿದ್ದಾರೆ. ಅವರ ಪ್ರೀತಿ, ವಿಶ್ವಾಸಕ್ಕೆ ಧನ್ಯವಾದ ಹೇಳುತ್ತೇನೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ, ಸಚಿವ ಎಚ್‌.ಕೆ. ಪಾಟೀಲ, ಶಿವಾನಂದ ಪಾಟೀಲ, ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕರೆಲ್ಲರೂ ಒಗ್ಗಟ್ಟಾಗಿ ಆಶೀರ್ವಾದ ಮಾಡಿದ್ದು, ಅತ್ಯಧಿಕ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂಬ ವಿಶ್ವಾಸ ಮೂಡಿದೆ ಎಂದು ಹೇಳಿದರು.

ಇದು ಬದಲಾವಣೆಯ ಪರ್ವ. ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಅನುಷ್ಠಾನಗೊಳಿಸಿರುವ ಪಂಚ ಗ್ಯಾರಂಟಿಗಳು
ಬಡ ಕುಟುಂಬಗಳ ಪ್ರತಿ ಮನೆ-ಮನೆಗಳಿಗೆ ಆರ್ಥಿಕ ಬಲ, ಶಕ್ತಿ ತುಂಬಿದೆ. ಮತದಾನ ಆರಂಭವಾದ ನಂತರ ಗದಗ ಮತಕ್ಷೇತ್ರ ಹಾಗೂ ನನ್ನ ಸ್ವಕ್ಷೇತ್ರ ಲಕ್ಷ್ಮೇಶ್ವರದಲ್ಲಿ ಸಂಚರಿಸಿದ್ದೇನೆ. ಎಲ್ಲೆಡೆ ಅಭೂತಪೂರ್ವ ಬೆಂಬಲ ದೊರೆತಿದೆ. ಪ್ರಚಾರ ಸಂದರ್ಭದಲ್ಲಿ ತಾಯಂದಿರು, ಹಿರಿಯರು, ಸಹೋದರರು ಪ್ರೀತಿ, ವಿಶ್ವಾಸ ತೋರಿದ್ದಾರೆ. ಅವರಿಗೆ ಚಿರಋಣಿಯಾಗಿದ್ದೇನೆ. ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next