Advertisement

“ಭಾರತದಲ್ಲಿ ಸ್ವ-ಉದ್ಯೋಗಕ್ಕೆ ಉತ್ತಮ ಅವಕಾಶ’

03:45 AM Jul 07, 2017 | |

ಕಾರ್ಕಳ: ಪ್ರಸ್ತುತವಾಗಿ ಉದ್ಯಮ ಕ್ಷೇತ್ರದ ಅಗತ್ಯತೆಯ ಹಿನ್ನೆಲೆಯಲ್ಲಿ ಪಠ್ಯಕ್ರಮದಲ್ಲಿ ಕೆಲವಾರು ಬದಲಾವಣೆ ಮಾಡಬಹುದಾಗಿದೆ. ಇಂದು ಭಾರತದಲ್ಲಿ ಸ್ವ-ಉದ್ಯೋಗಕ್ಕೆ ಉತ್ತಮ ಪ್ರೋತ್ಸಾಹ ಸರಕಾರದ ವತಿಯಿಂದ ಘೋಷಿಸಲಾಗಿದೆ. ತಯಾರಿಕಾ ಘಟಕ ಹಾಗೂ ವಾಹನ ತಂತ್ರಜ್ಞಾನ ಕ್ಷೇತ್ರಕ್ಕೆ ಬಹಳಷ್ಟು ಅವಕಾಶವಿದೆ ಎಂದು ಉಡುಪಿ ಜಿಲ್ಲಾ ಇಂಡಸ್ಟ್ರೀಸ್‌ ಸೆಂಟರ್‌ನ ಸಹನಿರ್ದೇಶಕ ರಮಾನಂದ ನಾಯಕ್‌ ಹೇಳಿದ್ದಾರೆ.

Advertisement

ಅವರು ಎನ್‌.ಎನ್‌.ಎಂ.ಎ.ಎಂ. ಇನ್ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಎಂಟ್ರಪ್ರೀನರ್‌ಶಿಪ್‌ ಡೆವಲಪ್‌ಮೆಂಟ್‌ ಸೆಲ್‌ ವಿಭಾಗವು ರಾಷ್ಟ್ರ ವಿಜ್ಞಾನ ಮತ್ತು ತಂತ್ರಜ್ಞಾನ ಉದ್ಯಮಶೀಲ ಅಭಿವೃದ್ಧಿ ಪ್ರಾ ಧಿಕಾರದ ಪ್ರಾಯೋಜಕತ್ವದಲ್ಲಿ ಹಾಗೂ ಎಂಟ್ರಪ್ರೀನರ್‌ಶಿಫ್‌ ಡೆವಲಪ್‌ಮೆಂಟ್‌ ಇನ್ಸ್ಟಿಟ್ಯೂಟ್‌ ಆಫ್‌ ಇಂಡಿಯಾದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 
“ಉದ್ಯಮಶೀಲತೆ”ಯ ಎರಡು ವಾರಗಳ ಫ್ಯಾಕಲ್ಟಿ ಡೆವಲಪ್‌ಮೆಂಟ್‌ ಕಾರ್ಯಾಗಾರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.

ಇಂದು ವಿಶ್ವದಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆಗಳನ್ನು ಕಾಣುತ್ತಿದ್ದೇವೆ. ಈ ಸಂದರ್ಭದಲ್ಲಿ ಅಧ್ಯಾಪಕರು ಉದ್ಯಮಶೀಲತೆಯ ಬಗ್ಗೆ ಮಾಹಿತಿವಂತರಾದರೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಬಹುದಾಗಿದೆ. ಕೇಂದ್ರ ಸರಕಾರದ ಯೋಜನೆಗಳು ಹಲವಾರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಲಿದೆ ಎಂದವರು ಹೇಳಿದರು.

ಇ.ಡಿ.ಐ., ಇಂಡಿಯಾದ ಪ್ರಾಜೆಕ್ಟ್ ಆಫೀಸರ್‌ ಯಶಸ್ವೀ ನಾಗ್‌ ಮಾತನಾಡಿ, ಅಧ್ಯಾಪಕರು ತಮ್ಮ ಸಾಮರ್ಥ್ಯವನ್ನು  ಕೇಂದ್ರೀಕರಿಸಿದರೆ ಭವ್ಯಭಾರತದ ನಿರ್ಮಾಣ ಸಾಧ್ಯ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನದ ಅಗತ್ಯವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ ಎನ್‌ ಚಿಪೂಣರ್‌ ಮಾತನಾಡಿ, ವಿದ್ಯಾರ್ಥಿಗಳ ಪ್ರಾಯೋಗಿಕ ಜ್ಞಾನವನ್ನೂ ಬೆಳೆಸುವಲ್ಲಿ ಕಾರ್ಯಾಗಾರ ಶ್ರಮವಹಿಸಿದೆ ಎಂದರು.

ಕಾರ್ಯಕ್ರಮದಲ್ಲಿ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್‌ ವಿಭಾಗ ಮುಖ್ಯಸ್ಥ ಡಾ| ಉದಯ ಕುಮಾರ್‌ ಜಿ., ಎಂ.ಸಿ.ಎ ವಿಭಾಗದ ಮುಖ್ಯಸ್ಥೆ ಡಾ| ಕರುಣಾ ಪಂಡಿತ್‌, ವಿವಿಧ  ವಿಭಾಗದ ಉಪನ್ಯಾಸಕರು ಹಾಗೂ ಸ್ಥಳೀಯ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕರು ಉಪಸ್ಥಿತರಿದ್ದರು.ವಿಭಾಗದ ಚೀಫ್‌ ಪ್ರಾಜೆಕ್ಟ್ ಲೀಡರ್‌ ಡಾ| ಬಾಲಸುಬ್ರಹ್ಮಣಿ ಆರ್‌. ಸ್ವಾಗತಿಸಿದರು. ಸಹಪ್ರಾಧ್ಯಾಪಕ ದೇವಿದಾಸ್‌ ಭಟ್‌ ಅತಿಥಿಗಳನ್ನು ಪರಿಚಯಿಸಿದರು. ವಿಭಾಗದ ಗೀತಾ ಕಾರ್ಯಕ್ರಮ ನಿರೂಪಿಸಿದರು.  ಸಹಪ್ರಾಧ್ಯಾಪಕ ಶಶಾಂಕ್‌ ಶೆಟ್ಟಿ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next