Advertisement

ಸಂಘಟನೆಗೆ ಉತ್ತಮ ಗುರಿ-ಉದ್ದೇಶ ಮುಖ್ಯ

07:13 AM Feb 01, 2019 | |

ಕಾಳಗಿ: ಸಂಘಟನೆಗಳು ಉತ್ತಮ ಗುರಿ, ಉದ್ದೇಶ ಇಟ್ಟುಕೊಳ್ಳಬೇಕು, ವೈಯಕ್ತಿಕ ಹಿತಾಸಕ್ತಿಗೆ ಸಂಘಟನೆ ಬಳಸಿಕೊಳ್ಳಬಾರದು, ಸಂಘಟನೆಗಳು ಮಹತ್ವದ ಪಾತ್ರ ವಹಿಸಿವೆ ಎಂದು ಎಸ್‌ಪಿ ಎನ್‌. ಶಶಿಕುಮಾರ ಹೇಳಿದರು.

Advertisement

ಪಟ್ಟಣದ ಬಂಜಾರಾ ಭವನದಲ್ಲಿ ಹಮ್ಮಿಕೊಂಡ ಭಾರತೀಯ ದಲಿತ ಪ್ಯಾಂಥರ್‌ ಸಂಘಟನೆ ನೂತನ ತಾಲೂಕು ಸಮಿತಿ ಹಾಗೂ ಕಾರ್ಯಾಲಯದ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತ ವೈವಿಧ್ಯಮಯವಾಗಿದ್ದು ಹಲವು ಜಾತಿ, ಮತ, ಪಂಥ ಧರ್ಮಗಳಿದ್ದರೂ ವಿವಿಧತೆಯಲ್ಲಿ ಏಕತೆ ಕಾಣುತ್ತೇವೆ. ಆದರೆ ಇಂದು ಏಕತಗೆ ಧಕ್ಕೆ ತರತಕ್ಕಂತಹ ಅನೇಕ ಘಟನೆಗಳು ನಡೆಯುತ್ತಿರುವುದು ಸರಿಯಲ್ಲ ಎಂದರು.

ಭಾರತೀಯ ದಲಿತ ಪ್ಯಾಂಥರ್‌ ರಾಜ್ಯಾಧ್ಯಕ್ಷ ಮಲ್ಲಪ್ಪ ಹೊಸಮನಿ ಮಾತನಾಡಿ, ಶೋಷಿತರ ರಕ್ಷಣೆ ದೃಷ್ಟಿಯಿಂದ ಭಾರತೀಯ ದಲಿತ ಪ್ಯಾಂಥರ್‌ ಸ್ಥಾಪನೆಯಾಗಿದೆ. ದೇಶದಲ್ಲಿ ಕೆಲವು ಕೋಮುವಾದಿಗಳು, ಕಿಡಿಗೇಡಿಗಳು ಸಂವಿಧಾನ ಕುರಿತು ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿರುವುದು ಖಂಡನೀಯ, ಸಂವಿಧಾನದ ರಕ್ಷಣೆಗೆ ನಾವೆಲ್ಲರೂ ಜಾತಿ ಬೇಧ, ಪಕ್ಷ ಮರೆತು ಹೋರಾಡಬೇಕು ಎಂದು ಹೇಳಿದರು.

ಭಾರತೀಯ ದಲಿತ ಪ್ಯಾಂಥರ್‌ ವಿಭಾಗೀಯ ಕಾರ್ಯದರ್ಶಿ ಕಲ್ಯಾಣರಾವ್‌ ಡೊಣ್ಣೂರ, ಜಿಲ್ಲಾಧ್ಯಕ್ಷ ರಮೇಶ ಚಿಮ್ಮಾಇದಲಾಯಿ, ತಾಲೂಕಾಧ್ಯಕ್ಷ ಕಾಶಿನಾಥ ಶೆಳ್ಳಗಿ, ವಿಧ್ಯಾರ್ಥಿ ಒಕ್ಕೂಟದ ಜಿಲ್ಲಾಧ್ಯಕ್ಷ ಗಂಗಾಧರ ಮಾಡಬೂಳ ಮಾತನಾಡಿದರು.

Advertisement

ಜಿಪಂ ಸದಸ್ಯ ರಾಜೇಶ ಗುತ್ತೇದಾರ, ಕಾಳಗಿ ಜಿ.ಪಂ ಸದಸ್ಯೆ ಸುರೇಖಾ ಎನ್‌. ಕೋರವಾರ, ತಾಪಂ ಸದಸ್ಯೆ ರತ್ನಮ್ಮ ಗುತ್ತೇದಾರ, ಗ್ರಾಪಂ ಅಧ್ಯಕ್ಷೆ ಶಿವಲೀಲಾ ವಿ. ಸಲಗೂರ, ಪ್ಯಾಂಥರ್‌ ಜಿಲ್ಲಾ ಕಾರ್ಯದರ್ಶಿ ಭರತ ಬುಳ್ಳಾ, ತಾಪಂ ಮಾಜಿ ಸದಸ್ಯ ಚಂದ್ರಕಾಂತ ಜಾಧವ್‌, ಶಾಮರಾವ್‌ ಮಲಘಾಣ, ಬಸವರಾಜ ಮೇಲಕೇರಿ, ಶಿವಕುಮಾರ ಚಿಂತಕೋಟಿ, ಬಾಬು ಡೊಣ್ಣೂರ, ಗಣಪತಿ ಪಸ್ತಾಪುರ, ಅಂಬರೀಶ ಕಮಕನೊರ ಇತರರು ಇದ್ದರು. ಪ್ರದೀಪ ಡೊಣ್ಣೂರ ಸ್ವಾಗತಿಸಿದರು, ಜೈಭೀಮ ಹೋಳ್ಕರ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next