ಗ್ರಾಮೀಣ ಬದುಕು ಅಂದ ಕ್ಷಣ ನೆನಪಾಗುವುದೇ ಅಲ್ಲಿನ ಪ್ರಕೃತಿ. ಆ ಸ್ವಚ್ಛ ಗಾಳಿ, ನೀರು, ಹುಲ್ಲು, ಹಚ್ಚ ಹಸಿರಿನಿಂದ ಕೂಡಿದ ವಾತಾವರಣ. ಇದೆಲ್ಲವು ಗ್ರಾಮೀಣ ಬದುಕಿನಲ್ಲಿ ಬರುತ್ತದೆ ಹಾಗೂ ಗದ್ದಲ ಜನರ ಓಡಾಟ ಮಕ್ಕಳ ಆಟಗಳು ಹಾಗೂ ಖುಷಿಯ ವಾತಾವರಣ. ಗ್ರಾಮೀಣ ಜನರ ಆಚರಣೆಗಳು ಪದ್ಧತಿ ಹಾಗೂ ದೇವರ ಮೇಲೆ ಅಪಾರವಾದ ಭಕ್ತಿ ಹೀಗೆ ಹಲವಾರು ವಿಷಯಗಳಿವೆ. ಗ್ರಾಮೀಣ ಬದುಕು ಎಂಬುದು ಒಂದು ಸುಂದರವಾದ ಪುಸ್ತಕವಿದ್ದಂತೆ. ಆ ಪುಸ್ತಕದಲ್ಲಿ ಕಷ್ಟ, ಸುಖ ಈ ಎರಡು ಅಂಶಗಳು ಇವೆ.
ಒಂದು ಗಾದೆ ಇದೆ, ಹಳ್ಳಿಯಿಂದ ದಿಲ್ಲಿಯವರೆಗೆ ಅಂತ. ಆದರೆ ಇದು ಕೆಲವರಿಗೆ ಗೊತ್ತಿಲ್ಲದ ವಿಷಯವಾಗಿದೆ. ಇದು ನನ್ನ ಅನಿಸಿಕೆ. ಇಲ್ಲಿ ವಾಸಿಸುವ ಜನರ ಮನೆ ಮುಂದೆ ಸುಂದರವಾದ ಅಂಗಳ, ಆ ಅಂಗಳಕ್ಕೆ ಸಗಣಿ ಸಾರಿಸಿ, ಅದರ ಮುಂದೆ ರಂಗೋಲಿ ಇದು ಮನೆಯ ಸೊಬಗನ್ನು ಹೆಚ್ಚು ಮಾಡಿದೆ.
ಗ್ರಾಮೀಣ ಬದುಕಿನಲ್ಲಿ ಆ ಸುಂದರವಾದ ಪ್ರಕೃತಿಯ ಬೆಳಿಗ್ಗೆ ಎದ್ದಾಗ ಪಕ್ಷಿಗಳ ಕಲರವ ಮನಸ್ಸನ್ನು ಖುಷಿಗೊಳಿಸುತ್ತದೆ, ಹಾಗೆಯೇ ಹಲವಾರು
ಗ್ರಾಮೀಣ ಪ್ರದೇಶಗಳಲ್ಲಿ ಕಂಬಳ, ಕೋಳಿಯಾಂಕ, ಲಗೋರಿ, ಗಾಜಿನ ಬಳೆ, ಮರಕೋತಿಯಾಟ, ಕಣ್ಣಮುಚ್ಚಾಲೆ, ಸೊಪ್ಪು ಆಟ ಇಂತಹ ಹಲವಾರು ಕ್ರೀಡೆ ಕಲೆಗಳೊಂದಿಗೆ ಖುಷಿಯ ವಾತಾವರಣ ಸೃಷ್ಟಿ ಮಾಡಿದೆ.
ಇನ್ನೊಂದು ವಿಶೇಷ ಏನೆಂದರೆ, ಹಿರಿಯರ ಕಟ್ಟೆ ಇದು ಗ್ರಾಮೀಣ ಪ್ರದೇಶದಲ್ಲಿ ಬದುಕುವ ಜನರ ವಿಶೇಷ 50 ವರ್ಷದಿಂದ ಹಿಡಿದು 85 ವರ್ಷದವರೆಗಿನವರು ಆ ಕಟ್ಟೆಯ ಮೇಲೆ ಕುಳಿತು ಮಾತಾಡಿ ಹರಟೆ ಹೊಡೆದು ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಾರೆ. ಅದು ಅವರ ಮನಸ್ಸಿಗೆ ತುಂಬ ಖುಷಿ ಕೊಡುತ್ತದೆ, ಮಹಿಳೆಯರು ಧಾರಾವಾಹಿ ನೋಡುವುದರಲ್ಲಿಯೇ ಮುಳುಗಿ ಹೋಗುತ್ತಾರೆ, ತಲೆ ಕೆಡಿಸುವ ಒಗ್ಗಟ್ಟು. ಗ್ರಾಮೀಣ ಪ್ರದೇಶದಲ್ಲಿ ಬದುಕುತ್ತಿರುವ ಜನರಿಗೆ ದೇವರ ಮೇಲೆ ತುಂಬ ಭಕ್ತಿ, ರೂಢಿ ಸಂಪ್ರದಾಯಗಳಿಗೆ ಹೆಚ್ಚು ನಂಬಿಕೆ.
ಪ್ರಾಣಿ, ಪಕ್ಷಿಗಳ ಮೇಲೆ ಅಗಾಧ ಪ್ರೀತಿ. ಆದರೆ ಅಲ್ಲಿ ಬದುಕುವ ಜನರರಷ್ಟು ಕಷ್ಟ ಪಡುವರು ಯಾರು ಇಲ್ಲ, ಯಾಕೆ ಅಂದರೆ ಯಾವ ವಿಷಯವಾಗಲಿ ಎಲ್ಲದರಲ್ಲೂ ಸುಖ -ದುಃಖ, ಸಿಹಿ -ಕಹಿ ಇದ್ದೆ ಇರುತ್ತೆ. ನನ್ನ ಪ್ರಕಾರ ಗ್ರಾಮೀಣ ಬದುಕು ಒಂದು ಸ್ವಚ್ಛ ವಾದ ಬದುಕು ಆಗಿದೆ ಕಷ್ಟ, ನಷ್ಟ, ಸುಖ, ದುಃಖ ಇದ್ದರೆ ಅದೇ ಜೀವನ..
ಅಂಕಿತ ದೇವಾಡಿಗ
ಎಂ. ಪಿ. ಎಂ. ಸರಕಾರಿ
ಪ್ರಥಮ ದರ್ಜೆ ಕಾಲೇಜು,
ಕಾರ್ಕಳ.