Advertisement

ಚಿಂದಿ ಆಯುವ ಹುಡುಗಿಯೊಬ್ಬಳ ಸಾಧನೆ ಕಥೆ

09:57 AM Feb 06, 2020 | Lakshmi GovindaRaj |

ದಿನ ಕಳೆದಂತೆ ಮಕ್ಕಳ ಸಿನಿಮಾಗಳ ಸಂಖ್ಯೆ ಕೂಡ ಮೆಲ್ಲನೆ ಹೆಚ್ಚುತ್ತಲೇ ಹೋಗುತ್ತೆ. ಅಂತಹ ಮಕ್ಕಳ ಚಿತ್ರಗಳ ಸಾಲಿಗೆ ಈಗ “ಪಾರು’ ಎಂಬ ಸಿನಿಮಾ ಕೂಡ ಸೇರಿದೆ. ಇದು ಬಹುತೇಕ ಹೊಸಬರೇ ಸೇರಿ ಮಾಡಿದ ಚಿತ್ರ. ಈ ಚಿತ್ರದ ಮೂಲಕ ಹನ್ಮಂತ್‌ ಪೂಜಾರ್‌ ನಿರ್ದೇಶಕರಾಗಿದ್ದಾರೆ. “ಪಾರು’ ಚಿತ್ರದಲ್ಲಿ “ಬದುಕು ನಾವು ಅಂದುಕೊಂಡಂತೆ ನಡೆಯಲ್ಲ. ನಾವೇ ಅದಕ್ಕೆ ಹೊಂದಿಕೊಂಡು ಹೋಗಬೇಕು.

Advertisement

ಪ್ರಯತ್ನ ಪಟ್ಟರೆ, ಜಗತ್ತಿನಲ್ಲಿ ಎಲ್ಲವನ್ನೂ ಸಾಧಿಸಲು ಸಾಧ್ಯವಿದೆ’ ಎಂಬ ಒನ್‌ಲೈನ್‌ ಕಥೆ ಇಲ್ಲಿದೆ. ಚಿತ್ರದ ಬಾಲಕಿಯೊಬ್ಬಳು ಸಾಧನೆ ಮಾಡಬೇಕು ಅಂತ ಹೊರಟಾಗ, ಆಕೆಗೆ ಏನೆಲ್ಲಾ ಅಡೆತಡೆಗಳು ಎದುರಾಗುತ್ತವೆ. ಆ ನಂತರ, ಅದನ್ನೆಲ್ಲಾ ಮೀರಿ ಆಕೆ ಹೇಗೆ ಬೆಳೆಯುತ್ತಾಳೆ ಎಂಬುದು ಚಿತ್ರದ ಕಥೆಯ ಸಾರಾಂಶ. ಚಿಂದಿ ಆಯುವ ಬಾಲಿಯೊಬ್ಬಳು ಹೇಗೆ ವಿದ್ಯಾಭ್ಯಾಸ ಮಾಡಿ, ಉನ್ನತ ಮಟ್ಟದ ಅಧಿಕಾರಿ ಆಗುತ್ತಾಳೆ ಅನ್ನೋದೇ ಚಿತ್ರದ ಕಥಾವಸ್ತು.

ಪ್ರಸ್ತುತ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳನ್ನು ಚೆನ್ನಾಗಿ ಓದಿಸುವ ಆಸೆ ಇಟ್ಟುಕೊಳ್ಳುತ್ತಾರೆ. ಅಂತಹ ಪೋಷಕರಿಗೆ ಇಲ್ಲೊಂದು ಸಂದೇಶವೂ ಇದೆ. ಬದುಕಿನಲ್ಲಿ ಎಲ್ಲವೂ ಮುಗಿದು ಹೋಯ್ತು ಅಂದುಕೊಳ್ಳುವ ಜನರಿಗೂ ಇಲ್ಲೊಂದು ಪ್ರೇರಣೆ ಆಗುವಂತಹ ವಿಷಯವಿದೆ. ಅದನ್ನು ಸಿನಿಮಾದಲ್ಲೇ ನೋಡಬೇಕೆಂಬುದು ನಿರ್ದೇಶಕ ಹನ್ಮಂತ್‌ ಪೂಜಾರ್‌ ಮಾತು.

ಬಹುತೇಕ ದಾವಣಗೆರೆ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿ ಬೇಬಿ ಹಿತೈಷಿ ಪೂಜಾರ್‌, ಮಾ. ಮೈಲಾರಿ ಪೂಜಾರ್‌, ಮಾ.ಅಚ್ಯುತ್‌, ಮಾ.ಪ್ರಸಾದ್‌ ಹಾಗು ಪೋಷಕ ಕಲಾವಿದರಾದ ಪ್ರೇಮ್‌ ಕುಮಾರ್‌, ಶಿವಕಾರ್ತಿಕ್‌ ನಿಜಗುಣ ಶಿವಯೋಗಿ, ಹಾಲೇಶ್‌, ಮಾದಪ್ಪ, ಗುರು ನೇಸೂರ ಇತರರು ನಟಿಸಿದ್ದಾರೆ. ಚಿತ್ರಕ್ಕೆ ಎ.ಟಿ.ರವೀಶ್‌ ಸಂಗೀತವಿದೆ. ಶಿವಕುಮಾರ ಸ್ವಾಮಿ ಸಂಕಲನ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next