Advertisement

ರಾಮ ಮಂದಿರಕ್ಕೆ  ಕೇಂದ್ರ ಸಚಿವರಿಂದ ನಿಧಿ ಸಂಗ್ರಹ

04:05 PM Jan 16, 2021 | Team Udayavani |

ಧಾರವಾಡ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ನಿಧಿ ಸಮರ್ಪಣಾ ಅಭಿಯಾನದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಪಾಲ್ಗೊಂಡು ನಿಧಿ ಸಂಗ್ರಹಿಸಿದರು.

Advertisement

ನಗರದಲ್ಲಿ ವಿವಿಧ ಗಣ್ಯರನ್ನು ಭೇಟಿಯಾಗಿ ನಿಧಿ ಸಂಗ್ರಹಿಸಿದ ಸಚಿವರಿಗೆ, ಕ್ರಿಶ್ಚಿಯನ್‌ ಸಮುದಾಯದ ಸ್ಟೀವ್‌ ಅಬ್ರಹಾಂ 1 ಲಕ್ಷ ರೂ. ಚೆಕ್‌, ರಾಜ್ಯ ನೌಕರ ಸಂಘದ ಅಧ್ಯಕ್ಷ ಬಸವರಾಜ ಗುರಿಕಾರ 1 ಲಕ್ಷ ರೂ., ಮಧುಸೂಧನ ಕುಲಕರ್ಣಿ 50000 ರೂ., ರವಿ ದೇಶಪಾಂಡೆ 50000 ರೂ. ಚೆಕ್‌ ಹಸ್ತಾಂತರಿಸಿದರು. ಈ ವೇಳೆ   ಮಾತನಾಡಿದ ಸಚಿವ ಜೋಶಿ, ಶ್ರೀ ರಾಮ ಭಾರತದ ಅಸ್ಮಿತೆ. ಎಲ್ಲಾ ಧರ್ಮದ ಜನ ಒಗ್ಗೂಡಿ ಭವ್ಯವಾದ ಮಂದಿರ ನಿರ್ಮಾಣ ಮಾಡಬೇಕು. ಎಲ್ಲಾ ಜನತೆ ಈ ಭವ್ಯ ಮಂದಿರ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು.

ಇದನ್ನೂ ಓದಿ:ವರ್ಷದಲ್ಲಿ ಏಕಸ್‌-ಯುಕ್ಲೆಸ್‌ ಕೈಗಾರಿಕೆ ಕಾರ್ಯಾರಂಭ: ಶೆಟ್ಟರ್

ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಡಾ|ಎಸ್‌.ಆರ್‌. ರಾಮನಗೌಡರ, ಈರೇಶ ಅಂಚಟಗೇರಿ, ಪೂರ್ಣಾ ಪಾಟೀಲ, ವಿಜಯಾನಂದ ಶೆಟ್ಟಿ, ಸಿ.ಎಸ್‌.ಪಾಟೀಲ, ನೌಕರ ಸಂಘದ ಜಿಲ್ಲಾಧ್ಯಕ್ಷ ಸಿದ್ದನಗೌಡ್ರು, ತವಣಪ್ಪ ಅಷ್ಟಗಿ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next